ವರ್ಷ ತಂದ ಹರ್ಷ
ವರ್ಷ ತಂದ ಹರ್ಷ
ಮುಂಗಾರು ಮಳೆ ಬಿಟ್ಟಿದೆ
ಹೊಲದಲ್ಲಿ ನೀರು ನಿಂತಿದೆ
ಸಸಿನೆಟ್ಟಿ ಮಾಡಬೇಕಾಗಿದೆ
ಆಳುಗಳು ಯಾರು ಸಿಗದಾಗಿದೆ
ಹೆಂಡತಿಯೇ ಸಸಿಯ ನೆಡಬೇಕಾದ ಪರಿಸ್ಥಿತಿ ಎದುರಾಗಿದೆ
ಊಟದ ಡಬ್ಬಿ ಖಾಲಿಯಾಗಿ ಮರದಲ್ಲಿ ನೇತಾಡುತ್ತಿದೆ
ಹಕ್ಕಿಗಳು ಗೂಡು ಸೇರುತ್ತಿದೆ
ಮೇಕೆ ಕುರಿ ಕೋಳಿಗಳು ಮನೆ ಕಡೆ ಹೆಜ್ಜೆ ಹಾಕುತ್ತಿವೆ
ಕೆಲಸವ ಮುಗಿಸಿ ಹಾರೆಯ ಹಿಡಿದು ನಾ ಮನೆಗೆ ತೆರಳುವೆ
ಬೆವರು ಹರಿಸಿ ಹೊಲವ ಉತ್ತಿ ಬಿತ್ತಿದ್ದರೆ ಬೆಳೆ
ಪರಿಶ್ರಮಕ್ಕೆ ಸಿಗುವುದು ಫಸಲು ನಾಳೆ
ಹೊಲ ಗದ್ದೆ ಗಳೇ ನಮ್ಮ ಉಸಿರು
ಭೂಮಿತಾಯಿಯೇ ಎಲ್ಲರ ತವರು
