murali nath

Children Stories Fantasy Others

4  

murali nath

Children Stories Fantasy Others

ಜಿಪುಣ

ಜಿಪುಣ

2 mins
96



ಒಬ್ಬ ಮಹಾ ಜಿಪುಣ ಇದ್ದ. ಒಮ್ಮೆ ದೇವರ ಹತ್ತಿರ ಬಂದು ಕೇಳಿಕೊಂಡ ನನಗೆ ಒಂದು ಲಕ್ಷ ರೂಪಾಯಿ ಕೊಡಿಸು ನಿನಗೆ ಒಂದು ತೆಂಗಿನ ಕಾಯಿ ಒಡಿತೀನಿ ಅಂತ. . ದೇವರು ಒಪ್ಪಿ ಹುಂಡಿ ಹತ್ತಿರ ಬಾ ಎಂದು ಹೇಳಿ ಒಂದು ಲಕ್ಷ ತೆಗೆದು ಕೊಟ್ಟ. ಅದನ್ನ ಭದ್ರವಾಗಿ ತನ್ನ ಸೊಂಟದಲ್ಲಿ ಸೇರಿಸಿ ಹೊರ ಬಂದ. ಅಲ್ಲೇ ಕಾಯಿ ಬೆಲೆ ಕೇಳಿದ 30 ರೂಪಾಯಿ ಹೇಳಿದ್ದಕ್ಕೆ ಚಿಕ್ಕದು ಎಲ್ಲಾದರೂ ಇರಬಹುದೆಂದು ಅಲ್ಲಿ ಇಲ್ಲಿ ಹುಡುಕುತ್ತಾ ಹೊರ ರಸ್ತೆಗೆ ಬಂದುಬಿಟ್ಟ. ಅಲ್ಲಿ ರಸ್ತೆ ಬದಿ ತೆಂಗಿನ ಮರ ನೋಡಿ ಹತ್ತಿದ . ಇದ್ದಕ್ಕಿದ್ದ ಹಾಗೆ ಭಾರಿ ಮಳೆ ಗುಡುಗು ಸಿಡಿಲು ಶುರು ಆಯ್ತು. ಕೆಳಗೆ ನೋಡಿದರೆ ಹೆಚ್ಚು ಹೆಚ್ಚು ನೀರು ಬರ್ತಾ ಇದೆ. ಇವನಿಗೆ ತನ್ನ ಹತ್ತಿರ ಇರೋ ಲಕ್ಷ ರೂಪಾಯಿನ ಯೋಚನೆ. ಅಲ್ಲಿಗೆ ಒಂದು ಆನೆ ಬಂದು ಕೆಳಗಡೆ ನೀರಲ್ಲಿ ನಿಂತಿದ್ದು ನೋಡಿ ಅದರ ಮಾವುತನಿಗೆ ಹೇಳಿದ. ನನಗೆ ಸ್ವಲ್ಪ ಸಹಾಯ ಮಾಡು ನನ್ನ ಆನೆ ಮೇಲೆ ಇಳಿಸಿಕೊ ಐನೂರು ರೂಪಾಯಿ ಕೊಡ್ತೀನಿ . ನನ ಹತ್ತಿರ ಒಂದು ಲಕ್ಷ ಇದೆ ಅಂದ . ಐನೂರರ ಆಸೆಗೆ ಆನೆ ಮೇಲೆ ನಿಂತು ಅವನ ಕಾಲನ್ನ ಹಿಡಿದುಕೊಳ್ಳುವ ಸಮಯಕ್ಕೆ ಆನೆ ಮುಂದೆ ಹೊರಟುಹೋಯ್ತು.ಹೆದರಿದ ಮಾವುತ ಅವನ ಕಾಲನ್ನ ಹಿಡಿದು ನೀನು ಗಟ್ಟಿಯಾಗಿ ಮೇಲೆ ಹಿಡಿದುಕೊ ಇಲ್ಲಾಂದರೆ ಇಬ್ಬರೂ ಸತ್ತುಹೋಗ್ತಿವಿ ಅಂದ. ಜಿಪುಣ ಹಾಗಾದರೆ ನೀನೇ ಸಾವಿರ ಕೊಡು ಅಂದ ಜೀವ ಭಯಕ್ಕೆ ಒಪ್ಪಿಕೊಂಡ. ಸ್ವಲ್ಪ ಹೊತ್ತಿನಲ್ಲೇ ಅಲ್ಲಿ ಒಬ್ಬ ಒಂಟೇ ಸವಾರ ಬಂದ . ಮಾವುತ ಕೂಗಿ ಹೇಳಿದ ಇಬ್ಬರೂ ಮರದಲ್ಲಿ ನೇತಾಡುತ್ತಿದ್ದೀವಿ ಸ್ವಲ್ಪ ಒಂಟೆ ಮೇಲೆ ಇಳಿಸು ಇಬ್ಬರು ಸೇರಿ ಐನೂರು ರೂಪಾಯಿ ಕೊಡ್ತೀವಿ ಅಂತ. ಅವನು ಆಗಲ್ಲ ಐದು ಸಾವಿರ ಕೊಟ್ಟರೆ ಸಹಾಯ ಮಾಡ್ತೀನಿ ಅಂದ. ಜಿಪುಣ ಹೇಳ್ದ ಇಲ್ಲ ಆಗಲ್ಲ. ಐದುಸಾವಿರ ಆದ್ರೆ ನೀನೇ ಕೊಡಬೇಕು ಇಲ್ಲಾಂದ್ರೆ ಕೈ ಬಿಟ್ಟು ಬಿಡ್ತೀನಿ ಅಂತ ಹೆದರಿಸಿದ. ಮಾವುತನ ಹತ್ತಿರ ಐದು ಸಾವಿರ ಇಲ್ಲ. ಒಂದು ಲಕ್ಷ ಇರೋನು ಕೊಡಲ್ಲ . ನೀವು ಸಾಯಿರಿ ಅಂತ ಒಂಟೆಯವನು ಹೊರಟು ಹೋದ. ಜಿಪುಣನ ಪಂಚೆಯಲ್ಲಿ ಸೇರಿಸಿ ಕಟ್ಟಿದ್ದ ದುಡ್ಡು ಕೆಳಗೆ ನೀರಲ್ಲಿ ಬಿದ್ದು ಹೋಯ್ತು. ಲಕ್ಷ ರೂಪಾಯಿ ಅಂತ ಕಿರುಚಿ ಕೈಬಿಟ್ಟ. ಇಬ್ಬರೂ ಕೆಳಗೆ ಬಿದ್ದರು. ಹೀಗೆ ಲಕ್ಷ ರೂಪಾಯಿ ಮಾತ್ರ ಬಂದ ಹಾಗೆ ಹೊರಟು ಹೋಯ್ತು.

   ನೀತಿ : ಅತಿ ಆಸೆ ಗತಿ ಕೇಡು


Rate this content
Log in