murali nath

Others

3  

murali nath

Others

ದರೋಡೆ ಕೋರ

ದರೋಡೆ ಕೋರ

3 mins
13 


ಮಣಿ ಒಬ್ಬ ಭಯಂಕರ ದರೋಡೆಕೋರ . ಇವನು ಒಂಟಿಯಾಗಿಯೇ ದರೋಡೆ ಮಾಡೋದು . ಮನೆಗಳೇ ಹೆಚ್ಚಾಗಿ ಅದರಲ್ಲೂ ವೃದ್ಧರು ಇರುವ ಮನೆಗಳೇ ಇವನ ಟಾರ್ಗೆಟ್. ಹೀಗೆ ದೋಚಿದ ಹಣವನ್ನ ಮನ ಬಂದಂತೆ ಖರ್ಚುಮಾಡಿ ಸುಖ ಜೀವನ ಮಾಡಿಕೊಂಡಿದ್ದ . ದರೋಡೆಗೆ ಅಡ್ಡ ಬಂದವರನ್ನ ಚಾಕು , ಚೂರಿಯಿಂದ ತಿವಿಯಲೂ ಅಂಜುತ್ತಿರಲಿಲ್ಲ , ಅಂತಹ ಭಯಂಕರ ವ್ಯಕ್ತಿ. ಐದಾರು ಭಾಷೆಯಲ್ಲಿ ಸುಲಲಿತವಾಗಿ ಮಾತನಾಡಲು ಕಲಿತಿದ್ದರಿಂದ ಯಾವ ರಾಜ್ಯದವನೆಂದು ಕಂಡು ಹಿಡಿಯುವುದು ಕಷ್ಟ. ಒಂದು ಹೋಟೆಲಿನಲ್ಲಿ ರೂಂ ಬಾಡಿಗೆಗೆ ತೆಗೆದುಕೊಂಡರೆ ಐದಾರು ತಿಂಗಳು ಅಲ್ಲೇ ಇದ್ದು ಬೇರೊಂದು ಲಾಡ್ಜ್ ಗೆ ಬದಲಾಯಿಸುತ್ತಿದ್ದ.


ಸದಾ ಕಪ್ಪು ಬಣ್ಣದ ಮೋಟಾರ್ ಸೈಕಲ್ ನಲ್ಲೇ ಇವನ ತಿರುಗಾಟ. ಒಂದು ದಿನ ಒಂದು ಮನೆಗೆ ನುಗ್ಗಿ ದರೋಡೆ ಮಾಡಬೇಕೆಂದು ನಿಶ್ಚಯ ಮಾಡಿದರೆ ಮುಗಿಯಿತು. ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಒಂದುವಾರಕ್ಕೆ ಒಮ್ಮೆ ಉತ್ತರ ಭಾರತದ ಕಡೆ ವಿಮಾನದಲ್ಲಿ ಹೋಗೋದು .ಹದಿನೈದು ದಿನ ಆದಮೇಲೆ ಮತ್ತೆ ವಾಪಸ್ ಬರೋದು ಇವನ ಕೆಲಸ . ಪೊಲೀಸರ ಕೈಗೂ ಸಿಗದೆ ಒಬ್ಬ ಗಣ್ಯ ವ್ಯಕ್ತಿಯಂತೆ ಕಯ್ಯಲೊಂದು brief case ಹಿಡಿದು ತಿರುಗಾಡುವ ಇವನು ನಗರ ವಾಸಿಗಳ ನಿದ್ದೆಗೆಡಿಸಿದ್ದ. ಪೊಲೀಸರ ಕೈಗಂತೂ ಒಮ್ಮೆಯೂ ಸಿಕ್ಕಿರಲಿಲ್ಲ. ಹೀಗೆ ಒಂದು ದಿನ ಮನೆಯಲ್ಲಿ ವಯಸ್ಸಾದ ದಂಪತಿ ಮಾತ್ರ ಇರುವುದನ್ನ ತಿಳಿದು ಸಂಜೆ ಬಾಗಿಲು ತಟ್ಟಿದ. ಒಂದು ಮುದುಕಿ ಬಂದು ಬಾಗಿಲು ತೆಗೆದಾಗ ,ಚಾಕು ತೆಗೆದು ಕತ್ತಿನ ಬಳಿ ಹಿಡಿದ . ಆ ಮುದುಕಿ ಸ್ವಲ್ಪವೂ ಹೆದರದೆ ಏನಪ್ಪಾ ಮಾಡ್ತಾ ಇದಿಯೇ

ನಿನ್ನ ಫಾದರ್ ಬೆಂಜಮಿನ್ ತಾನೇ ಕಳಿಸಿದ್ದು .ನಮ್ಮ ಮನೆಗೆ ಬರಕ್ಕೆ ಭಯಾನಾ ಚಾಕು ಹಿಡ್ಕೊಂಡು ಬರಬೇಕಾ. ಬಾ ಅಂತ ಅವರ ಕೋಣೆ ಗೆ ಅವನ ಇನ್ನೊಂದು ಕೈಯ್ವನ ಹಿಡಿದು ಕರೆದೊಯ್ದರು. ಅಲ್ಲಿದ್ದ ಕುರ್ಚಿ ಮೇಲೆ ಕುಳತುಕೊಳ್ಳಲು ಹೇಳಿ , ಒಂದು ನಿಮಿಷ ಇರು ಕಾಫಿ ತೊಗೊಂಡು ಬರ್ತೀನಿ ಅಂತ ನಿಧಾನಕ್ಕೆ ಅಡುಗೆ ಮನೆ ಕಡೆ ಹೋದರು.ಇವನು ಎಲ್ಲಾಕಡೆ ನೋಡಿದ . ಇದೊಂದು ಹಳೆಯ ಕೇರಳಿಗರ ಮನೆ ಅಂತ ನೋಡಿದ ತಕ್ಷಣ ಗೊತ್ತಾಯ್ತು. ಅಜ್ಜಿ ಫ್ಲಾಸ್ಕ್ ನಲ್ಲಿದ್ದ ಕಾಫಿ ತಂದು ಕೊಟ್ಟರು. ಕುಡಿಯೋವಾಗ ತಲೆ ದಿಂಬಿನ ಕೆಳಗಿದ್ದ ಹಳೇ ಬೈಬಲ್ ನ ಕೊಟ್ಟು ಫಾದರ್ ಗೆ ಕೊಟ್ಟು ಥಾಂಕ್ಸ್ ಅಂತ ಹೇಳಪ್ಪ ಅಂದರು. ಸಕ್ಕರೆ ಹಾಲು ಇಲ್ಲದ ಬ್ಲಾಕ್ ಕಾಫಿ ಅರ್ಧ ಮಾತ್ರ ಕುಡಿದು ಕೈಯ್ಯಲ್ಲಿ ಬೈಬಲ್ ತೊಗೊಂಡ. ನಿನ್ನ ಹೆಸರು ಕೇಳೋದೇ ಮರತೆ ಅಂದರು ಅಜ್ಜಿ. ಹೆಸರಾ ಮಣಿ ಅಂದ. ಹಿಂದೂನಾ ಅಂದರು ಅಲ್ಲ ಅಂದ. ಮತ್ತೇನು ಅಂದರು ನನಗೆ ಆರೀತಿ ಯಾವುದೂ ಗೊತ್ತಿಲ್ಲ ಅಂದ. ಹೋಗಲಿ ಬಿಡು ,ಫಾದರ್ ಹತ್ತಿರ ಇದಿ ಅಂದರೆ ಸ್ವರ್ಗಕ್ಕೆ ಹತ್ತಿರ ಇದ್ದಿಯೆ ಅಂತ. ಅಷ್ಟರಲ್ಲಿ ಪಕ್ಕದ ಕೋಣೆಯಿಂದ ಗಂಡಸಿನ ಧ್ವನಿ ಬಂತು ಯಾರೋ ಮುದುಕರು ಅಂತ ಗೊತ್ತಾಯ್ತು. ಯಾರದು ಜಾಫರ್ರಾ ಅಂದರು. ಅಷ್ಟರಲ್ಲಿ ಅಜ್ಜಿ ಅಲ್ಲಿ ಹೋಗಿ ಸಿಕ್ಕಾಕ್ಕೊ ಬೇಡ ನಿನ್ನ ತಲೆ ತಿಂತಾರೆ.ಅನ್ನೋ ಹೊತ್ತಿಗೆ ಕೋಲು ಹಿಡಿದು ಕನ್ನಡಕ ಸರಿ ಮಾಡ್ಕೊಂಡು ಹೊರಗೆ ಬಂದು, ಓಹ್ ಜಾಫರ್ ನನಗೆ ಧ್ವನಿಯಲ್ಲಿ ಗೊತ್ತಾಯ್ತು ಒಳಗೆ ಬಾ ಅಂತ ಕರೆದರು.ಈಗ ವಿಧಿ ಇಲ್ಲದೆ ಒಳಗೆ ಹೋದ ಏನಪ್ಪಾ ಹೇಗಿದ್ದಾರೆ ನಿಮ್ಮ ಅಣ್ಣ ನಾನು ನಿಮ್ಮ ಅಣ್ಣ ಆಗ ತಿಹಾರ್ ಜೈಲಲ್ಲಿ ಒಂದು ವರ್ಷ ಇದ್ದುದು ಮರೆಯಕ್ಕಾಗಲ್ಲ. ಹೇಗಿದ್ದಾರೆ. ಅವರ ವ್ಯಾಪಾರ ಹೇಗಿದೆ ಅಂತ ಏನೇನೋ ಕೇಳ್ತಾ ಇದಾರೆ. ಇವನಿಗೆ ಅಲ್ಲಿಂದ ಹೇಗೋ ತಪ್ಪಿಸಿ ಕೊಂಡು ಹೋದ್ರೆ ಸಾಕು ಅನಿಸ್ತು. ಆದರೆ ಮುದುಕ ಬಿಡ್ತಾನೆ ಇಲ್ಲ . ಅಜ್ಜಿ ಒಳಗೆ ಬಂದು . ಬಿಡಿ ಅವನು ಜಾಫರ್ ಅಲ್ಲ ಮಣಿ ಅಂದಾಗ ಅಯ್ಯೋ ಹೌದಾ ಗೊತ್ತಾಗಲಿಲ್ಲ ಅಂದರು . ಹೇಗೋ ಅಂತೂ ದರೋಡೆ ಗೆ ಬಂದಿರೋದನ್ನ ಮರೆತು

Bible ಹಿಡಿದು ಹೋಗಬೇಕಾಯಿತು.ಸೀದಾ ಹೋಟೆಲ್ ಗೆ ವಾಪಸ್ ಗೆ ಬಂದ. ಅಲ್ಲಿ ಇವನಿಗಾಗಿ ಒಬ್ಬಳು ಪರಿಚಯದ ಹುಡುಗಿ reception ನಲ್ಲಿ ಕಾದಿದ್ದಳು. ಒಟ್ಟಿಗೆ ರೂಮಿಗೆ ಬಂದರು. ಕೈಯ್ಯಲ್ಲಿ ಏನಿದು ಬೈಬಲ್ ತರ ಇದೆ. ನಿನಗೆ ಯಾರೋ ಒಳ್ಳೆದಾರಿ ತೋರಿಸೋ ಹಾಗೆ ಕಾಣ್ತಾ ಇದೆ ಯಲ್ಲಾ ಅಂದಾಗ , ಇಲ್ಲ ಇವತ್ತು ನನ್ನ ಕೆಲಸ ಎಲ್ಲ ಹಾಳು ಮಾಡಿಬಿಟ್ರು ಇಬ್ಬರು ಅಜ್ಜ ಅಜ್ಜಿ. ಹೌದಾ ಏನಾಯ್ತು ಅಂದಾಗ ಹೇಳ್ದ. ನಂದಿನಿ ಹೋಟೆಲ್ ಪಕ್ಕ ಇರೋ ಒಂದು ಮನೇಲಿ ಇಬ್ಬರೇ ಇರೋದು ಗೊತ್ತಿತ್ತು. ಅದಕ್ಕೆ ಇವತ್ತು ಅಲ್ಲಿಗೆ ಹೋಗಿದ್ದೆ. ಮನೇಲಿರೋ ಇಬ್ಬರೂ ನನ್ನ ತಲೆ ತಿಂದ್ರು.ನನ್ನ ಕೆಲಸ ಹಾಳಾಯ್ತು. ಹೌದು ಈ ಬೈಬಲ್ ಏಕೆ ತಂದೆ. ಅದು ಯಾರೋ ಬೆಂಜಮಿನ್ ಫಾದರ್ ಅಂತೆ ಇದನ್ನ ನಾನು ಹೋಗಿ ಅವರಿಗೆ ಕೊಡಬೇಕಂತೆ. ನಾನೆಲ್ಲಿ ಹುಡುಕಿಕೊಂಡು ಹೋಗ್ಲಿ ,ಅಂದ ತಕ್ಷಣ ಕಿತ್ತುಕೊಂಡು ಪುಸ್ತಕವನ್ನ ಕಣ್ಣಿಗೆ ಒತ್ತಿಕೊಂಡು ಹಾಗೆ ಹೇಳಬಾರದು ನಾನು ಹೋಗಿ ಕೊಡ್ತೀನಿ ಅಂದಳು. ನಿನಗೆ ಅವರು ಹೇಗೆ ಗೊತ್ತು ಅಂದ. ನಿನಗ್ಯಾಕೆ ನಾನುಹೋಗಿ ಕೊಡ್ತೀನಿ.ಒಂದು ಪ್ರಶ್ನೆ ಆ ಮನೆಗೆ ಹೋದಾಗ ಅವರಿಗೆ ಹೆದರಿಸಿ ಕಟ್ಟಿಹಾಕಿ ಮನೆ ಎಲ್ಲ ಹುಡುಕ ಬೇಕು ಅಂತ ಏಕೆ ಅನಿಸಲಿಲ್ಲ. ಚಾಕು ತೋರಿಸಿದರೂ ಹೆದರದ ಅಜ್ಜಿ ಅದು . ಅದಕ್ಕೆ ಸುಮ್ಮನಿದ್ದೆ. . ಆ ಕಾಫಿ ಬೇರೆ ಹಾಲಿಲ್ಲ ಸಕ್ಕರೆ ಇಲ್ಲ ಅಂದ . ಆಗ ನಗುತ್ತಾ ಹೇಳಿದಳು ಅದನ್ನ ನಾನೇ ಮಾಡಿದ್ದು. ಅವರು ನನ್ನ ಅಜ್ಜಿ ತಾತ. ನಾನು ಯಾವಾಗಲೂ ಅಲ್ಲೇ ಇರೋದು. ದೇವರ ದಯೆ ನೀನು ಅವರಿಗೆ ಏನೂ ಮಾಡ್ಲಿಲ್ಲ ಸಧ್ಯಕ್ಕೆ ಅಂದಾಗ ಅವಳ ಮುಖಾನೆ ನೋಡ್ತಾ ಇದ್ದ.Rate this content
Log in