ಹುಡುಗಾಟ
ಹುಡುಗಾಟ


ಒಮ್ಮೆ ಶಾಲೆಯಲ್ಲಿ ಒಬ್ಬ ಬಾಲಕ ಇಂಕ್ ಪೆನ್ ನ ಕ್ಯಾಪ್ ತೆಗೆದು ಡೆಸ್ಕ್ ಮೇಲೆ ಇಟ್ಟಿದ್ದ . ಮುಂದಿನ ಬೆಂಚಿನಲ್ಲಿ ಕುಳಿತ ಹುಡುಗಿ ಅಂದು ಬಿಳಿ ಬಟ್ಟೆ ಹಾಕಿಕೊಂಡು ಬಂದಿತ್ತು. ಇವನಿಗೆ ಪೆನ್ ನ ಇಂಕು ಅವಳ ಬಟ್ಟೆಗೆ ಹೀರಿ ಕೊಂಡು ಒಂದು ದೊಡ್ಡ ಕಲೆ ಮಾಡಿ ಸಂತೋಷ ಪಡುವ ಆಸೆ.(ಹುಡುಗ ಬುದ್ದಿ) ಅವನು ತಿಳಿದಂತೆ ಸ್ವಲ್ಪ ಹೊತ್ತಿನಲ್ಲೇ ಕಾಟನ್ ಬಟ್ಟೆ ಇಂಕ್ ಎಲ್ಲಾ ಹೀರಿ ದೊಡ್ಡ ಕಲೆ ಆಯ್ತು. ಹೆದರಿ ಈ ಬಾಲಕ ಜಾಗ ಬದಲಾಯಿಸಿ ಮುಂದೆ ಹೋಗಿ ಕುಳಿತ. ಕ್ಲಾಸ್ ಬಿಟ್ಟಾಗ ಆ ಹುಡುಗಿಯ ಗೆಳತಿಯರು ನೋಡಿ ನಕ್ಕರು.ಅವಳಿಗೆ ಅವಮಾನವಾಗಿ ಅಳುತ್ತಾ ಉಪಾಧ್ಯಾಯರ ಬಳಿ ಬಂದು ಹೇಳಿದಳು. ಅವರಿಗೆ ಈ ಹುಡುಗಿ ಹಿಂದೆ ಕುಳಿತಿದ್ದವನು ಯಾರೆಂದು ಗ್ರಹಿಸಿ ಸ್ಟಾಫ್ ರೂಮ್ ಗೆಕರೆಸಿದರು. ಪೆನ್ ಕೊಡು ಅಂತ ಕೇಳಿದಾಗ ಸುಮ್ಮನೆ ತೆಗೆದು ಕೊಟ್ಟ. ಅದರಲ್ಲಿ ಉಳಿದಿದ್ದ ಇಂಕ್ ಹೊರಗೆ ಚೆಲ್ಲಿ ವಾಪಸ್ ಕೊಟ್ಟು ಹೋಗಲು ಹೇಳಿದರು. ದೊಡ್ಡ ಶಿಕ್ಷೆ ಕಾದಿದೆ ಎಂದುಕೊಂಡವನಿಗೆ ಬಹಳ ಆಶ್ಚರ್ಯ.ಆದರೆ ಆ ಒಂದು ಸಣ್ಣ ತುಂಟತನದ ಘಟನೆ ಹುಡುಗನ ಜೀವನದಲ್ಲಿ ದೊಡ್ಡ ಬದಲಾವಣೆಯನ್ನು ತಂದಿತು .ಇವರು ಇಂದುಹೆಣ್ಣೆಂದರೆ ದೇವೀ ಸ್ವರೂಪವೆಂದು ಆರಾಧಿಸಿ ದೇಶ ವಿದೇಶಗಳಲ್ಲಿ ಖ್ಯಾತಿ ಗಳಿಸಿರುವ ಈಶ ಫೌಂಡೇಶನ್ ಸಂಸ್ಥಾಪಕ ಪ್ರಖ್ಯಾತ ವಾಗ್ಮಿ ಸಂತ ಜಗ್ಗಿ ವಾಸುದೇವ್ ಅವರೇ ಮತ್ಯಾರೂ ಅಲ್ಲ.