STORYMIRROR

harshavardhan shroff

Inspirational

2  

harshavardhan shroff

Inspirational

ಒಂದು ಮಾತಿನ ಮಹತ್ವ

ಒಂದು ಮಾತಿನ ಮಹತ್ವ

1 min
180

(1989-90) ನಾನಾಗ ಬಿಜಾಪುರ ಗ್ರಾಮೀಣ ಬ್ಯಾಂಕಿನ ಕಿಲ್ಲಾ ಹೊಸಕೋಟಿ ಶಾಖಾಧಿಕಾರಿಯಾಗಿದ್ದೆ. ಒಂದು ದಿನ ನಮ್ಮ ಗ್ರಾಹಕರಾಗಿದ್ದ ಶ್ರೀ ಅಮೀನಸಾಬ ಬಣ್ಣೂರ ಅವರು ತಮ್ಮ ಮಗ ಮಕ್ತುಮ್ ಸಾಬ SSLC ಮುಗಿಸಿದ್ದು, ಆತನ ಮುಂದಿನ ವಿದ್ಯಾಭ್ಯಾಸದ ಬಗ್ಗೆ ಸಲಹೆ ಕೇಳಿದರು. ಎಲ್ಲರಿಗೆ ಹೇಳುವಂತೆ, " ಹುಡುಗ ಶಾಣ್ಯಾ ಅದಾನ. ಮುಂದ್ ಓದಸ್ರಿ" ಎಂದೆ. 

ನಂತರ ನನಗೆ ಅಲ್ಲಿಂದ ವರ್ಗವಾಯಿತು.


ಅಂದಾಜು ವರ್ಷದ ನಂತರ, ಮಕ್ತುಮ್ ಸಾಬನಿಂದ ಪತ್ರ ಬಂದಿತು- "ನೀವು ಹೇಳಿದ್ದಕ್ಕೆ ತಂದೆಯವರು TCH ಓದಿಸಿದರು. ಈಗ ನಾನು ಪ್ರಾಥಮಿಕ ಶಾಲೆಯೊಂದರಲ್ಲಿ ಶಿಕ್ಷಕನಾಗಿದ್ದೇನೆ" ಉತ್ತರವಾಗಿ ನಾನು, ಶಿಕ್ಷಕನ ಕರ್ತವ್ಯಗಳ ಬಗ್ಗೆ ಬರೆದು, ಪತ್ತೆ ಬರೆಯುವಾಗ ಎನ್ವಿಲಪ್ ಮೇಲೆ ಹೀಗೆ ಬರೆದೆ-

To,

M A Bannur

M A ಯಾವಾಗ?

ಸಾ:.............


ಇದಾಗಿ ಹಲವಾರು ವರ್ಷಗಳ ನಂತರ, ಮಕ್ತುಮ್ ಸಾಬನಿಂದ ಒಂದು ಪತ್ರ ಬಂದಿತು. ಅದರಲ್ಲಿ ನಾನು ಬರೆದ ಪತ್ರದ ಪ್ರತಿ, M A ಯಾವಾಗ? ಎಂದು ಬರೆದ ಪಾಕೀಟಿನ ಪ್ರತಿ, ಇವುಗಳ ಜೊತೆ ಆತನ M A ಮಾರ್ಕ್ಸಕಾರ್ಡಿನ ಪ್ರತಿ ಕಳಿಸಿದ್ದ!!!!

ನನಗೆ, ನಾನೇ MA ಮಾಡಿದಷ್ಟು ಹರ್ಷವಾಯಿತು!!!


ಒಂದು ಮಾತಿನಿಂದ ಜೀವನ ಹೇಗೆ ಬದಲಾಗ ಬಹುದು ಎಂಬುದಕ್ಕೆ ಇದು ಒಂದು ಸತ್ಯವಾದ ನಿದರ್ಶನ.



Rate this content
Log in

Similar kannada story from Inspirational