STORYMIRROR

Chethana Bhargav

Classics Inspirational Others

4  

Chethana Bhargav

Classics Inspirational Others

ಆಶಾವಾದ

ಆಶಾವಾದ

1 min
264

ಜೀವನದಲ್ಲಿ ಆಗಿರು ನೀ ಆಶಾವಾದಿ 

ಆಗದಿರು ಈ ಮಾಯಾಲೋಕದ ಖೈದಿ 

ತಣ್ಣಗಾಗಲಿ ಕುದಿವ ಮನದ ಬೇಗುದಿ 

ಭರವಸೆಯೇ ಜೀವನದ ತಳಹದಿ 


ಬಾಳಲ್ಲಿ ಸೋಲು ನಿರಾಸೆಗಳು ಸಹಜ 

ಕುಗ್ಗದಿರಲಿ ವಿಶ್ವಾಸ ಮುನ್ನಡೆ ಓ ಮನುಜ 

ಆಶಾವಾದಿಯಾಗಿರೆ ತೋರುವುದು ಭರವಸೆಯ ಕಿರಣ 

ನಿರುತ್ಸಾಹವೆ ಈ ಜೀವಕೆ ನಿಜವಾದ ಮರಣ 


ನಡೆಯೋಣ ಬಾಳಲ್ಲಿ ಉತ್ಸಾಹ ಚಿಮ್ಮಿಸುತ 

ಹರಡುವ ಖುಷಿಯ ಅಲೆಯ ಎಲ್ಲರ ನಕ್ಕು ನಗಿಸುತ 

ಮನದ ಮೂಲೆಯ ಆಸೆಗಳೇ ಜೀವನಕೆ ಮೂಲ 

ಆಸೆಯು ಅನಂತವಾಗೇ ತಿಳಿವುದು ಈ ಭಗವಂತನ ಲೀಲಾ 


Rate this content
Log in

Similar kannada poem from Classics