murali nath

Others

3  

murali nath

Others

ಮಾಯೆ

ಮಾಯೆ

1 min
30



ಒಬ್ಬ ಮಧ್ಯ ವಯಸ್ಕ , ಸಂಸಾರ ಸಾಗರದಿಂದ ಬೇಸತ್ತು ಮನೆಯಿಂದ ದೂರ ಹೋಗಿ ಜನಜಂಗುಳಿ ಇರದ  ಒಂದು ಆಲದ ಮರದ ಕೆಳಗೆ ,ಕಣ್ಣು ಮುಚ್ಚಿ ಧ್ಯಾನಕ್ಕೆ ಕುಳಿತ. ಐದು ನಿಮಿಷದ ನಂತರ ಹೆಣ್ಣೊಂದು ಹಾಡು ಹೇಳಿಕೊಂಡು ಹೋಗುತ್ತಿರುವಂತೆ ಭಾಸವಾಯಿತು. ತಕ್ಷಣ ಕಣ್ಣು ಬಿಟ್ಟ. ಒಂದು ಹುಡುಗಿ ಕಾಲೇಜ್ ಗೆ ಹೋಗುವ ದಾರಿಯಾದ್ದರಿಂದ ಆ ಕಡೆ ಹೋಗುತ್ತಿದ್ದಾಳೆ. ಧ್ಯಾನಕ್ಕೆ ಇಲ್ಲೂ ಅಡ್ಡಿ ಆಯಿತಲ್ಲ ಅಂತ ಬೇಸರ ಗೊಂಡುಕಣ್ಣಿಗೆ ಬಟ್ಟೆಕಟ್ಟಿ ಕೊಂಡು ಕುಳಿತ. ಮಾರನೇದಿನ ಅದೇ ಸಮಯಕ್ಕೆ ಗೆಜ್ಜೆ ಸದ್ದು ಕೇಳಿಸಿತು ಕಣ್ಣುಬಿಟ್ಟು ನೋಡಿದ ಅದೇ ಹುಡುಗಿ ಕಾಲಿಗೆ ಗೆಜ್ಜೆ ಕಟ್ಟಿಕೊಂಡು ಹೋಗುತ್ತಿದ್ದಾಳೆ (ಬಹುಶಃ ಡಾನ್ಸ್ ಕ್ಲಾಸ್ ಗೆ ಇರಬಹುದು ಎಂದುಕೊಂಡ) , ಈಗ ಕಣ್ಣು ಕಿವಿ ಎರಡನ್ನೂ ಗಟ್ಟಿಯಾಗಿ ಬಟ್ಟೆಯಿಂದ ಭಂದಿಸಿ ಕುಳಿತ. ಮರು ದಿನ ಅದೇ ಸಮಯ ಒಳ್ಳೆಯ ಹೂವಿನ ವಾಸನೆ ಮೂಗಿಗೆ ಬಡಿಯುತ್ತಿದೆ. ಕಣ್ಣುಬಿಟ್ಟು ನೋಡಿದ ಅದೇ ಹುಡುಗಿ ಹೂ ಮುಡಿದಿದ್ದಾಳೆ. ಮತ್ತೊಂದು ಬಟ್ಟೆಯಿಂದ ಈಗ ಮೂಗನ್ನೂ ಭದ್ರವಾಗಿ ಮುಚ್ಚಿ ಬಟ್ಟೆ ಕಟ್ಟಿಕೊಂಡ. ಕಣ್ಣು ಮೂಗು ಕಿವಿ ಮೂರನ್ನು ಮುಚ್ಚಿ ಕುಳಿತಿದ್ದರಿಂದ ಬಾಯಲ್ಲೇ ಉಸಿರಾಡಬೇಕಾಯ್ತು. ಹೇಗೋ ಕಷ್ಟಪಟ್ಟು ಕುಳಿತಿದ್ದ. ಮಾರನೆ ದಿನ ಅದೇ ಸಮಯ . ಈಗ ಮನಸ್ಸು ರಸ್ತೆ ಕಡೆ ತಿರುಗಿದೆ . ಹಾಡಿನ ಧ್ವನಿ ಇಲ್ಲ ,ಗೆಜ್ಜೆಯ ನಾದವಿಲ್ಲ ,ಹೂವಿನ ವಾಸನೆ ಇಲ್ಲ . ಎಲ್ಲೋ ಆ ಹುಡುಗಿಗೆ ರಜೆ ಇರಬೇಕೆಂದು ಕೊಂಡ . ಎದ್ದು ಮನೆಕಡೆ ಹೊರಟ.



Rate this content
Log in