STORYMIRROR

StoryMirror Feed

Tragedy Drama Classics

2  

StoryMirror Feed

Tragedy Drama Classics

ನೀ ಹಿಂಗ ನೋಡಬ್ಯಾಡ ನನ್ನ...

ನೀ ಹಿಂಗ ನೋಡಬ್ಯಾಡ ನನ್ನ...

1 min
11.8K



ನೀ ಹಿಂಗ ನೋಡಬ್ಯಾಡ ನನ್ನ, ನೀ ಹಿಂಗ ನೋಡಿದರೆ ನನ್ನ,

ತಿರುಗಿ ನಾ ಹ್ಯಾಂಗ ನೋಡಲೇ ನಿನ್ನ?

ಸಂಸಾರ ಸಾಗರದಾಗ ಲೆಕ್ಕವಿರದಷ್ಟು ದುಃಖದ ಬಂಡಿ,

ನಾ ಬಲ್ಲೆ ನನಗೆ ಗೊತ್ತಿಲ್ಲದಿದ್ದರೂ, ಎಲ್ಲಿ ಆಚೆಯ ದಂಡಿ

ಮಲಗಿರುವ ಕೂಸು ಮಲಗಿರಲಿ ಅಲ್ಲಿ, ಮುಂದಿನದು ದೇವರ ಚಿತ್ತ,

ನಾ ತಡಿಲಾರೆ ಅದು ಯಾಕ ನೋಡತೀ, ಮತ್ತ ಮತ್ತ ನೀ ಇತ್ತ

ತಂಬಳ ಹಾಕದ ತುಂಬಾ ಕೆಂಪು ಗಿಣಿ ಗದಕ ಹಣ್ಣಿನ ಹಂಗ,

ಇದ್ದಂತ ತುಟಿಯ ಬಣ್ಣೆತ್ತ ಹಾರಿತು, ಯಾವ ಘಳಿಗೆ ಹಿಂಗ?

ಈ ಗತ್ತಗಲ್ಲ ಹನಿ ಕಣ್ಣು ಕಂಡು, ಮಾರಿಗೆ ಮಾರಿಯ ರೀತಿ,

ಸವನ ತನ್ನ ಕೈ ಸವರಿತಿಲ್ಲಿ, ಬಂತೆನಗ ಇಲ್ಲದ ಭೀತಿ,

ನೀ ಹಿಂಗ ನೋಡ

ಬ್ಯಾಡ ನನ್ನ

ಇಬ್ಬನಿ ತೊಳೆದರು ಹಾಲು ಮೆಟ್ಟಿದ ಕವಲಿ ಕಾಂತಿಯ ಹಣ್ಣು

ಹೊಳೆ ಹೊಳೆವ ಹಂಗ ಕಣ್ಣಿರುವ ಹೆಣ್ಣ, ಹೇಳು ನಿನ್ನವೇನ ಈ ಕಣ್ಣು,

ದಿಗಿಲಾಗಿ ಅನ್ನತದ ಜೀವ ನಿನ್ನ ಕಣ್ಣಾರೆ ಕಂಡು ಒಮ್ಮಿಗಿಲ,

ಹುಣ್ಣಿಮಿ ಚಂದಿರನ ಹೆಣ ಬಂತೋ ಮುಗಿಲಾಗ ತೆಲತಾ ಹಗಲ,

ನಿನ್ನ ಕಣ್ಣಿನಾಗ ಕಾಲೂರಿ ಮಳೆಯೂ, ನಡ ನಡಕ ಹುಚ್ಚು ನಗಿ ಯಾಕ?

ಹನಿ ಒಡೆಯಲಿಕ್ಕೆ ಬಂದಂತ ಮೋಡ ತಡದಂಗ ಗಾಳಿಯ ನೆವಕ,

ಅತ್ತರೆ ಅತ್ತು ಬಿಡು ಹೊನಲು ಬರಲಿ, ನಾನಾಕ ಮರಸತಿ ದುಃಖ,

ಎದೆ ಬಿರಿಸಿ ಕೆಡವು ಬಿರಿಗಣ್ಣು ಬ್ಯಾಡ ತುಟಿ ಕಚ್ಚಿ ಹಿಡಿಯದಿರು ಬಿಕ್ಕ,

ನೀ ಹಿಂಗ ನೋಡಬ್ಯಾಡ ನನ್ನ, ನೀ ಹಿಂಗ ನೋಡಿದರ ನನ್ನ,

ತಿರುಗಿ ನಾ ಹೆಂಗ ನೋಡಲೇ ನಿನ್ನ?



Rate this content
Log in

Similar kannada poem from Tragedy