STORYMIRROR

Pramodh S

Romance

3  

Pramodh S

Romance

ನಿನ್ನಂಥ ಹುಡುಗಿ

ನಿನ್ನಂಥ ಹುಡುಗಿ

1 min
11.7K

ಸೂರ್ಯನ ಕಿರಣದ ನಿನ್ನ ರೂಪ

ಚಂದ್ರನ ಬೆಳದಿಂಗಳ ಪ್ರತಿರೂಪ

ನಿನ್ನಂಥ ಹುಡುಗಿ ಸಿಗುವುದೇ ಅಪರೂಪ.

ನನಗೆ ನಿನ್ನಂಥ ಹುಡುಗಿ ಸಿಗುವುದೇ ಅಪರೂಪ


ಕೇಳೆನು ಬೇರೇನನು ನಿನ್ನ ಪ್ರೀತಿಯ ಹೊರತು

ಪ್ರತಿ ಕ್ಷಣವು ಪ್ರತಿ ಕಣವು ಹೋಗಿದೆ ನಿನ್ನಲ್ಲಿ ಬೆರೆತು

ಪ್ರೀತಿಯ ಸ್ಪೂರ್ತಿಯ ತದರೂಪ

ಬಾಳಿನ ಜ್ಯೋತಿಯ ಸ್ವರೂಪ

ನಿನ್ನಂಥ ಹುಡುಗಿ ಸಿಗುವುದೇ ಅಪರೂಪ

ನನಗೆ ನಿನ್ನಂಥ ಹುಡುಗಿ ಸಿಗುವುದೇ ಅಪರೂಪ


ಸೆರೆಯಾದೆನು ನಿನ್ನ ಪ್ರೀತಿಗೆ ನಾನಿಂದು

ಮರೆಯಾದೆನು ನನ್ನಿಂದಲೇ ನಾನಿಂದು

ಕನಸಿನ ಪರಿಕಲ್ಪನೆಯ ಆಲಾಪ

ಹೆಚ್ಚಾಯಿತು ನಿನ್ನಿಂದಲೇ ಸಲ್ಲಾಪ

ನಿನ್ನಂಥ ಹುಡುಗಿ ಸಿಗುವುದೇ ಅಪರೂಪ

ನನಗೆ ನಿನ್ನಂಥ ಹುಡುಗಿ ಸಿಗುವುದೇ ಅಪರೂಪ


ಸೂರ್ಯನ ಕಿರಣದ ನಿನ್ನ ರೂಪ

ಚಂದ್ರನ ಬೆಳದಿಂಗಳ ಪ್ರತಿರೂಪ

ನಿನ್ನಂಥ ಹುಡುಗಿ ಸಿಗುವುದೇ ಅಪರೂಪ

ನನಗೆ ನಿನ್ನಂಥ ಹುಡುಗಿ ಸಿಗುವುದೇ ಅಪರೂಪ


Rate this content
Log in

Similar kannada poem from Romance