ಜೋಕಾಲಿ
ಜೋಕಾಲಿ
ಜೀವನವು ಒಂದು ಜೋಕಾಲಿ
ತೂಗುತಿದೆ ಸುಖ ದುಃಖಗಳ ನಡುವಿನ ತುದಿಯಲಿ
ಇರುವುದರಲ್ಲಿ ಖುಷಿಪಡುವುದೇ ನಿಜವಾದ ಜಾಲಿ
ದುಃಖ ದುಮ್ಮಾನಗಳಿಗೆ ನಾವಾಗದಿರೋಣ ಖಾಲಿ
ನೋವ ಮರೆಸುತ ನಲಿವ ತರಿಸುತ
ಬಾಲ್ಯದ ನೆನಪುಗಳ ಕೆದಕುತ
ತೂಗುತಿದೆ ಬದುಕಿನ ಏರಿಳಿತಗಳ ಜೋಕಾಲಿ
ಬಿಡುವ ನಾವು ಬರಿ ಸುಖದ ಖಯಾಲಿ
ಜೋಕಾಲಿಯ ಜೀಕು ಹಾಡಿದೆ ಲಾಲಿ
ಉಯ್ಯಾಲೆ ಈ ಬದುಕು ಹೊಡೆಯದಿರಲಿ ಜೋಲಿ
