Kalpana Nath

Others

3  

Kalpana Nath

Others

ತೃಣಮಪಿನ ಚಲತಿ

ತೃಣಮಪಿನ ಚಲತಿ

4 mins
216



ಮುನಿಸ್ವಾಮಿ ಎಲ್ಲರ ನೆಚ್ಚಿನ ಮಿತ್ರ. ನಮ್ಮ ಮುನ್ಸಾಮಿ ಒಂದು ತಹಸೀಲ್ದಾರ್ ಖಚೇರಿಯಲ್ಲಿ ಜವಾನ. ಮಾಗಡಿ ಹತ್ತಿರದ ಒಂದು ಹಳ್ಳಿಯಲ್ಲಿ ಇರೋ ಇವನಿಗೆ ನಾಲ್ಕು ಎಕರೆ ಹೊಲ ಮನೆ ಎರಡು ಎಕರೆ ತೋಟ ಇದ್ದರೂ ಎಲ್ಲವನ್ನ ಏನೂ ಓದಿಲ್ಲದ ಹಿರಿಯಣ್ಣ ಚಂದ್ರಪ್ಪನಿಗೆ ಬಿಟ್ಟು ಒಬ್ಬ ಸ್ನೇಹಿತನ ಜೊತೆ ಬೆಂಗಳೂರಿಗೆ ಬಂದಾಗ. ಕೈಯಲ್ಲಿ ಐನೂರು ರೂಪಾಯಿ ಮಾತ್ರ ಇತ್ತು. 


 ಎಲೆಕ್ಷನ್ ಟೈಂನಲ್ಲಿ ಕೆಲಸ ಮಾಡಿದ್ದಾಗ, ಈ ತಾಲೂಕಿನ ಹತ್ತು ಹುಡುಗರಿಗೆ ಸರ್ಕಾರಿ ಕೆಲಸ ಕೊಡಿಸ್ತೀನಿ ಅಂತ MLA ಒಬ್ಬರು ಅವತ್ತೇ ಹೇಳಿದ್ರು. ಹಗಲು ರಾತ್ರಿ ಕಷ್ಟಪಟ್ಟು ಹಳ್ಳಿ ಹಳ್ಳಿ ಸುತ್ತಾಡಿ MLA ಕಣ್ಣಿಗೆ ಕಣೋ ಹಾಗೇ ಕೆಲಸ ಮಾಡುತ್ತಿದ್ದವರಲ್ಲಿ ನಮ್ಮ ಮುನಿ ಸಾಮಿಯೂ ಒಬ್ಬ. ಹೆಸರು ಗೊತ್ತಿಲ್ಲದ ಯಾರ ಹಿಂದೆಯೋ, ಒಂದು ವಾರ ವಿಧಾನ ಸೌಧ ಹಿಂದೆ ಮುಂದೆ ಸುತ್ತಾಡಿ, KGID ಕ್ಯಾಂಟೀನ್ ನಲ್ಲಿ ತಿನ್ಕೊಂಡು ಕೈಯ್ಯಲ್ಲಿದ್ದ ಬಿಪಿಲ್ ಕಾರ್ಡ್, ಆಧಾರ್ ಕಾರ್ಡ್, ಜಾತಿ ಪ್ರಮಾಣ ಪತ್ರ, MLA ಕೊಟ್ಶಿಫಾರಸ್ಸು ಪತ್ರ ಎಲ್ಲಾ ಜೆರಾಕ್ಸ್ ಮಾಡ್ಸಿ ಮಾಡ್ಸಿ ಸುಸ್ತಾಗಿದ್ದ. ಕೈಲಿದ್ದ ಕಾಸು ಕೂಡ ಖಾಲಿ ಆಗಿತ್ತು. ಒಂದು ತಿಂಗಳು ಆದ್ಮೇಲೆ ಅಪಾ ಯಿಂಟ್ಮೆಂಟ್ ಆರ್ಡರ್ ಬರುತ್ತೆ ಹೋಗಿ ಅಂದಾಗ ಆಕಾಶದಲ್ಲಿ ಹಾರಾಡೋ ಅಷ್ಟು ಸಂತೋಷ ಆಯ್ತು ಮುನಿಸಾಮಿ ಗೆ. 


ಒಂದುವಾರ ಆದ್ಮೇಲೆ ಸಾಹೇಬರ ಮನೇಗೆ ಹೋಗಿ ಧನ್ಯವಾದ ಹೇಳಿ ಬರೋಣ ಅಂತ ಇವನ ಜೊತೆ ಇದ್ದ ಇನ್ನೂ ಆರು ಮಂದಿ ಬಂದು ಸಾಹೇಬ್ರ ಮನೆ ಸೆಕ್ಯುರಿಟಿ ಯವನಿಗ ವಿಷಯ ತಿಳಿಸಿದರು. PA ಬರ್ತಾರೆ. ಪಕ್ಕದಲ್ಲಿ ನಿಂತ್ಕೋಳಿ. ಅವರಿಗೆ ಹೇಳಿದ್ರೆ ಆಯ್ತು. ಸಾಹೇಬ್ರು ಒಂದು ವಾರ ಸಿಗಲ್ಲ ಅಂದ. ಅಲ್ಲಿಗೆ PA ಕಾರ ಬಂತು. ಸಾರ್ ನಾವು ಮಾಗಡಿ ಇಂದ ಬಂದಿದೀವಿ. ನಮ್ಮ ಕೆಲಸ ಆಯ್ತು. ಆರ್ಡರ್ ಒಂದು ತಿಂಗಳಲ್ಲಿ ಬರತ್ತಂತೆ.. ಈ ಸಹಾಯ ಜನ್ಮದಲ್ಲಿ ಮರೆಯಲ್ಲ.  ಹೇಳಿ ಹೋಗೋಣ ಅಂತ ಬಂದ್ವಿ ಅಷ್ಟೇ ಸಾರ್ ಅಂದಾಗ. ಬನ್ನಿ ಒಳಗೆ ಬನ್ನಿ ಅಂತ ಒಳಗೆ ಕರೆದು ಹೇಳಿದ್ರು. ಈಗ ಸಾಹೇಬರು ಹೇಳಿದ ಹಾಗೇ ನಿಮ್ಮ ಕೆಲಸ ಆಯ್ತು ಅಂತ ನಿಮಗೆ ಸಂತೋಷ ಆಗಿದೆ. ನಿಮಗೆ ಆರ್ಡರ್ ಕೂಡ ಬರತ್ತೆ. ನಿಮ್ಮನ್ನ ಗುಲ್ಬರ್ಗ ಕ್ಕೆ ಒಬ್ಬನ್ನ, ರಾಯ್ಚೂ ರಿಗೆ ಒಬ್ಬನ್ನ, ಹೀಗೇ ಪೋಸ್ಟ್ ಮಾಡಿದ್ರೂ ಹೋಗ್ತೀರಾ. ಸರ್ಕಾರದ ಕೆಲಸ ಸಿಗೋದೇ ಕಷ್ಟ ಹೇಗೋ ಸಿಕ್ಕಿದೆ ಅಂತ ಕೆಲವು ವರ್ಷ ಹೋಗ್ತಿರೋ, ಇಲ್ಲ ಬೆಂಗಳೂರು ಅಥವ ಹತ್ತಿರದಲ್ಲೇ ಎಲ್ಲಾದರೂ ಬೇಕಾ ಈಗಲೇ ಹೇಳಿ. ಒಂದು ಸಲ ದೂರಕ್ಕೆ ಪೋಸ್ಟಿಂಗ್ ಆಗ್ಬಿಟ್ರೆ ಮತ್ತೆ ಈ ಕಡೆ ಬರೋ ಕನಸು ಕಾಣಬೇಡಿ. ಇದೆಲ್ಲಾ ಯಾರಾದ್ರೂ ಹೇಳಿದಾರಾ ನಿಮಗೆ ಅಂತ ಕೇಳಿದಾಗ, ಒಬ್ಬರ ಮುಖ ಒಬ್ಬರು ನೋಡ್ಕೊಂಡ್ರು. ಸಾರ್ ನಾವು ಇದನ್ನ ಯೋಚನೆ ಮಾಡೇ ಇರಲಿಲ್ಲ ಅಂದರು ಒಂದೇ ಧ್ವನಿಯಲ್ಲಿ. ಆ ಮೇಲೆ ಮಾಡೋ ಖರ್ಚನ್ನ ಈಗಲೇ ಮಾಡಿ ಹತ್ತಿರ ಹಾಕಿಸ್ಕೊಳ್ಳೋದು ಬುದ್ಧಿ ವಂತರ ಲಕ್ಷಣ . ಯೋಚನೆ ಮಾಡಿ ಹೇಳಿ. ದುಡ್ಡು ಉಳಿಸಕ್ಕೆ ಹೋಗಿ ಸಾಹೇಬ್ರಿಗೆ ಹೇಳಿದರೆ, ಕೆಲಸಾನೂ ಕೊಡ್ಸಿ ಮನೆ ಪಕ್ಕದಲ್ಲೇ ಬೇಕಾ ಅಂತ ಬೈಸಿಕೊಳ್ತೀರಿ ಅಷ್ಟೇ ಅಂತ ಹೆದರಿಸಿದರು. ಆಗಲಿ ಸಾರ್ ಏನಾದ್ರೂ ಮಾಡ್ತೀವಿ ಅಂದಾಗ ಆದಷ್ಟು ಬೇಗ ಮಾಡಿ. ಇದನ್ನ ಯಾರಿಗೂ ಹೇಳಕ್ಕೆ ಹೋಗ್ಬೇಡಿ. ಕೆಲಸಾ ನೂ ಕೈಬಿಟ್ಟು ಹೋಗುತ್ತೆ. ಸಾಹೇಬ್ರಿಗೂ ಕೆಟ್ಟ ಹೆಸರು ಬರತ್ತೆ. ಗೊತ್ತಾಯ್ತಾ ನಾಳೆ ನನಗೇ ಫೋನ್ ಮಾಡಿ. ಬರ್ಕೊಳಿ ನಂಬರ್ ಅಂತ ಕೊಟ್ಟಾಗ, ಮುನಿಸಾಮಿ ಸಾರ್ ಎಷ್ಟು ಆಗಬಹುದು ಅಂತ ಹೇಳಿದ್ರೆ ಒಳ್ಳೇದು ಅಂದಾಗ. ಯಾರಿಗೋ ಫೋನ್ ಮಾಡಿ, ಹಲೋ ನಂಜಣ್ಣ ನಾನು ಸಾಹೇಬ್ರ PA ಸ್ವಾಮಿ ಮಾತಾಡ್ತೀನಿ. class four ದು ಹತ್ತು ಪೋಸ್ಟ್ ಭರ್ತಿ ಮಾಡಕ್ಕೆ ಹೇಳಿ ದ್ರಲ್ಲ. ನಮ್ಮ ಕಡೆಯಿಂದ ಲಿಸ್ಟು ಕಳ್ಸಿತ್ತು. ಏನಾಗಿದೆ. ಕ್ಯಾಂಡಿಡೇಟ್ಸ್ ಇಲ್ಲೇ ಇದಾರೆ. ಎಲ್ಲೆಲ್ಲಿಗೆ ಪೋಸ್ಟಿಂಗ್ ಆಗಿದೆ ಅಂತ ಸ್ವಲ್ಪ ಹೇಳ್ಬಿಡು. ಆಮೇಲೆ ಮಾತಾಡ್ತಿನಿ ಅಂದಾಗ. ಓಹ್, ಹಾ ಹೂ ಅಂತ ಹೇಳಿ, ಅಯ್ಯೋ ಪಾಪ ಎಲ್ಲಾ ಬೆಂಗಳೂರಿನ ಹತ್ತಿರದವರೇ, ನಮ್ಮ ಕ್ಯಾಸ್ಟೇ ಕಣಪ್ಪ. ಏನಾದ್ರೂ ಮಾಡೋಣ. ಇಲ್ದೇ ಹೋದ್ರೆ ಕಷ್ಟ ಆಗ್ಬಿಡುತ್ತೆ ಪಾಪ. ಸರಿ ಆಯ್ತು ಅವರಿಗೆಲ್ಲಾ ಹೇಳ್ತಿನಿ. ಹೇಗೋ ಮಾಡ್ತಾರೆ ಬಿಡು. ಥಾಂಕ್ಸ್ ನಂಜಣ್ಣ. ಉಪ ಕಾರ ಆಯ್ತು ಅಂತ ಫೋನ್ ಇಟ್ಟು ಹೇಳಿದ್ರು. ನಿಮ್ಮದು ಒಂದು ತರ ಅಧೃಷ್ಟ ಅಂತ ಹೇಳ್ಬೇಕು. ಕೇಳಿ ಸ್ಕೊಂಡ್ರಾ ನಾನು ಈಗ ಮಾತಾಡಿದ್ದು. ಹತ್ತು ಜನಕ್ಕೂ ಬೆಳಗಾಂ ಚಿಕ್ಕೋಡಿ ಗುಲ್ಬರ್ಗ ಧಾರವಾಡ ಹೀಗೇ ಎಲ್ಲೆಲ್ಲೋ ಪೋಸ್ಟ್ ಮಾಡಿಬಿಟ್ಟಿದ್ದಾರೆ. ನೀವು ಮೂರು ನಾಲ್ಕು ದಿನದಲ್ಲಿ ಏನಾದ್ರೂ ಮಾಡಲೇ ಬೇಕು. ಅಂದಾಗ ಸಾರ್ ಎಷ್ಟು ಕೊಡಬೇಕು ಅಂತಾನೆ ಹೇಳ್ಲಿಲ್ವಲ್ಲ ಅಂದರು. ಹಿಂದೆ ಎಷ್ಟು ಕೊಟ್ಟಿದಾರೋ ಅಷ್ಟೇ. ಒಂದು ರೂಪಾಯಿ ಹೆಚ್ಚಾಗಿ ನಿಮ್ಮಿಂದ ಕೊಡಕ್ಕೆ ನಾನು ಬಿಡಲ್ಲ ಅಂದರು. ಅದೇ ಹೇಳಿ ಸಾರ್. ಜಮೀನು ಮನೆ ಮಾರಾದ್ರೂ ಕೆಲಸ ಉಳಿಸಿಕೊಳ್ತೀವಿ ಅಂದಾಗ ಅವರಲ್ಲಿ ಇಬ್ಬರು ಆಚೆ ಹೋದ್ರು. ಏ ಯಾಕೋ ಅವರು ಹೊರಗಡೆ ಹೋಗಿದ್ದು ಅಂತ ರೇಗಿ ಹಾಗೆಲ್ಲಾ ಮಾತಾಡೋವಾಗ ಹೊರಗೆ ಹೋಗ್ಬಾರ್ದು. ಕರೀ ಅವರನ್ನ ಅಂದಾಗ ಅವ್ರೇ ಬಂದು ಸಾರ್, ಮುನಿಸಾಮಿ ಬೇಕಾದ್ರೆ ಮನೆ ಜಮೀನು ಮಾರಿ ಕೊಡ್ತಾನೆ ಸಾರ್ ನಾವಿಬ್ರು ಕೂಲಿ ಮಾಡಿ ತಿನ್ನೋ ರು. ಎಲ್ಲಿಂದ ತರೋಣ ಅಂದರು. ಆಯ್ತು ಎಲ್ಲದಕ್ಕೂ ಒಂದು ದಾರಿ ಇರತ್ತೆ ಹುಡುಕೋಣ ಹೆದರಬೇಡಿ ಹೋಗಿ ನಾಳೆ ಫೋನ್ ಮಾಡಿ ಅಂತ ಆಚೆ ಬಂದು ಕಾರ್ ಹತ್ತಿ ಹೊರಟು ಹೋದ್ರು. 


ಅಂತೂ ನಮ್ಮ ಮುನಿಸಾಮಿಗೆ ಎರಡು ಲಕ್ಷ ಕೈ ಬಿಟ್ಟ ರೂ ಬೆಂಗಳೂರಿನಲ್ಲೇ ತಹಸೀಲ್ದಾರ್ ಕಚೇರೀಲಿ ಕೆಲಸ ಸಿಕ್ತು. ಮಾಗಡಿ ಇಂದಾನೆ ದಿನಾ ಹೋಗಿ ಬರ್ತಿದ್ದ. ಯಾರೇ ಹೊಸದಾಗಿ ಈ ಖಚೇರಿಗೆ ಬರಲಿ ಅದು ತಹಸಿಲ್ದಾರಿಂದ ಟೈಪಿಸ್ಟ್, LDC ಯಾರೇ ಇರಬಹುದು ಮುನಿಸ್ವಾಮಿ ಸಹಾಯ ಇಲ್ಲದೆ ಅವರು ಏನೂ ಮಾಡಕ್ಕೆ ಆಗ್ತಿರ್ಲಿಲ್ಲ. ಮುನಿಸಾಮಿ ಗೆ ಯಾವ ಪ್ರಮೋಷನ್ ಸಿಗಲ್ಲ ಅಂತ ಅವನಿಗೆ ಗೊತ್ತು. ಅವನಿಗೆ ಬೇಕಾಗೂ ಇಲ್ಲ. ಯಾರೇ ಹೊರಗಡೆಯವರು ಬಂದರೂ ಮುನಿಸಾಮಿಗೆ ಮೊದಲು ಸಲಾಂ ನಂತರ ಉಳಿದೋರು. ಮುನಿಸಾಮಿ ಮುಟ್ಟದ ಫೈಲ್ ಇಲ್ಲ ತಿಳಿಯದ ಕೇಸ್ ಇಲ್ಲ. ಅದಕ್ಕೂ ಹೆಚ್ಚಾಗಿ, ಹೊಸದಾಗಿ ಪೋಸ್ಟಿಂಗ್ ಆಗಿ ಬರೋ ಅಧಿಕಾರಿಗಳಿಗೆ ಒಳ್ಳೇ ಮನೆ ಕೊಡಿಸೋದ್ರಿಂದ ಸೆಕೆಂಡ್ hand ಸ್ಕೂಟರ್, ಕಾರ್ ಎಲ್ಲಾ ಮುನಿಸಾಮಿ ಮೂಲಕವೇ. ಹೆಂಗಸರಿಗಂತೂ ಒಂದು ದಿನ ಇವನು ರಜಾ ಹಾಕಿದ್ರೆ ಬಂದೋರಿಗೆಲ್ಲಾ ನಮ್ಮ ಅಸಿಸ್ಟೆಂಟ್ ಫೈಲ್ ಎಲ್ಲಿಟ್ಟಿದ್ದಾನೋ ಗೊತ್ತಿಲ್ಲ. ನೀವು ನಾಳೆ ಬಂದು ಬಿಡಿ ಅಂತ ಹೇಳಿ ಕ್ಯಾಂಟೀನ್ ಕಡೆ ಹೊರಟು ಹೋ ಗ್ತಿದ್ರು. ಸಾಹೇಬರಿಗೂ ಇವನಿಲ್ಲಾ ಅಂದ್ರೆ ಕೈ ಕಾಲೇ ಆಡ್ತಿರ್ಲಿಲ್ಲ. 


ಒಂದು ದಿನ ಮುನಿಸಾಮಿ ಯಾಕೋ ಬಂದಿಲ್ಲ. ಹೇಳದೆ ರಜಾ ಹಾಕೋನೆ ಅಲ್ಲ. ಮಾರನೇ ದಿನವೂ ಬರದೇ ಇದ್ದಾಗ ಸಾಹೇಬ್ರೇ ಜೀಪ್ ತೊಗೊಂಡು ಸೀದ ಅವನ ಮನೆಗೆ ಬಂದುಬಿಟ್ರು. ಬರೋ ದಾರಿಲಿ ಡ್ರೈವರ್ ನ ಕೇಳಿದ್ರು. ನಿನಗೇನಾದ್ರು ಹೇಳಿದ್ನಾ ಮುನಿಸಾಮಿ, ಏಕೆ ರಜಾ ಹಾಕಿದಾನೆ ಅಂತ . ಕೈಗೆ ಏನೋ ಏಟು ಬಿದ್ದಿದ್ಯಂತೆ ಕೈ ಎತ್ತಕ್ಕಾಗ್ತಿಲ್ವಂತೆ ಅಂದ. 


ಡ್ರೈವರ್ ಮನೆ ಮುಂದೆ ಜೀಪ್ ನಿಲ್ಲಿಸಿದಾಗ ಇದಾ ಮನೆ ಅಂತ ಆಶ್ಚರ್ಯವಾಗಿ ಕೇಳಿದ್ರು. ಹೌದೂ ಸಾರ್ 

ಇದು ಪಕ್ಕದ್ದು ಅಲ್ಲಿರೋ ಫ್ಲೋರ್ ಮಿಲ್ಲು ಮುನಿಸಾಮಿ ದೇ ಸಾರ್ ಅಂದ. ಯಾರೋ ಹೆಂಗಸು ಕೈ ಪಟ್ಟಿ ಕಟ್ಕೊಂ ಡು ಹೊರಗೇ ಬಂದ್ರು. ಮುನಿಸಾಮಣ್ಣ ಇಲ್ಲಾಮ್ ಅಂತ ಡ್ರೈವರ್ ಕೇಳ್ದಾಗ, ಪಕ್ಕದಲ್ಲಿದ್ದ ಸಾಹೇಬರನ್ನ ನೋಡಿ ಹಾಗೆ ಸರ್ಕಾರೀ ಜೀಪನ್ನೂ ನೋಡಿ ಬನ್ನಿ ಇದಾರೆ ಅಂತ ಒಳಗ ಕಷ್ಟಪಟ್ಟು ಓಡಿದ್ಲು. ಪಟ್ಟಾಪಟ್ಟಿ ನಿಕ್ಕರ್ ಬನ ಯನ್ ಹೆಗಲ ಮೇಲೆ ಟವಲ್ ಹಾಕ್ಕೊಂಡು ಮೇಕೆಗೆ ಗೆಜ್ಜೆ ಕಟ್ತಾ ನಿಂತಿದ್ದ ಮುನಿಸಾಮಿಗೆ ಇವರನ್ನ ನೋಡಿ ಶಾಕ್. ಸಾರ್ ನಿವ್ಯಾಕ್ ಬರಕ್ಕೋದ್ರಿ ನಾಳೆ ನಾನೇ ಬರ್ತಿದ್ದೆ ಅಂದ. ನಿನ್ನ ಕೈ ಅಲ್ವಾ ಮುರ್ದಿರೋದು ಅಂದಾಗ , ಇಲ್ಲಾ ಇವಳು ಜಾರಿ ಬಿದ್ದು ಕೈ ಮೂಳೆ ಮುರ್ಕಂಡವಳೇ ಸಾರ್ ನನಗಲ್ಲ. ಕೂತ್ಕೋಳಿ ಮಜ್ಜಿಗೆ ಕೊಡ್ತೀನಿ ಅಂದಾಗ ಬಿಸಿಲು ಹೆಚ್ಚಾಗಿದೆ ಕೊಡು ಅಂತ ಇಬ್ಬರೂ ಕುಡಿದ್ರು. ವಾಪಸ್ ಬರೋವಾಗ ಡ್ರೈವರ್ ಹೇಳ್ದ ಇದು ಮುನಿ ಸಾಮಿಗೆ ಮೂರನೆ ಎಂಡ್ತಿ ಸಾ, ಮೊದ್ಲನೇದು ಊರಲ್ಲಿ, ಎರಡನೇದು ಜಯ ನಗರದಲ್ಲಿ ಅಂದಾಗ ಸಾಹೇಬ್ರು ಹಾಗೆ ಸಿಟಿಗೆ ಒರಗಿ ಕಣ್ಣುಮುಚ್ಚಿದರೆ ಮುನಿಸಾಮಿಯ ಶ್ರೀಮಂತಿಕೆ ಮೂರು ಪತ್ನಿಯರು, ಆಫೀಸ್ನಲ್ಲಿ ಅವ ನಿಲ್ಲದೆ ಚಲಿಸದ ಕೇಸ್ ಫೈಲ್ ಗಳೇ ಕಣ್ಣು ಮುಂದೆ ಬರ್ತಿತ್ತು.


ಎಲ್ಲ ಸರ್ಕಾರೀ ಕಚೇರಿಗಳ್ಲಲೂ ಒಬ್ಬ ಮುನಿಸಾಮಿ ಇದ್ದೇ ಇರುತ್ತಾನೆ ಎನ್ನುವುದಂತೂ ಸೂರ್ಯ ಚಂದ್ರ ರಷ್ಟೇ ಸತ್ಯ.


Rate this content
Log in