ಲಾಟೀನು
ಲಾಟೀನು
ಒಮ್ಮೆ ಒಬ್ಬ ಕುರುಡ ರಾತ್ರಿ ವೇಳೆ ನಡೆದು ಹೋಗಬೇಕಾಗಿ ಬಂದಾಗ ಅವನ ಗುರು ಒಂದು ಲಾಟೀನ್ ಕೊಟ್ಟು ಹೋಗಲು ಹೇಳಿದರು. ಅದಕ್ಕೆ ಆತ ಏನಿದು ಎಂದು ಕೇಳಿಅದರ ಅವಶ್ಯಕತೆ ತನಗೆ ಹೇಗೆ, ಇದು ಇರಲಿ ಇಲ್ಲದಿರಲಿ ಒಂದೇ ಅಲ್ಲವೇ ಎಂದ. ಅದಕ್ಕೆ ಗುರು ಇದರಿಂದ ನಿನಗೆ ದಾರಿ ಕಾಣದೆ ಇರಬಹುದು ಆದರೆ ಬೇರೆಯವರಿಗೆ ಇಲ್ಲೊಬ್ಬ ಕಣ್ಣಿಲ್ಲದ ವ್ಯಕ್ತಿ ಹೋಗುತ್ತಿದ್ದಾನೆ ಅಂತ ತಿಳಿದರೆ ಆಗುವ ಅಪಾಯ ತಪ್ಪುತ್ತೆ. ತೆಗೆದುಕೊಂಡು ಹೋಗು ಎಂದರು . ದಾರಿಯಲ್ಲಿ ಎದುರಿಗೆ ಒಬ್ಬ ವ್ಯಕ್ತಿ ಬಂದು ಕೈ ಹಿಡಿದು ರಸ್ತೆ ದಾಟಲು ಸಹಾಯಮಾಡುವಾಗ ಕೇಳಿದ ನಿನ್ನ ಕೈಯ್ಯಲ್ಲಿ ಲಾಟೀನು ಏತಕ್ಕೆ ನಿನಗಂತೂ ಕಾಣಲ್ಲ ಅದರ ಉಪಯೋಗವಿಲ್ಲ ಎಂದ .. ಅದಕ್ಕೆ ಅವನ ಗುರು ಹೇಳಿದ್ದನ್ನ ಅವನಿಗೆ ಹೇಳಿದ. ಅದಕ್ಕೆ ನಗುತ್ತಾ ಹೇಳಿದ ನಾನು ಕೇಳುತ್ತಾ ಇರೋದು ಆರಿಹೋಗಿರೋ ಲಾಟೀನು ಏಕೆ ಅಂತ. ಪಾಪ ಯಾವಾಗಲೋ ಗಾಳಿಗೆ ಅದು ಆರಿಹೋಗಿರುವುದು ಅವನಿಗೆ ಹೇಗೆ ಗೊತ್ತಾಗಬೇಕು ಅಲ್ಲವೇ!