ಒಳಗಣ್ಣು
ಒಳಗಣ್ಣು
ಕಣ್ಣೆರಡು ನೋಡುವುದು ನೋಟ
ಒಳಗಣ್ಣು ತೆರೆದರೆ ಕಾಣುವುದು ಜೀವನದಾಟ
ಬರಿಗಣ್ಣಿಗೆ ಕಾಣುವುದು ಜಗತ್ತಿನ ಆಕಾರ
ಒಳಗಣ್ಣು ತೆರೆದರೆ ಸತ್ಯದ ಸಾಕ್ಷಾತ್ಕಾರ
ಕಣ್ಣುಗಳು ಕಾಣುವುವು ಜಗದ ಛಾಯೆ
ಒಳಗಣ್ಣು ಅರಿಯುವುದು ಇದು ಮಾಯೆ
ಕಣ್ಣು ತೆರೆದೊಡೆ ಸ್ವಪ್ನ ಲೋಕಕೆ ಮುಕ್ತಿ
ಒಳಗಣ್ಣು ತೆರಯಲು ಬೇಕು ವಿರಕ್ತಿ
ಇಂದ್ರಿಯ ಸುಖವ ಮೀರುತ ಸಾಗಲಿ ಪಯಣ
ಒಳಗಣ್ಣು ತೆರೆಯುತ ಆಗಲಿ ಸತ್ಯದ ದರುಶನ
