STORYMIRROR

Chethana Bhargav

Classics Inspirational Others

4  

Chethana Bhargav

Classics Inspirational Others

ಜನಸಂಖ್ಯಾ ಸ್ಪೋಟ

ಜನಸಂಖ್ಯಾ ಸ್ಪೋಟ

1 min
346

ಸ್ಪೋಟಗೊಂಡಿದೆ ಜನಸಂಖ್ಯೆ 

ಮಿತಿಮೀರಿದೆ ಇದರ ಅಂಕಿಸಂಖ್ಯೆ 

ಪ್ರಕೃತಿಯ ಶಿಶುವು ಮಾನವನು 

ಆಕೆಯ ಆರೈಕೆಯಲೇ ಬೆಳೆದಿಹನು 


ವಿಕಸಿತ ಪ್ರಭೇದವಾಗಿಹನು 

ವಿವಿಧ ಮಜಲುಗಳ ಮುಟ್ಟಿಹನು 

ತಣಿಯದ ದಾಹವು ಅರಿವಿನ ಬಗ್ಗೆ 

ಹಾಕುತ ಆಕಾಶಕೆ ಏಣಿ ಅಂತರಿಕ್ಷಕ್ಕೆ ಲಗ್ಗೆ 


ಭುವಿ ಜಲ ವಾಯುವ ಕೆಡಿಸಿಹನು 

ತನ್ನ ದುರಾಸೆಯ ಮೆರೆದಿಹನು 

ಎಲ್ಲವು ಬೇಕು ಎಂಬ ಆಸೆಯಲಿ 

ಕುಲವನೇ ವಿನಾಶಕೆ ದೂಡುತಲಿ 


ತನ್ನವರ ಸಂಖ್ಯೆಯ ಹೆಚ್ಚಿಸುತ 

ತನ್ನಲೇ ಕಂದರ ಸೃಷ್ಟಿಸುತ 

ಒಂದೆಡೆ ಚೆಲ್ಲುತ ಆಹಾರ 

ಇನ್ನೊಂದೆಡೆ ಅಗುಳಿಗೂ ಹಾಹಾಕಾರ 


ಪ್ರಕೃತಿಯ ಮಣಿಸಲು ಹೊರಟಿಹನು 

ತನ್ನ ವಿನಾಶವ ಮರೆತಿಹನು 

ಮನುಜನೇ ಕಾಲವು ಮಿಂಚಿಲ್ಲ 

ದರ್ಪವು ತೋರುವ ಹೊತ್ತಲ್ಲ 


ಪ್ರಕೃತಿಯ ಒಳಿತಲೆ ನಿನ್ನ ಉಳಿವಿಹುದು 

ಅವಳು ಮುನಿದರೆ ಒಡನೆ ಅಳಿವಿಹುದು 

ಬೆಳಗಲಿ ನಿನ್ನಲಿ ಮನುಷ್ಯತ್ವ 

ಅದುವೇ ನಿಜವಾದ ಅಮರತ್ವ


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Classics