murali nath

Children Stories Comedy

3  

murali nath

Children Stories Comedy

ಹುಚ್ಚು ದೊರೆ

ಹುಚ್ಚು ದೊರೆ

1 min
31



ಒಬ್ಬ ರಾಜ . ಅವನಿಗೆ ಹಾಸ್ಯ ಎಂದರೆ ಬಲು ಹುಚ್ಚು. ಅರಮನೆಯಲ್ಲಿ ದಿನಾ ಸಂಜೆ ಸಭಿಕರ ಮುಂದೆ ಅವನು ಹೆಸರಿಸಿದ ಒಬ್ಬರು, ಎಲ್ಲರೂ ನಗುವಂತಹ ಒಂದು ಹಾಸ್ಯ ಭರಿತ ಚಟಾಕಿ ಹಾರಿಸಲೆಬೇಕು. ಸಭಿಕರಲ್ಲಿ ಯಾರೊಬ್ಬ ನಗದಿದ್ದರೂ ಹಾಸ್ಯಗಾರನಿಗೆ ಶಿಕ್ಷೆ ತಪ್ಪದು.ಒಂದುಬಾರಿ ಹೀಗೆ ಮೂವತ್ತು ಜನ ಸೇರಿದ್ದ ಸಭೆ. ರಾಜ ಹೆಸರಿಸಿದ ಒಬ್ಬ ಒಳ್ಳೆಯ ರಸಭರಿತ ನಗೆಚಟಾಕಿ ಹಾರಿಸಿದ. ಪಾಪ ಒಬ್ಬ ಬಿಟ್ಟು ಉಳಿದ ಎಲ್ಲರೂ ಗೊಳ್ಳಂತನಕ್ಕರು. ಅಲ್ಲೇ ನೇಮಿಸಿದ್ದ ಭಟರು ಬಂದು ಒಬ್ಬ ನಗದಿದ್ದ ಕಾರಣ ಇವನನ್ನ ಎಳೆದು ಕೊಂಡು ಹೋದರು ಈಗ ಮತ್ತೊಬ್ಬನ ಸರದಿ . ಅವನೂ ಪಾಪ ಕಷ್ಟ ಪಟ್ಟು ಹೆದರಿಕೆ ಇಂದಲೇ ಒಳ್ಳೆಯ ಹಾಸ್ಯ ಚಟಾಕಿ ಹಾರಿಸಿದ.ಮೂವತ್ತು ಜನರೂ ನಕ್ಕ ಕಾರಣ ಇವನಿಗೆ ಶಿಕ್ಷೆ ಆಗಲಿಲ್ಲ.ಎದ್ದು ಬಂದು ಮೊದಲು ನಗದೆ ಇದ್ದವನನ್ನ ಕುರಿತು ನೀನೆಲ್ಲಿ ನಗುವುದಿಲ್ಲವೋ ಎಂದು ಹೆದರಿದ್ದೆ . ಸಧ್ಯ ನನ್ನ ಹಾಸ್ಯಕ್ಕೆ ನಕ್ಕು ನನ್ನ ಕಾಪಾಡಿದೆ ಎಂದ. ಅದಕ್ಕೆ ಅವನು ಹೇಳಿದ ನಾನು ನಕ್ಕಿದ್ದು ಮೊದಲು ಅವನು ಹೇಳಿದ ಹಾಸ್ಯಕ್ಕೆ . ಅದು ನನಗೆ ಈಗ ಅರ್ಥ ಆಯ್ತು ಅಂದ. ತಕ್ಷಣ ರಾಜ ಕೇಳಿಸಿ ಕೊಂಡರೆ ತನಗೆ ಶಿಕ್ಷೆ ತಪ್ಪದೆಂಬ ಭಯಕ್ಕೆ ತಕ್ಷಣ ಅವನ ಬಾಯಿ ಮುಚ್ಚಿ ಬಿಟ್ಟ.



Rate this content
Log in