ನಂಬಿಕೆ
ನಂಬಿಕೆ


ಕಾಶಿ ವಿಶ್ವನಾಥ ಹಾಗೂ ವಿಶಾಲಾಕ್ಷಿ ಇಬ್ಬರೂ ಒಮ್ಮೆ ಮಾತನಾಡುತ್ತಿರುವಾಗ ವಿಶ್ವನಾಥ ಮಡದಿಗೆ ಹೇಳಿದ ಈಗೀಗ ಜನಕ್ಕೆ ಭಕ್ತಿ ಅಂದರೆ ಬರೀ ಆಡಂಬರವಾಗಿದೆ ಯೇ ಹೊರತು , ನೈಜ ಭಕ್ತರು ಬಹಳ ವಿರಳ . .ಕಾಶಿಯಲ್ಲಿ ಸ್ನಾನ ಮಾಡಿದರೆ ಪುಣ್ಯ ಬರುತ್ತೆ ಅಂತಾ ಯಾರೋ ಹೇಳಿದರು ಅಂತ ಬಂದು ಮುಳುಗುತ್ತಾರಯೇ ಹೊರತು ಪ್ರಬಲವಾದ ನಂಬಿಕೆ ಇಂದ ಮಾತ್ರ ಅಲ್ಲ. ಇದನ್ನು ಕೇಳಿ ವಿಶಾಲಾಕ್ಷಿ ಹಾಗಿದ್ದರೆ ನಾವು ಏಕೆ ಒಮ್ಮೆ ಪರೀಕ್ಷೆ ಮಾಡಿ ಸತ್ಯ ತಿಳಿದುಕೊಳ್ಳ ಬಾರದು ಎಂದಾಗ ಆಯ್ತು ಒಂದು ಕೆಲಸ ಮಾಡು ನಾನು ವಯಸ್ಸಾದ ಬ್ರಾಹ್ಮಣನ ವೇಷದಲ್ಲಿ ಸ್ನಾನ ಮಾಡಲು ಹೋಗಿ ಮುಳುಗುತ್ತಿದ್ದಾಗ ನೀನು ಸಾಮಾನ್ಯ ಹೆಂಗಸಿನ ವೇಷದಲ್ಲಿ ಜೋರಾಗಿ ಕೂಗಿ ಹೇಳು ನಮ್ಮನೆಯವರಿಗೆ ಈಜಲು ಬಾರದು ಯಾರಾದರೂ ಕಾಪಾಡಿ ಅಂತ. ಕೆಲವರು ಬರ್ತಾರೆ ಆಗಹೇಳು ಅವರಿಗೆ ಒಂದು ಶಾಪ ಇದೆ ಯಾರಾದರೂ ಪುಣ್ಯಾತ್ಮರು ಮಾತ್ರ ಅವರ ಕೂದಲು ಹಿಡಿದು
ಎಳೆದು ಮೇಲಕ್ಕೆ ತರಬಹುದು.ಪಾಪ ಮಾಡಿದ್ದವರು ಇದ್ದರೆ ದಯವಿಟ್ಟು ಪ್ರಯತ್ನ ಮಾಡುವುದು ಬೇಡ.
ಅವರ ಯೋಜನೆಯಂತೆ ಕೆಲವರು ಓಡಿಬಂದರು ವಿಶಾಲಾಕ್ಷಿ ಹೇಳಿದ್ದು ಕೇಳಿ ಹಿಂದೆ ಸರಿದರು. ಅಷ್ಟರಲ್ಲಿ ಅಲ್ಲೇ ಸುಮ್ಮನೆ ಹೋಗುತ್ತಿದವನು ಇದು ಯಾವುದಕ್ಕೂ ಗಮನ ಕೊಡದೇ ಹೋಗಿ ಧುಮುಕಿ ಕೂದಲು ಹಿಡಿದು ಮೇಲೆ ಕರೆದು ತಂದ. ಆಗ ಇಬ್ಬರೂ ಕೇಳಿದರು ನೀನು ಯಾರಪ್ಪ ನಾವು ಕೂಗಿ ಹೇಳುತ್ತಿದ್ದರೂ ಹೀಗೆ ನೀರಿನಲ್ಲಿ ಧುಮುಕಿ ಬಿಟ್ಟೆ ಎಂದಾಗ ಹೇಳಿದ, ನಾನು ಇಲ್ಲೇ ಛತ್ರದಲ್ಲಿ ಅಡುಗೆ ಮಾಡಿ ಕಾಶಿಗೆ ಬರುವ ಭಕ್ತರಿಗೆ. ಊಟಹಾಕುತ್ತೇನೆ , ಹಾಗೂ ದಿನವೂ ಇಲ್ಲಿ ಬಂದು ಸ್ನಾನ ಮಾಡುವುದಿಲ್ಲವೆಂದೂ ವಿಶೇಷ ದಿನಗಳಲ್ಲಿ ಮಾತ್ರ ತಾನು ಬರುವುದಾಗಿ ಹೇಳಿದಾಗ ಇಬ್ಬರಿಗೂ ಇದ್ದ ಸಂದೇಹವೂ ದೂರವಾಗಿ ನೈಜ ಭಕ್ತನನ್ನು ಅಲ್ಲಿ ಕಂಡಂತಾಯಿತು.