STORYMIRROR

Revati Patil

Classics Inspirational Others

3  

Revati Patil

Classics Inspirational Others

ಎಲ್ಲದಕ್ಕೂ ಮಿತಿಯಿದೆ.

ಎಲ್ಲದಕ್ಕೂ ಮಿತಿಯಿದೆ.

1 min
381

ಮಿತಿ ಹೇರುವ ನಾವೇ

ಮಿತಿಯಿಲ್ಲದಷ್ಟು ಬೇಡುತ್ತೇವೆ.

ಮಿತಿಯಾಗಿ ಮಾತಾಡುವ ನಾವು

ಅತಿಯಾಗಿ ಕಿವಿಗೊಡುತ್ತೇವೆ, ಅನ್ಯರ ವಿಷಯಕ್ಕೆ!

ಮಿತಿಯಲ್ಲಿ ನಗುವುದು ಚೆಂದವಂತೆ

ಮಿತಿಮೀರಿ ಅಪಹಾಸ್ಯ ಮಾಡುವುದೇಕಂತೆ?

ಮತಿ, ಮಿತಿಯಲ್ಲಿದ್ದರೆ ಜ್ಞಾನದ ಭರಾಟೆ 

ಮತಿಹೀನನ ಮಾತಿಗೆ ಕವಡೆ ಕಿಮ್ಮತ್ತುಂಟೆ?

ಮಿತಿ ಇರದಿರಲಿ ಧನಾತ್ಮಕ ಚಿಂತನೆಗೆ,

ಯಾರ ಗೊಡವೆ, ಅತಿಯಾಗಿ ಆಶಿಸುವ ಮನಕೆ?


இந்த உள்ளடக்கத்தை மதிப்பிடவும்
உள்நுழை

Similar kannada poem from Classics