ಹೊತ್ತು ಮೀರಿದ ಮೇಲೆ...???
ಹೊತ್ತು ಮೀರಿದ ಮೇಲೆ...???
ಕನಸು ಮನಸಿನಲಿ
ಸಿಟ್ಟಾಗಿ ಸಿಡುಕಲು ಬೇಡ
ಅಪ್ಪ ಅಮ್ಮನ ಮೇಲೆ..
ಅತ್ತು ಕರೆದರೆ
ಮತ್ತೆ ಬರುವರೇನು
ಹೊತ್ತು ಮೀರಿದ ಮೇಲೆ...
ಕಿರು ಬೆರಳ ಪಿಡಿದು
ತಾರೆಗಳ ತೋಟದಿ
ಚಂದಮಾಮನ ತೋರಿ
ತುತ್ತಿಟ್ಟು ಮುತ್ತಿಟ್ಟ ಹೆತ್ತಮ್ಮ...
ಬೊಂಬೆ ಬುಗುರಿಯನೆ ತಂದಿತ್ತು
ಹೆಗಲಮೇಲಿರಿಸಿ ಕುಣಿದ ಕುಪ್ಪಳಿಸಿದಪ್ಪ.....
ಕರುಳ ಕೂಗು ದೂರಾದರೆ
ದೊರಕುವುದೇನು ಶಾಂತಿ
ಜಗದಲೇನಿದೆ ಗಳಿಸದೆ
ಅಪ್ಪ ಅಮ್ಮನ ಪ್ರೀತಿ..
ಲಾಲಿಸದೆ ಚಿತೆಗೇರಿಸೆ
ದೊರಕುವುದೆ ಮುಕುತಿ...
