ಹೆಣ್ಣೆಂದರೆ ಅಬಲೆಯಲ್ಲ
ಹೆಣ್ಣೆಂದರೆ ಅಬಲೆಯಲ್ಲ
ಹೆಣ್ಣನ್ನು ಅಬಲೆ ಎನ್ನದಿರಿ
ದಯವಿಟ್ಟು ಬದುಕಲು ಬಿಡಿ
ಹೆರುವ ಯಂತ್ರವಲ್ಲ ಹೆಣ್ಣು
ದುಡಿವ ಕಾರ್ಖಾನೆಯಲ್ಲ ಹೆಣ್ಣು
ಹೆಣ್ಣು ಸಂಸಾರದ ಕಣ್ಣು
ಆದರೆ ಕೆಲವರಿಗವಳು ಹುಣ್ಣು
ಆಕೆ ಸೇರುವವರೆಗು ಮಣ್ಣು
ಅವಳ ಮೇಲಿನ ದಬ್ಬಾಳಿಕೆ ನಿಲ್ಲುತ್ತಿಲ್ಲ
ಸಾಯುವವರೆಗು ಸಂಸಾರಕ್ಕಾಗಿ
ದುಡಿದು, ಹಡೆದು, ದಣಿದು ಬೆಂಡಾದರು
ಹೆಣ್ಣಿನ ಗೋಳನ್ನು ಕೇಳವರಾರು ಇಲ್ಲ.
ಹೆಣ್ಣು ಅಬಲೆಯಲ್ಲ,
ಹೆಣ್ಣು ನಿರ್ಭಯೆ ,
ಅಬಲೆ ಎಂದು ಅಬಲೆಯನ್ನಾಗಿಸದಿರಿ
ಹೆಣ್ಣನ್ನು ಬದುಕಲು ಬಿಡಿ.
