STORYMIRROR

Mouna M

Classics Inspirational Others

4  

Mouna M

Classics Inspirational Others

ನೀನಾರಿಗಾದೆಯೋ ಎಲೈ ಮಾನವ

ನೀನಾರಿಗಾದೆಯೋ ಎಲೈ ಮಾನವ

1 min
362


ಮಾನವ, ನೀನಾರಿಗಾದೆಯೋ ಎಲೈ ಮಾನವ !

ಹುಟ್ಟಿಸಿದ ಅಪ್ಪ ಅಮ್ಮನನ್ನು ಮರೆಯಬೇಡ ಮಾನವ 

ಮರೆತು ಆಗಬೇಡ ನೀ ದಾನವ!!


ಮಾನವ, ನೀನಾರಿಗಾದೆಯೋ ಎಲೈ ಮಾನವ !

 ವಿದ್ಯೆ ಕಲಿಸಿದ ಗುರುವನು ನಿಂದಿಸಿದರೆ 

ಆಗುವುದೇ ನಿನಗೇ ಒಳಿತು, ಇದನು ಅರಿತು 

ಬಾಳು ನೀ ಮಾನವ, ಆಗಬೇಡ ದಾನವ... 


ನೀನುಣ್ಣುವ ತುತ್ತಲಿ ಕೊಡು ಸ್ವಲ್ಪ ಭಿಕ್ಷೆ 

ಗೆದ್ದೆಯಾದರೆ ನೀನು ಈ ಪರೀಕ್ಷೆ.. 

ಆಗ ಕೊಡುವನು ದೇವ ನಿನಗೆ ಶ್ರೀರಕ್ಷೆ!!

ಎಲೈ ಮಾನವ, ಆಗಲೇಬೇಕು ನೀ ಮಾನವ... 


ನನ್ನ, ನಾನು, ನನ್ನದು ಎಂಬ ಅಹಂಕಾರವ ಮರೆತು 

ನಾವು, ನಮ್ಮದು ಎಂದರಿತು ಉಪಕಾರವ ಮಾಡುವಂತವನಾಗು... 

ಕೊಟ್ಟರೆ ಕೊಂಡಾಡದೆ, ಕೊಡುಗೈ ದಾನಿಯಾಗುವೆನೆಂದು 

ಪಣ ತೊಟ್ಟು ಆಗು ನೀ ಮಾನವ 


ಆಗ ಬದಲಾಗುವುದು ಈ ಪದದ ಸಾರಾಂಶ 

ಕೇಳು ನೀ ಮಾನವ.... 

ಎಲ್ಲಾರಿಗೂ ಆದೆ ನಾ ಮಾನವ.... !



 


Rate this content
Log in

Similar kannada poem from Classics