ರೈತ ಮತ್ತು ಪಕ್ಷಿ
ರೈತ ಮತ್ತು ಪಕ್ಷಿ


ಒಂದು ಹಳ್ಳಿ. ಅಲ್ಲಿ ಒಬ್ಬ ರೈತ . ಅವನ ಹೊಲದ ಮಧ್ಯೆ ಒಂದು ದೊಡ್ಡ ಮರ ಒಂದು ದಿನ ಬಿಸಿಲಿನಲ್ಲಿ ಕೆಲಸ ಮಾಡಿ ಮಧ್ಯಾಹ್ನ ಮರದ ಕೆಳಗೆ ಮಲಗಿರುವಾಗ ಅವನಿಗೆ ಒಂದು ಆಲೋಚನೆ. ಇಷ್ಟು ದೊಡ್ಡ ಮರದ ಕೆಳಗೆ ನೆರಳಿನ ಕಾರಣ ಏನೂ ಬೆಳೆಯಲು ಆಗಲ್ಲ . ಮರವೂ ಹಳೆಯದಾಗಿದೆ ಕಡಿದರೆ ಮನೆಗೆ ಸೌದೆ ಆಗುತ್ತೆ ಅಂತ. ಮಾರನೇದಿನ ಇಬ್ಬರು ಆಳುಗಳನ್ನ ಕರೆದು ಹೇಳಿದ ನಾಳೆ ಈ ಮರವನ್ನ ಕಡಿದು ಸೌದೆ ಮನೆಗೆ ಸಾಗಿಸಿ ಬಿಡಿ. ಆವರು ಆಯ್ತು ಅಂತ ಹೊರಟರು.ಆ ಮರದಲ್ಲಿ ಒಂದು ಪಕ್ಷಿ ಗೂಡು ಕಟ್ಟಿ ಮರಿಗಳನ್ನ ಇಟ್ಟಿತ್ತು. ಪಕ್ಷಿ ಆಹಾರಕ್ಕಾಗಿ ಬೆಳಗ್ಗೆ ಹೊರಟರೆ ಬರುವುದು ಸಂಜೆ. ರೈತ ಹೇಳಿದ್ದು ಕೇಳಿ ಮರಿಗಳು ಬಹಳ ಹೆದರಿದ್ದವು. ಅಮ್ಮ ಬಂದ ತಕ್ಷಣ , ನಾವು ಬೇರೆಕಡೆ ಹೋಗೋಣ ನಾಳೆ ಮರವನ್ನು ಕಡಿಯಲು ರೈತ ಆಳುಗಳಿಗೆ ಹೇಳಿದ್ದಾನೆ ಎಂದು ಹೇಳಿತು. ಆಗಲಿ ಎಂದು ಹೇಳಿ ಸುಮ್ಮನಾಯಿತು ಪಕ್ಷಿ.ಮಾರನೇ ದಿನ ರೈತ ಬಂದು ನೋಡಿದ ಆಳುಗಳು ಯಾರೂ ಮರವನ್ನು ಕಡಿದಿರಲ್ಲಿಲ್ಲ .ಮನೆಗೆ ಹೋಗಿ ತನ್ನ ಇಬ್ಬರು ಮಕ್ಕಳಿಗೂ ಮರ ಕಡಿಯಲು ಹೇಳಿದ. ಆಗಲೆಂದು ಒಪ್ಪಿದರು.ತಾಯಿ ಪಕ್ಷಿ ಬಂದ ತಕ್ಷಣ ಹೆದರಿದ ಮರಿಗಳು ಹೇಳಿತು ಅಮ್ಮ ಇವತ್ತು ರೈತ ಬಂದಿದ್ದ , ಮನೆಗೆ ಹೋಗಿ ಇಬ್ಬರು ಮಕ್ಕಳಿಗೆ ಕಡಿಯಲು ಹೇಳಬೇಕೆಂದು ಹೋಗಿದ್ದಾನೆ. ಬೇರೆ ಕಡೆ ಹೋಗೋಣ ಹೆದರಿಕೆ ಆಗುತ್ತೆ ಎಂದಿತು. ಆಯ್ತು ಅಂತ ಸುಮ್ಮನಾಯಿತು. ಮಾರನೇ ದಿನ ಮಕ್ಕಳು ಮರವನ್ನ ಕಡಿಯದೆ ಇದ್ದುದಕ್ಕೆ ಕೋಪಗೊಂಡು ನಾಳೆ ಊರಿನಿಂದ ಕತ್ತರಿಸುವ ಮಷಿನ್ ತರಿಸಿ ಒಂದು ಗಂಟೆಯಲ್ಲಿ ಮರ ಉರುಳಿಸಬಹುದು. ಇವರೆಲ್ಲಾ ಅಪ್ರಯೋಜಕರು ಅಂತ ಹೇಳುತ್ತಿದ್ದುದನ್ನ ಕೇಳಿ ಮರಿಗಳು ಹೆದರಿ ಮತ್ತೆ ಸಂಜೆ ಅಮ್ಮ ಬಂದಾಗ ವಿಷಯ ತಿಳಿಸಿದರೂ ಅಮ್ಮ ಹೆದರದೆ ಆಯ್ತು ನೋಡೋಣ ಅಂತ ಹೇಳಿ ಸುಮ್ಮನಾಯಿತು. ಮರಿಗಳು ಮಾತ್ರ ಬಹಳ ಹೆದರಿತ್ತು. ಮಾರನೇ ದಿನ ಮತ್ತೆ ಬಂದ ರೈತ, ಮಷಿನ್ ಆಗಲಿ ಊರಿನಿಂದ ಜನವಾಗಲಿ ಬಂದಿಲ್ಲದೆ ಇರುವುದಕ್ಕೆ ಬಹಳ ಕೋಪಗೊಂಡು ಹೇಳಿದ ಯಾರನ್ನೂ ನಂಬ ಬಾರದು ನಮ್ಮ ಕೆಲಸ ಸ್ವಯಂ ನಾವೇ ಮಾಡಬೇಕು ಎನ್ನುತ್ತ ನಾಳೆ ಯಾರ ಸಹಾಯವಿಲ್ಲದೆ ನಾನೇ ಮಾಡ್ತೀನಿ ಒಂದು ವಾರವಾದರೂ ಪರವಾಗಿಲ್ಲ ಆಂತ ಹೊರಟ. ಸಂಜೆ ಪಕ್ಷಿ ಬಂದು ಕೇಳಿತು ರೈತ ಬಂದಿದ್ದನೆ ಏನು ಹೇಳಿದ. ರೈತ ಹೇಳಿದ ಮಾತನ್ನ ಅಮ್ಮನಿಗೆ ಮರಿಗಳು ತಿಳಿಸಿತು. ತಕ್ಷಣ ಅಲ್ಲಿಯವರೆಗೂ ಸುಮ್ಮನಿದ್ದ ಪಕ್ಷಿ ನಾಳೆ ಬೇರೊಂದು ಮರದಲ್ಲಿ ಗೂಡು ಕಟ್ಟಿದ್ದೀನಿ ನಾಳೆ ಅಲ್ಲಿಗೆ ಹೋಗೋಣ ಎಂದಿತು. ಮರಿಗಳಿಗೆ ಆಶ್ಚರ್ಯ. ಕೆಳಿದ್ದಕ್ಕೆ ಪಕ್ಷಿ ಹೇಳಿತು. ಇಷ್ಟು ದಿನ ನನಗೆ ಭಯ ಇರಲಿಲ್ಲ. ಆದರೆ ತಾನೇ ಮರ ಕಡಿಯುತ್ತಾನೆಂದರೆನಿಜವಾಗಿಯೂ ಕಡಿಯುತ್ತಾನೆ. ಅದಕ್ಕೆ ಅಷ್ಟೇ ಭಯ ಎಂದಿತು.
ನೀತಿ: ಯಾರನ್ನೋ ನಂಬುವುದಕ್ಕೆ ಬದಲು ನಮ್ಮ ಕೆಲಸ ನಾವೇ ಮಾಡುವುದು ಉತ್ತಮ.