ಜೀವನದ ಹಾದಿ
ಜೀವನದ ಹಾದಿ
ಬೆಳೆಸುತ ಬೆಳೆಸೋಣ ಎಲ್ಲರನು
ಬೆರೆಯುತ ಹಂಚೋಣ ನಂಬಿಕೆಯನು
ಗಾಳಿಗೆ ಇಲ್ಲ ಯಾರಲ್ಲೂ ಭೇದ ಭಾವ
ನೀರಿಗೆ ಇಲ್ಲ ಯಾವತ್ತೂ ತಾರತಮ್ಯ
ಪ್ರಕೃತಿ ತೋರುವ ದಯೆಯನ್ನು
ಮನುಜರಾಗಿ ಪಾಲಿಸೋಣ ನಾವಿನ್ನು
ಬಡತನ, ಹಸಿವು ಬಯಸಿ ಬಂದದ್ದಲ್ಲ
ಇದ್ದದ್ದನ್ನು ಕೊಟ್ಟು ನಗಿಸೋಣ ಎಲ್ಲರನ್ನು
ಹುಟ್ಟು ಸಾವು ಯಾರಿಗೆ ಎಂದೊ
ನಡುವಿನ ಜೀವನದ ನಿರ್ಧಾರ ನಮ್ಮದೇ
ಹೀಗೆ ಇರಬೇಕು ಹಾಗೆ ನಡೆಯಬೇಕೆಂದೇನು ಇಲ್ಲ
ಹೇಗೆ ಬದುಕು ಸಾಗಿಸಿದರೆ ಏನು ಲಾಭ?
ಸಂತಸ ಕೊಟ್ಟು ಸಂಭ್ರಮ ಪಡೋಣ
ಸಾರ್ಥಕತೆಯಲಿ ನೆಮ್ಮದಿ ಕಾಣೋಣ
