ಕತ್ತೆ ಮತ್ತು ಕುದುರೆ
ಕತ್ತೆ ಮತ್ತು ಕುದುರೆ
ಒಬ್ಬ ಒಂದು ಕುದುರೆಯನ್ನ ಸಾಕಿ ಸವಾರಿ ಮಾಡುವ ಆಸೆ ಹೊಂದಿದ್ದ . ಆದರೆ ಅವನಿಗೆ ಅದು ಬಹಳ ಕಷ್ಟ ವಾಯ್ತು. ಕುದುರೆಯ ಬದಲು ಒಂದು ಕತ್ತೆಯನ್ನ ತಂದು,ಒಂದು ದಿನ ವೇಗವಾಗಿ ಆದರ ಮೇಲೆ ಸವಾರಿ ಮಾಡಿಕೊಂಡು ಹೋದದ್ದನ್ನು ಕಂಡ ಜನ ನಕ್ಕು ಕೇಳಿದಾಗ ಅವನು ಹೇಳಿದ್ದು ನನ್ನ ಕತ್ತೆ ಯಾವ ದಿಕ್ಕಿಗೆ ಹೋಗುತ್ತೋ ಆಕಡೆ ನನಗಿರುವ ಎಲ್ಲಾ ಆಸೆ ಮುಗಿಸಿಕೊಂಡು ಬಿಡ್ತೀನಿ . ಅದರಲ್ಲಿ ಏನು ತಪ್ಪು ಅಂತ.
ಇಲ್ಲಿ ಕತ್ತೆ ಅನ್ನುವುದು ನಮ್ಮ ಮನಸು . ಕಡಿವಾಣ ವಿಲ್ಲದ ಕತ್ತೆ ಮೇಲೆ ಸವಾರಿ ಮಾಡುವುದು ಅಂದರೆ ಅದು ಹೋದ ದಾರಿಯಲ್ಲಿ ನಾವು ಹೋಗುವುದು. ಅದೇ ನಾವು ಸಾಕಿ ಕಡಿವಾಣ ಹಾಕಿರುವ ಕುದುರೆ ಆದರೆ ,ಅದು ನಾವು ಹೇಳಿದಂತೆ ಕೇಳುತ್ತೆ. ನಮ್ಮ ಮನಸ್ಸು ಹಾಗೆ ತಾನೇ ಇರಬೇಕು. ನಾವು ನಮ್ಮ ಹಿಡಿತದಲ್ಲಿರುವ ಕುದುರೆ ಸವಾರಿ ಮಾಡೋಣ. ಕತ್ತೆಯಂತೆ ಅದು ಹೋದ ದಾರಿಗೆ
ನಾವು ಹೋದಾಗ ಆಗುವ ಅನಾಹುತದಿಂದ ಪಾರಾಗೋಣ .