STORYMIRROR

Mouna M

Classics Inspirational Others

4  

Mouna M

Classics Inspirational Others

ನನ್ನ ನಿಮ್ಮೆಲ್ಲರ ಅಮ್ಮ

ನನ್ನ ನಿಮ್ಮೆಲ್ಲರ ಅಮ್ಮ

1 min
340

ಅಮ್ಮ ಅಮ್ಮ ಅಮ್ಮ ನನ್ನ ನಿಮ್ಮೆಲ್ಲರ ಅಮ್ಮ 

ಕೇಳೋ ನೀ ನನ್ನ ಮಂಕುತಿಮ್ಮ

ಕೊಡುವೆವು ನಾವು ಹುಟ್ಟುತ್ತಲೇ ನೋವು

ದಣಿದು ಬಸವಳಿದಿದ್ದರೂ ತೋರ್ವಳು ನಲಿವು..... 

ಬರದೇ ಇರಲಿ ಅವಳಿಗೆಂದೂ ಸಾವು!!


ತನ್ನನ್ನೂ ಮರೆತು ಮಕ್ಕಳ ಕುರಿತು ತೋರ್ವಳು ಕಾಳಜಿ ... 

ಲಾಲಿಸಿ ಪಾಲಿಸಿ ಕುಡಿವಳು ತಾನ್ ಗಂಜಿ

ತಗ್ಗಿ ಬಗ್ಗಿ ನಡೆವಳು ಜಗತ್ತಿಗೆ ಅಂಜಿ.... 


ಬಟ್ಟೆ ಬೇಡ, ಊಟ ಬೇಡ, ಮನೆ ಮಕ್ಕಳು ಇದ್ದರೆ ಸಾಕು 

ಪೇಳ್ವಳು ಅಮ್ಮ, ಇದಕ್ಕಿಂತ ಇನ್ನೇನು ಬೇಕು!!!

ಅಮ್ಮನ ಪ್ರೀತಿಗೆ ಹಾಕಬೇಡ ನೀ ಎಂದೆಂದಿಗೂ ಚಾಕು.....


ಅಮ್ಮನ ಪ್ರೀತಿಯಲಿ ಮಿಂದ ನಮಗೆ ಇರುವೊದೊಂದೇ ದಾರಿ 

ಅದೇ ಅವಳ ನಾವ್ ನಡೆಸಿಕೊಳ್ಳುವ ಪರಿ, ಅವಳಿಗದೇ ಸಿರಿ... 

ಪಣ ತೊಡು ನೀನೆಂದಿಗೂ ಮಾಡಬೇಡ ಕಿರಿ ಕಿರಿ.. 


ನಿನ್ನ ಜೇಬಿನಲ್ಲಿ ಕಾಸಿದ್ದರೂ ಝಣ ಝಣ.... 

ಕೊಡು ನೀ ನಿನ್ನ ಪ್ರೀತಿ ಪ್ರತಿದಿನ ಒಂದೇ ಒಂದು ಕ್ಷಣ

ಆಗ ನೋಡು ನೀ ಅವಳ ಪ್ರೀತಿಯ ಲಕ್ಷಣ .. 


ಮನೆ ಮಠ ಬಿಟ್ಟು ಕೂಡಿಡಬೇಡ ಹಣ ಹಣ..... 

ಪ್ರೀತಿಯಿಲ್ಲದಿದ್ದಲ್ಲಿ ಅವಳು ಬದುಕಿದ್ದೂ ಸತ್ತ ಹೆಣ!!!!

ಅವಳಿಲ್ಲದಿದ್ದರೆ ಮನೆ ಬಣ ಬಣ....... 


ಅಮ್ಮ ಅಮ್ಮ ಅಮ್ಮ ನನ್ನ ನಿಮ್ಮೆಲ್ಲರ ಅಮ್ಮ 

ಕೇಳೋ ನೀ ನನ್ನ ಮಂಕುತಿಮ್ಮ ....


Rate this content
Log in

Similar kannada poem from Classics