Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Arjun Maurya

Classics Inspirational Children

3  

Arjun Maurya

Classics Inspirational Children

ಹೆಜ್ಜೆಗುರುತು

ಹೆಜ್ಜೆಗುರುತು

1 min
138


ಸಾಮಾನ್ಯ ಹುಲಿಹೆಜ್ಜೆಗಳಲ್ಲ ಅಪ್ಪನ ಹೆಜ್ಜೆಗುರುತುಗಳವು | ಊರಿದೆಜ್ಜೆಯ ಮೇಲೆಜ್ಜೆಯಿರಿಸಿ

ಅನುಸರಿಸಿ ನಡೆಯುವುದು ದುಸ್ತರ |

ದಿಟ್ಟ ಹೆಜ್ಜೆಗಳಲ್ಲವೇ?..

ಸುಲಭಕ್ಕೆ ಸಿಗುವ ಹೆಜ್ಜೆಯಲ್ಲಿ

ದಾಪುಗಾಲು ಹಾಕಬೇಕಿತ್ತು ನಾನು

ನೀನು ಮತ್ತು ಅವನು..!

ಹೆಜ್ಜೆಯದು

ಆಳ ಹಾಗೂ ವಿಶಾಲ

ಕಲ್ಲಲ್ಲೇ ಕಲ್ಲಾದ ಹೆಜ್ಜೆಯದು ||

ಮೂಟೆಭಾರ ಹೊತ್ತ

ಬರಿಗಾಲ ಹೆಜ್ಜೆಯವು |

ಮೀಸೆ ತಿರುವಿದ ಗುರುತಿದೆ

ಹಸಿವನ್ನೂ ಮೀರಿದ ಛಲದಂಕವಿದೆ ||

ಕಣ್ಣುಗಳಾಳಕ್ಕಿಳಿದಷ್ಟೂ

ಗಟ್ಟಿಯಾದ ಹೆಜ್ಜೆಗಳವು |

ಬಿಸಿಲ ತಾಪದಲ್ಲಿ ತಲೆತಿರುಗುತ್ತಿದ್ದರೂ ಬೀಳದಂತೆ ತಡೆದ ಹೆಜ್ಜೆಗಳವು |


Rate this content
Log in

Similar kannada poem from Classics