ಹುಲಿ ಮತ್ತು ಕತ್ತೆ
ಹುಲಿ ಮತ್ತು ಕತ್ತೆ


ಒಮ್ಮೆ ಕಾಡಿನಲ್ಲಿ ಒಂದು ಹುಲಿ ಹೊಟ್ಟೆತುಂಬ ತಿಂದು ಮಲಗಿತ್ತು. ಅಲ್ಲಿಗೆ ಅಕಸ್ಮಾತ್ ಒಂದು ಕತ್ತೆ ಬಂದು ಹುಲಿಯನ್ನು ಮಾತನಾಡಿ ಸುತ್ತಾ ಹೇಳಿತು. ನೀನು ಎಷ್ಟು ಬಲಶಾಲಿ ಆದರೂ ಕಾಡಿನ ರಾಜ ಅಂತ ಹೆಸರು ಇಟ್ಟುಕೊಂಡಿರೋ ಸಿಂಹ ಮಾತ್ರ ಆ ಸ್ಥಾನ ಒಂದು ಸಲವೂ ನಿನಗೆ ಬಿಟ್ಟು ಕೊಡಲಿಲ್ಲ. ಆನೆಯದು ಅಷ್ಟು ದೊಡ್ಡ ದೇಹ ಅದಕ್ಕೂ ಬಿಟ್ಟುಕೊಡಲಿಲ್ಲ. ಇದು ಅನ್ಯಾಯ ಅಲ್ಲವೇ ಅಂತಾ ಅದರ ತಲೆಯಲ್ಲಿ ಹುಳ ಬಿಟ್ಟಿತು.ಕತ್ತೆ ಏನು ಹೇಳಿದರೂ ಹುಲಿ ತಲೆ ಕೆಡಿಸಿಕೊಳ್ಳಲಿಲ್ಲ . ಕತ್ತೆ ಮತ್ತೆ ಹೇಳಿತು ನಿನ್ನ ಸುತ್ತಲಿರುವ ಹುಲ್ಲು ಏಕೆ ಬೆಳ್ಳಗಿದೆ ಹುಲ್ಲು ಯಾವಾಗಲೂ ಹಸಿರು ತಾನೆ ಇರ್ಬೇಕು ಅಂದಾಗ ಅನುಮಾನದಿಂದ ಸುತ್ತಲೂ ನೋಡಿ ಎಲ್ಲಾಕಡೆ ಹಸಿರು ಬಣ್ಣವೇ ಇದೆಯಲ್ಲಾ ಎಂದಿತು ಹುಲಿ. ಆ ಸಮಯಕ್ಕೆ ಅಲ್ಲಿಗೆ ಒಂದು ನರಿ ಬಂತು.ಆಗ ನರಿಗೆ ಕತ್ತೆ ಹೇಳ್ತು ಹುಲಿ ನನ್ನ ಮಾತು ನಂಬುತ್ತಿಲ್ಲ. ನೀನೇ ಹೇಳು ಸುತ್ತಲೂ ಇರೋ ಈ ಹುಲ್ಲು ಹಸಿರೋ ಇಲ್ಲ ಬಿಳಿಯೋ.ಅದಕ್ಕೆ ನರಿ ಹೇಳ್ತು ಬಿಳಿ. ಹುಲಿ ನಂಬದೆ , ಬನ್ನಿ ಸಿಂಹದ ಹತ್ತಿರ ಹೋಗೋಣ ನೀವಿಬ್ಬರೂ ಸುಳ್ಳು ಹೇಳ್ತೀರಿ ಅಂತ ಕರೆದುಕೊಂಡು ಹೋಯ್ತು. ದೊಡ್ಡ ಬಂಡೆ ಮೇಲೆ ಸಿಂಹ ಕೂತಿದೆ. ಉಳಿದ ಪ್ರಾಣಿಗಳನ್ನ ಸಭೆಗೆ
ಕರೆದು. ಹುಲಿಗೆ ಕೇಳ್ತು. ಏನು ನಿನ್ನ ಅಹವಾಲು. ಹುಲಿ ಹೇಳ್ತು ನೋಡಿ ಸಿಂಹರಾಜ ಅಲ್ಲಿ ಕಾಣ್ತಾ ಇರೋ ಮರದ ಸುತ್ತಲೂ ಇಲ್ಲಿಂದ ನೋಡಿದರೂ ಹಸಿರೇ ಕಾಣ್ತಾ ಇದೇ.ಆದರೆ ಇವರಿಬ್ಬರೂ ಬಿಳಿ ಬಣ್ಣದ ಹುಲ್ಲು ಅಂತಾರೆ . ಸತ್ಯ ಸಂಗತಿ ನೀವೇ ಹೇಳಿ ಇವರಿಗೆ ಶಿಕ್ಷೆ ಕೊಡಿ ಎಂದಾಗ ತಕ್ಷಣ ಸಿಂಹ ಮೇಲಿಂದ ಹಾರಿಬಂದು ಹುಲಿಯ ಮುಖಕ್ಕೆ ಚೆನ್ನಾಗಿ ಗುದ್ದಿತು. ಹುಲಿಗೆ ಅರ್ಥವಾಗಲಿಲ್ಲ. ನನ್ನ ಕಣ್ಣಿಗೆ ಏನೋ ತೊಂದರೆ ಆಗಿದೆ ಅಂತ ತಿಳಿದು, ಸುಮ್ಮನೆ ಅಲ್ಲೇ ನಿಂತಿತ್ತು. ನರಿ ಮತ್ತು ಕತ್ತೆಯನ್ನ ಹತ್ತಿರಕ್ಕೆ ಕರೆದು ಹಾರ ಹಾಕಿ ಕಳುಹಿಸಿದ ಮೇಲೆ ,ಅಲ್ಲೇ ನಿಂತಿದ್ದ ಹುಲಿಗೆ ಹೇಳ್ತು. ಆ ಹುಲ್ಲು ಹಸಿರು ಬಣ್ಣವೇ. ನಾನು ಒಪ್ಪತ್ತೇನೆ. ಆದರೆ ಶಿಕ್ಷೆ ಕೊಟ್ಟು ಅವರಿಗೆ ಸನ್ಮಾನ ಮಾಡಿದ ಕಾರಣ ಹೇಳ್ತೀನಿ ಕೇಳು. ನೀನು ಈ ಕಾಡಲ್ಲಿ ಶಕ್ತಿವಂತ . ನೀನು ನಿನ್ನ ಸಮನಾದವರ ಜೊತೆ ಸ್ನೇಹ ಬೆಳಸದೆ ಕತ್ತೆ ನರಿಗಳ ಸ್ನೇಹ ಮಾಡಿದ್ದಿಯೆ. ಅದಕ್ಕೆ ಶಿಕ್ಷೆ. ನರಿ ಮತ್ತು ಕತ್ತೆ ಒಂದು ಹುಲಿಗೆ ಸುಳ್ಳನ್ನ ನಿಜ ಅಂತ ನಂಬುವಂತೆ ಮಾಡಿವ ಧೈರ್ಯಕ್ಕೆ ಮೆಚ್ಚಿ ಸನ್ಮಾನ ಅಂತ ಹೇಳಿತು ಹುಲಿ.