STORYMIRROR

ಹೃದಯ ಸ್ಪರ್ಶಿ

Horror Tragedy Others

4  

ಹೃದಯ ಸ್ಪರ್ಶಿ

Horror Tragedy Others

ಭಾರವಾದ ಮನಸು

ಭಾರವಾದ ಮನಸು

1 min
353

ಅರ್ಧ ರಾತ್ರಿಯಲ್ಲಿ ಎಚ್ಚರವಾಗಿ ಯಾರ

ನೆನಪಾಯ್ತೆಂದು ಕೇಳಿತು ತಂಗಾಳಿ

ಆದರೆ ಇನ್ನುಳಿದ ರಾತ್ರಿಯನ್ನು ಕಳೆಯಲಿ

ಹೇಗೆಂದು ಕೇಳಿತು ಕಂಬನಿ...! 


ಇರುಳ ತಂಪಿನಲಿ ನೆನಪಾಯಿತು

ಬಿಸಿಯಪ್ಪುಗೆಯ ಒಡನಾಟ

ಪ್ರೇಮವೆಂಬುದು ಯಾವ ರೀತಿಯ

ಮರುಳಾಟ ಎಂದು ಭಾರವಾಯಿತು ಮನಸು


ಯಾವುದೋ ನೋವೊಂದು ಇಬ್ಬನಿಯ

ಸುರಿಸುತಿಹುದು ನಯನ ಹೂಗಳಲ್ಲಿ

ಕೊನೆಯೇ ಇಲ್ಲವೇ ಇದಕ್ಕೆಲ್ಲಾ..?

ಮೌನವಾಗಿಯೇ ನಗು ಬೀರಿತು ವಿಷಾದದ ಹೂ ನಗೆ..



Rate this content
Log in