ಜನ್ಮದಿನ
ಜನ್ಮದಿನ
ಮಾತೆಯುದರದಿ ಜತನದಿಂದಲಿ
ರೂಪುದಳೆದಿಹ ಜೀವವವು
ಇಳೆಗೆ ಬಂದಿಹ ದಿನವೇ
ನಮ್ಮಯ ಜನುಮ ದಿನವದು ॥
ಕರುಳಕುಡಿಯ ಕಂಡ ಮಾತೆಯ
ಜನುಮ ಸಾರ್ಥಕವೆನಿಸಿತು
ತನ್ನ ಕಂದನ ಬದುಕ ನಡೆಗೆ
ತಾಯ ಬದುಕದು ಮೀಸಲು॥
ಬದುಕ ಬೇಸರ ಮರೆತ ಮನವದು
ತುಂಬಿ ಹರಸಿತು ಕಂದನ
ಜನುಮ ದಿನದ ಹರುಷವು
ತುಂಬಿತುಳುಕಲಿ ಅನುದಿನ॥
