ಚಲಾವಣೆಗೆ ಸಲ್ಲದ ನಾಣ್ಯ
ಚಲಾವಣೆಗೆ ಸಲ್ಲದ ನಾಣ್ಯ
ಚಲಾವಣೆಗೆ ಸಲ್ಲದ ನಾಣ್ಯಕ್ಕೆ ಬೆಲೆ ಇಲ್ಲ
ಚುನಾವಣೆಯಲ್ಲಿ ಸೋತವರ ಮಾತಿಗೆ ಕಿಮ್ಮತ್ತಿಲ್ಲ
ಚಲಾವಣೆಯಲ್ಲಿ ಇದ್ದಾಗ ಅವರದ್ದೇ ಕಾರು-ಬಾರು
ಹೇಳದೆ ಕೇಳದೆ ಮಾಡುವರು ದರ್ಬಾರು
ನ್ಯಾಯ ನೀತಿಯಿಂದ ಮಾಡಿದರೆ ಮಾಡಿದರೆ ಕೆಲಸ
ಜನರ ಮನದಲ್ಲಿ ನೆಲೆಯೂರುವರು ಅನುದಿವಸ
ಜನಾನುರಾಗಿಯಾಗಿ ಮಾಡಿದ ಕಾರ್ಯ
ತುಂಬುವುದು ಜನಮನಕೆ ನಿಜ ಬಲ ಸ್ಥೈರ್ಯ
ಚಲಾವಣೆಗೆ ಸಲ್ಲದ ನಾಣ್ಯಕ್ಕೂ ತೂಕವಿದೆ
ನಿವೃತ್ತ ಹಿರಿಯರ ಮಾತಿಗೆ ಅನುಭವದ ಅರ್ಥವಿದೆ
