ಹೊಂಗಿರಣ
ಹೊಂಗಿರಣ
ಮುಂಜಾನೆಯ ರವಿಯ ಹೊಂಗಿರಣ
ಭೂಮಿಯು ತೊಟ್ಟಂತಿದೆ ಆಭರಣ
ಹಕ್ಕಿಗಳ ಚಿಲಿಪಿಲಿ ಕಲರವ
ಮನಕೆ ತರುವುದು ಪುಳಕವ
ಮೊಗ್ಗುಗಳು ಅರಳಿ ಹೂ ಆಗುವ ವೇಳೆಗೆ
ಹೊಂಗಿರಣವು ಸ್ಪರ್ಶಿಸುವುದು ಇಳೆಗೆ
ಜಗವೆಲ್ಲಾ ಅಣಿಯಾಗುವುದು ಹೊಸ ದಿನಕ್ಕೆ
ನವ ಉಲ್ಲಾಸದಿ ಸಜ್ಜಾಗುವೆವು ನಮ್ಮ ಕಾರ್ಯಕ್ಕೆ
ಅಜ್ಞಾನವ ಕಳೆಯುತ ಸುಜ್ಞಾನವ ಬೆಳೆಸುತಾ
ಅಂಧಕಾರದ ಓಡಿಸಿ ಬೆಳಕನು ಚೆಲ್ಲುತಾ
ಜಗಕ್ಕೆ ಚೈತನ್ಯ ನೀಡುತಾ
ಮೂಡುವನು ನೇಸರ ಹೊಂಗಿರಣ ಸೂಸುತಾ
