ಬದುಕೆಂಬ ವೇಗ
ಬದುಕೆಂಬ ವೇಗ
ವಾಹನವೆಂಬುದೇ
ನಿತ್ಯ ಚಾಲನೆಯ ಓಡಾಟ
ಓಡುತ ಬೀಳುತ ಸಾಗಿಸಬೇಕಿದೆ
ಜೀವನವೆಂಬ ಚಾಲನೆ
ಬಲಿಯಾಗದಿರಲಿ ವೇಗದ ಮಸಣಕೆ!!
ಸುರಕ್ಷತೆಯ ಜೀವನಕೆ
ತಾಳ್ಮೆಯ ಚಾಲನೆಯೇ ಭದ್ರತೆ
ನಿಧಾನದ ಚಕ್ರವೇ ತಳಪಾಯ
ಬದುಕಿನ ಸುರಕ್ಷಿತೆಗೆ
ಜಾಗ್ರತೆಯೇ ಜೀವಾಳ!!
ಚಲಿಸುವ ವಾಹನಕೆ
ಹತ್ತಿ ಕುಳಿತು ಚಾಲನೆ
ನೀಡಿದರೆ ಮುಂದೆ ಸಾಗುವುದು
ಎಚ್ಚರ ತಪ್ಪುವ ಅಪಘಾತವೇ
ಸಾಗುವ ವೇಗಕೆ ಸಾಕ್ಷಿಗಳು!!
ಬದುಕಿನ ವೇಗವು
ಎಚ್ಚರ ತಪ್ಪದೇ ದಾರಿಯು
ಸುಖಕರವಾಗಿರಲಿ ಪ್ರಯಾಣ
ನಿರಾತಂಕವಾಗಿ ನಿತ್ಯ ಸಾಗಲಿ
ಬದುಕೆಂಬ ವೇಗವು!!
