ಕನಸೊಂದು ಶುರುವಾಗಿದೆ
ಕನಸೊಂದು ಶುರುವಾಗಿದೆ
ಬಂಜೆ ಎಂಬ ಚುಚ್ಚು ಮಾತಿನಿಂದ ನೊಂದ ಮನಕೆ
ಸುಂದರ ಕನಸೊಂದು ಶುರುವಾಗಿದೆ
ಬಹಳ ದಿನದಿಂದ ಹಾತೊರೆಯುತ್ತಿದ್ದ ಬಯಕೆ
ಇಂದು ನನಸಾಗುವ ಸಮಯ ಸನಿಹವಾಗುತ್ತಿದೆ
ಉದರದೊಳಗಿನ ಪುಟ್ಟ ಕಂದನ ಮಿಸುಕಾಟ
ಹೇಳತೀರದ ಸುಖವ ನೀಡುತ್ತಿದೆ
ಎಂದು ಮೊಗವ ನೋಡುವೆನೆಂಬ ತೊಳಲಾಟ
ಕೊನೆಯಾಗುವ ಕ್ಷಣಕ್ಕೆ ಮನವು ಹಾತೊರೆಯುತ್ತಿದೆ
ಕಂದನ ದನಿಯ ಕೇಳುವ ಕಾತುರತೆ ಹೆಚ್ಚಾಗಿದೆ
ಬರಮಾಡಿಕೊಳ್ಳಲು ಮನೆ ಮನ ಸಜ್ಜಾಗಿ ನಿಂತಿದೆ
ಕನಸಿನ ಕೂಸು ಜಗತ್ತಿಗೆ ಕಾಲಿಡಬೇಕಿದೆ
ಜೀವನದ ಹೊಸ ಅಧ್ಯಾಯ ಶುರುವಾಗಿದೆ
