STORYMIRROR

Priya Pranesh Haridas ಪ್ರಿಯಾ ಪ್ರಾಣೇಶ್ ಹರಿದಾಸ್

Classics Inspirational

3  

Priya Pranesh Haridas ಪ್ರಿಯಾ ಪ್ರಾಣೇಶ್ ಹರಿದಾಸ್

Classics Inspirational

ನವರಾತ್ರಿಯ ನವದುರ್ಗೇಯರು

ನವರಾತ್ರಿಯ ನವದುರ್ಗೇಯರು

1 min
232

  

ಕೈ ಮುಗಿಯುವೆ ದೇವಿ ಕಾಪಾಡಮ್ಮಾ

ನಮಗೆ ಭಕ್ತಿ ಕೊಟ್ಟು ಹರಸಮ್ಮಾ ll ಪ ll


ಮೊದಲನೇ ದಿನದಿ ಶೈಲ ಪುತ್ರಿಯಲಿ ಬಂದು

ಹಿಂದಿನ ಜನ್ಮದಿ ದಕ್ಷನ ಮಗಳಾಗಿ ಜನಿಸಿದಿ

ರುದ್ರನ ಸತಿಯಾಗಿ ಪ್ರೀತಿಯಲಿ ತೌರಿಗೆ ಬಂದೆ

ಪತಿಯ ಅವಮಾನ ನೋಡಿ ಅಗ್ನಿಯಲಿ ಹಾರಿದೆ ll 1 ll


ಎರಡನೇ ದಿನದಿ ಬ್ರಹ್ಮಚಾರಿಣಿಯಾಗಿರಲು

ಪರ್ವತರಾಜನ ಮಗಳು ಶಿವನ ಸತಿಯಾಗಿರಲು

ಉಗ್ರ ತಪಚಾರಿಣಿಯಾಗಿ ಅಪರ್ಣೆಯಾದವಳು

ಬ್ರಹ್ಮ ಕೊಟ್ಟ ವರ ಶಿವನು ಬರುವ ಚಂದ್ರಮೌಳಿ ll2ll


ಮೂರನೇ ದಿನದಿ ಚಂದ್ರಘಂಟೆಯಾಗಿ ಹುಟ್ಟುತ

ಶಿಷ್ಟರ ರಕ್ಷಿಸಿ ದುಷ್ಟರ ದಮನ ಮಾಡುತ

ಸಿಂಹವನು ಏರಿ ಘಂಟೆಯ ನಾದ ಮೊಳಗಿಸುತ

ದಶ ದಿಕ್ಕಿನಲಿ ಜಯಭೇರಿ ಬಾರಿಸುತ ll3ll


ನಾಲ್ಕನೇ ದಿನದಿ ತಾಯಿ ಕೂಷ್ಮಾಂಡೆಯಾಗಿ ಭೂಮಿ ಸೃಷ್ಟಿಸಿ ಆದಿಸ್ವರೂಪಿಣಿ ಆದಿಶಕ್ತಿಯಾಗಿ

ಸೂರ್ಯನ ಪ್ರಭೆಯಾಗಿ ಭಕ್ತರ ಸಿರಿಯಾಗಿ

ಆದಿವ್ಯಾದಿಗಳ ಮುಕ್ತಿಗೆ ಬಲಿಯ ಕುಂಬಳಕಾಯಿ ll4ll


ಐದನೇ ದಿನದಿ ಸ್ಕಂದ ಮಾತೆಯಾಗಿ

ಮಾಯಾ ಭಂಧಗಳ ಮುಕ್ತಿದಾತೆಯಾಗಿ

ಭಾವಸಾಗರದ ದುಃಖಗಳ ಕಳೆಯುತ

ಎಡ ಕಮಲ ಬಲ ವರಮುದ್ರ ಕೊಡುತ ll5ll


ಆರನೇ ದಿನದಿ ಕಾತ್ಯಾಯನಿಯಾಗಿ

ಮಹಿಷಾಸುರನ ವಧೆಯ ದಾನವಾಂತಕಿಯಾಗಿ

ಅರ್ಥ,ಧರ್ಮ, ಕಾಮ,ಮೋಕ್ಷದ ತಾಯಿಯಾಗಿ

ಅಹಂಕಾರದಿ ಮೆರೆವ ಜನರ ಶಿಕ್ಷಕಿಯಾಗಿ ll6ll


ಏಳನೇ ದಿನದಿ ಭಯಂಕರ ಕಾಲರಾತ್ರಿಯಾಗಿ 

ದುಷ್ಟರ ಸ್ವಪ್ನದಿ ಕೆಡಿಸುತ ಭಯಂಕಾರಣಿಯಾಗಿ

ನೋಡಿ ಓಡಿ ಹೋಗುವವು ದಾರಿದ್ರ್ಯಗಳು

ಸಜ್ಜನರ ಕಾಯುವ ಅಭಯಂಕರಿಯಾಗಿ ll7ll


ಎಂಟನೇ ದಿನದಿ ಮಹಾಗೌರಿಯಾಗಿ

ಶ್ವೇತವರ್ಣದ ರುದ್ರನ ಸತಿಯಾಗಿ

ಅರ್ತನಾದಕೆ ಓ ಗೊಡುವ ತಾಯಿಯಾಗಿ

ಮನವ ನಿಗ್ರಹಿಸಿ ಸಾಧನೆ ಗುರುಮಾತೆಯಾಗಿ ll8ll


ಒಂಭತ್ತನೇ ದಿನದಿ ಸಿದ್ದಿರಾತ್ರಿಯಾಗಿ

ಕಾಮನೆಗಳ ಮೆಟ್ಟಿ ಮಗುವ ಜನನಿಯಾಗಿ

ವಿಷಯ ಭೋಗವ ಶೂನ್ಯಗೊಳಿಸಿ

ಸರ್ವವನ್ನು ಕೊಡು "ಪ್ರಿಯಕೃಷ್ಣ"ನ ಸರ್ವೇಶ್ವರಿಯಾಗಿ ll9ll


    


Rate this content
Log in

Similar kannada poem from Classics