STORYMIRROR

Vaishnavi S Rao

Classics Inspirational Others

4  

Vaishnavi S Rao

Classics Inspirational Others

-ಬೆಳೆದು ಬಂದ ಹಾದಿ

-ಬೆಳೆದು ಬಂದ ಹಾದಿ

1 min
388

ಮುದ್ದು ತಂದೆ ತಾಯಿಯವರ ಮಗಳು 

ಎಲ್ಲರ ಪ್ರೀತಿ ಗೆದ್ದವಳು ಪ್ರೀತಿ ಮಗಳು 

ಕಷ್ಟದಲ್ಲೂ ಸಹನೆಯಿಂದ ಬೆಳೆದ ಮಗಳು 

ಬೇರೆ ಯಾರು ಬೇಡ ಎಂದು ನುಡಿದ ಮಗಳು


ಬಾಳಿನಲ್ಲಿ ನಗುವಿನ ಹೆಜ್ಜೆಯನ್ನು ತಂದುಕೊಟ್ಟವಳು 

ನನ್ನನ್ನು ನಾನು ಎಲ್ಲದಕ್ಕೂ ಅರ್ಪಿಸಿಕೊಂಡವಳು 

ಎಲ್ಲರ ಮನದಲ್ಲಿ ಮರೆಯಲು ಆಗದಿರುವವಳು 

ಧನ್ಯವಂತರ ಪೋಷಕರಾಗಿ ಬೆಳೆದವಳು


ತಾಳ್ಮೆಯಿಂದ ಕೆಲಸ ಮಾಡುವವಳು 

ಸದಾ ಶ್ವೇತಾ ಉಡುಪನ್ನು ಧರಿಸುವವಳು 

ಒಳ್ಳೆಯ ಮನಸು ಚಂದ್ರನಂತೆ ಇರುವವಳು 

ಯಾವುದೇ ಅಪೇಕ್ಷೆ ಇಲ್ಲದೇ ದುಡಿಯುವವಳು


ಕಷ್ಟದಲ್ಲೂ ಸದಾ ನಗುವನ್ನು ಬೀರುವವಳು 

ರಾತ್ರಿ ಹಗಲು ಶ್ರಮ ವಹಿಸುವವಳು 

ನಾನು ಚುಚ್ಚು ಮದ್ದು ಕೊಡುವವಳು 

ನೋವು ಆದಾಗ ಕಣ್ಣೀರು ಒರೆಸುವವಳು 


Rate this content
Log in

Similar kannada poem from Classics