STORYMIRROR

Vijaya Bharathi

Classics Inspirational Others

2  

Vijaya Bharathi

Classics Inspirational Others

ಅಳಿಲು ಸೇವೆ

ಅಳಿಲು ಸೇವೆ

1 min
145

ನೀರೊಳು ಮುಳುಗುತ

ಮರಳೊಳು ಹೊರಳುತ

ಶರಧಿಯ ಸೇತುವೆ ಸೇವಕನೇ

ಮರಳಿನ ಸೇವೆಯ 

ಕರುಣದಿ ಮೆಚ್ಚುತ

ಬೆರಳೊಳು ಹರಸಿದ ದಾಶರಥೀ


ವಾಮನ ಮೂರ್ತಿಯ

ರಾಮನ ಸೇವೆಯು

ಅಮರವು ಎಂದಿಗು ಧರೆಯೊಳಗೇ

ಪಾಮರ ಮನುಜರೆ

ನೇಮದಿ ನೆನೆಯಿರೊ

ರಾಮನ ಭಕುತನ ಅಳಿಲ್ಸೇವೇ


ಕಿರಿದದು ಸೇವೆಯು

ಹಿರಿದದು ಶ್ರದ್ಧೆ ಯು

ಸಿರಿಯನು ನೋಡನು ರಘುವೀರಾ

ಅರಿತನು ಭಕುತಿಯ

ಹರಸುತ ಅಳಿಲನು

ಕರುಣದಿ ಹರಸಿದ ಕಾಕುಸ್ಥಾ


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Classics