ನೃತ್ಯ
ನೃತ್ಯ
ಗೆಜ್ಜೆಯೊಂದಿಗೆ ಹೆಜ್ಜೆಹಾಕಿ ಮಾಡಿದರೆ ನೃತ್ಯ
ಮನಸ್ಸಿಗೆ ಕೊಡುವುದು ಸಂತೋಷ ಸತ್ಯ
ಇದು ನಮ್ಮ ಸಂಸ್ಕೃತಿಯ ಪ್ರತೀಕ
ತನ್ಮಯವಾಗಿ ನೋಡುತ್ತಿದ್ದರೆ ಮೈಮನವಾಗುವುದು ಪುಳಕ
ನೃತ್ಯದಲ್ಲಿರುವುದು ಹಲವಾರು ವಿಧ
ಇದರಲ್ಲಿ ಇಲ್ಲ ಯಾವುದೇ ಬೇಧ
ಭಾವನೆಗಳ ಪ್ರತಿರೂಪದ ಕಲೆ
ತಿಳಿದಿರಬೇಕು ಇದರ ಬೆಲೆ
ಸಂತೋಷದಿಂದ ಮಾಡುವ ನರ್ತನ
ಇಳಿಯುವುದು ಮನಸ್ಸಿನ ದುಮ್ಮಾನ
ನಟರಾಜನ ನೃತ್ಯ ನೋಡಲು ಬೇಕು ಪುಣ್ಯ
ಮೂಡಿದರೆ ಭಕ್ತಿಭಾವ ಆದೇವು ಧನ್ಯ
