Shridevi Patil

Children Stories Inspirational Others

4  

Shridevi Patil

Children Stories Inspirational Others

ಆಯ್ಕೆಯ ದಾರಿ ಸರಿಯಾಗಿರಲಿ.

ಆಯ್ಕೆಯ ದಾರಿ ಸರಿಯಾಗಿರಲಿ.

2 mins
581


ಜೀವನ ಮಾಡಲು ಯಾವ ಕೆಲಸವಾದರೇನು? ದಾರಿ ಸರಿಯಿರಲಿ.


ಮೇಲಿನ ವಾಕ್ಯವನ್ನೊಮ್ಮೆ ಸರಿಯಾಗಿ ಓದಿ ನೋಡಿದಾಗ ಅದರ ಸರಿಯಾದ ಅರ್ಥ ಗೋಚರಿಸುತ್ತದೆ ಅಲ್ಲವೇ. ಇರುವುದೊಂದು ಜೀವನ , ಆ ಜೀವನ ನಡೆಸಲು ಉತ್ತಮ ಮಾರ್ಗದಲ್ಲಿ ಯಾವ ಕೆಲಸವನ್ನಾದರೂ ಸರಿ ಮಾಡಿ. ದುಡಿಮೆಗೆ ತಕ್ಕ ಪ್ರತಿಫಲ ಇದ್ದೆ ಇರುತ್ತದೆ.


ಉದಯಚಂದ್ರ ಶ್ರಮಜೀವಿ. ಕಾಯಕಯೋಗಿ. ಒಂದು ದಿನವೂ ಕೆಲಸವಿಲ್ಲದೆ ಸುಮ್ಮನೆ ಕುಳಿತವನಲ್ಲ , ಕೆಲಸವಿಲ್ಲದ ದಿನ ಏನೋ ಕಳೆದುಕೊಂಡ ಭಾವ ಆತನದು. ಮೈ ಮುರಿದು ದುಡಿದು , ಬೆವರು ಹರಿಸಿದರೆ , ಅದಕ್ಕೆ ಆ ಭಗವಂತ ಪ್ರತಿಫಲವನ್ನು ಕೊಟ್ಟೆ ಕೊಡುತ್ತಾನೆ. ನ್ಯಾಯಯುತವಾದ , ಸನ್ಮಾರ್ಗದಲ್ಲಿ ನಡೆಯಬೇಕು ಎನ್ನುವುದೊಂದೆ ಉದಯಚಂದ್ರನ ರೂಲ್ಸ್. ಮನೆಯಲ್ಲಿ ಎಲ್ಲರಿಗೂ ಅದನ್ನೇ ಹೇಳುತ್ತಿದ್ದನು.


ಆತನು ಚಿಕ್ಕವನಿರುವಾಗ ಮನೆಯಲ್ಲಿಯ ಬಡತನ ಕಂಡು , ಎಲ್ಲರೂ ಓದುತ್ತ ಕುಳಿತರೆ ಹೊಟ್ಟೆಗೆ ತಿನ್ನುವುದೇನನ್ನು? ಎನ್ನುತ್ತಾ ತನ್ನ ಓದಿಗೆ ಆರನೇ ತರಗತಿಯಿದ್ದಾಗಲೇ ತಿಲಾಂಜಲಿ ಹಾಡಿದನು. ಆದರೆ ಅಣ್ಣನ ಓದಿಗೆ ಸಹಕಾರ ನೀಡುತ್ತಾ , ತಾನು ಕೂಲಿ ಕೆಲಸಕ್ಕೆ ಹೋಗುತ್ತಿದ್ದನು. ಯಾರಾದರೂ ಮನೆ ಕಟ್ಟುತ್ತಿದ್ದರೆ ಅಲ್ಲಿ ನೀರು ಹೊಡಿಯಲು ಹೋಗುವುದು , ಇಟ್ಟಿಗೆಗಳನ್ನು ಕೊಡಲು ಹೋಗುವುದು , ಅಲ್ಲಿಯೂ ಒಂದೊತ್ತು ಊಟ ಮಾಡಿ ,ಇಲ್ಲವಾದರೆ ಉಪವಾಸ ಮಾಡುತ್ತ ಕಾಲ ಕಳೆಯುತ್ತಿದ್ದನು. ಹೀಗೆ ಬೆಳೆಯುತ್ತ ಅವರಿವರ ಟ್ರಾಕ್ಟರ್ ಹತ್ತಿ ಅದರ ಡ್ರೈವಿಂಗ್ ಕೂಡ ಕಲಿತನು. ಈಗಂತೂ ಹಗಲು ರಾತ್ರಿಯೆನ್ನದೆ ಬೇರೆಯವರ ಟ್ರಾಕ್ಟರನ್ನು ಬಾಡಿಗೆಗೆ ಹೊಡಿಯುತ್ತಿದ್ದನು. ತದ ನಂತರ ಮನೆಯ ಕಡೆ ಅಲ್ಪ ಸುಧಾರಣೆ ಕಾಣತೊಡಗಿತು.



ಉದಯಚಂದ್ರ ಮದುವೆ ವಯಸ್ಸಿಗೆ ಬರಲು ,ತಾನೇ ನೋಡಿದ , ಇಷ್ಟ ಪಟ್ಟ ಹುಡುಗಿಯನ್ನು ಮದುವೆಯಾದನು. ಸೌಭಾಗ್ಯ ಎಂಬ ಹುಡುಗಿ ಆತನ ಮನೆ ,ಹಾಗೂ ಮನಸ್ಸನ್ನು ತುಂಬಿದ ಚೆಲುವೆ. ಸೌಭಾಗ್ಯ ಹೆಸರಲ್ಲಿ ಮಾತ್ರವಲ್ಲದೆ ಕಾಲ್ಗುಣದಲ್ಲಿಯೂ ಆಕೆ ಸಂಪೂರ್ಣ ಭಾಗ್ಯಸಿರಿಯಾಗಿದ್ದಳು. ಆಕೆ ಆತನ ಜೀವನದಲ್ಲಿ ಕಾಲಿಟ್ಟ ಕ್ಷಣದಿಂದ ಆತನ ಜೀವನ ಶೈಲಿಯ ರೀತಿಯೇ ಬದಲಾಯಿತು.


ಬೇರೆಯವರ ಟ್ರಾಕ್ಟರ್ ಚಲಾಯಿಸುತ್ತಿದ್ದವನು ಈಗ ಸ್ವಂತ ಗಾಡಿಯ ಮಾಲೀಕ. ಗಂಡ ಹೆಂಡತಿ ಇಬ್ಬರೂ ಹಗಲು ರಾತ್ರಿಯೆನ್ನದೆ , ಹಸಿವು ಎನ್ನದೆ , ನಿದ್ದೆ ಮಾಡದೇ ಎಷ್ಟೋ ದಿನಗಳ ಕಾಲ ತಮ್ಮ ಬಗ್ಗೆ ತಾವಿಬ್ಬರೂ ಯೋಚಿಸದೆ ದುಡಿಮೆಗೆ ಪ್ರಾಮುಖ್ಯತೆ ಕೊಟ್ಟರು . ಅದರ ಫಲವಾಗಿ ತಮ್ಮದೇ ಆದ ಸ್ವಂತದ ಒಂದು ದೊಡ್ಡ ಮನೆ ಹಾಕಿಸಿಕೊಂಡರು. ಆಮೇಲೆ ಹೆಣ್ಣು ಮಕ್ಕಳಿಬ್ಬರು ,ಒಬ್ಬ ಗಂಡು ಮಗ , ಒಟ್ಟು ಮೂವರು ಮಕ್ಕಳು ಹುಟ್ಟಿದರು.

ಮಕ್ಕಳೆಲ್ಲರೂ ಊರಲ್ಲಿರುವ ಶಾಲೆಗೆ ಒಟ್ಟಿಗೆ ಹೋಗಿ , ಒಟ್ಟಿಗೆ ಬರುತ್ತಿದ್ದರು. ಒಂದು ಪರಿಪೂರ್ಣ ಕುಟುಂಬ ಆ ಉದಯಚಂದ್ರ ನದ್ದು ಆಗಿತ್ತು.


ಸ್ವಲ್ಪ ದಿನಗಳು ಕಳೆಯಲು ಕೊರೊನಾ ಎಂಬ ಮಹಾಮಾರಿಯು ಆ ಉದಯಚಂದ್ರನ ಮನೆಗೆ ವಕ್ಕರಿಸಿತು. ಮೊದಲು ಮಗನಿಗೆ ಯಾವ ರೂಪದಲ್ಲಿ ತೊಡಕಿತೋ ಕಾಣೆ , ಆತ ಉಳಿದಿದ್ದೆ ಹೆಚ್ಚು. ಸಣ್ಣ ಮಗ , ಗಂಡ ಹೆಂಡತಿ ಇಬ್ಬರು ಆ ಸಮಯಕ್ಕೆ ಸತ್ತು ಸತ್ತು ಉಳಿದಿದ್ದರು. ಆಮೇಲೆ ಕಿರಿಯ ಮಗಳಿಗೆ ವಕ್ಕರಿಸಿದ ಕೊರೊನಾ ಆಕೆಯನ್ನು ಬಳಿ ತೆಗೆದುಕೊಂಡೆ ಬಿಟ್ಟಿತು.


ಈ ಭಾರಿಯಂತೂ ಅವರಿಬ್ಬರು ಅಕ್ಷರಶಃ ಸತ್ತೆ ಹೋದಂಗೆ ಆಗಿತ್ತು. ಏನು ಮಾಡುವುದು ಎಳಲೇಬೇಕಲ್ಲ. ವೈದ್ಯರೇ ದೇವರೆಂದು ತಿಳಿದು ಅವರ ಮೇಲೆ ನಂಬಿಕೆ ಇಟ್ಟು ಎಲ್ಲರೂ ಚಿಕಿತ್ಸೆಗೊಳಗಾದರು. ಆ ಸಮಯದಲ್ಲಿ ಎಲ್ಲರ ರಿಪೋರ್ಟ್ಸ್ ನೆಗೆಟಿವ್ ಬಂದು , ಕೊಂಚ ಸಮಾಧಾನದಿಂದ ಮನೆಗೆ ಬಂದರು. ಎಲ್ಲ ಮುಗಿದು ಆರಾಮಾದೇವು ಎನ್ನುತ್ತಿರುವಾಗಲೇ ಉದಯಚಂದ್ರನು ಹಾಸಿಗೆ ಹಿಡಿದನು. ಕೊರೊನಾ , ಮತ್ತೊಂದು , ಮಗದೊಂದು ಅದೆನೇನೋ ರೋಗಗಳೆಲ್ಲ ಸೇರಿ ಆತನನ್ನು ಮೇಲೆಳಕ್ಕೋ ಬಾರದಂತೆ ಕುಸಿಯುವಂತೆ ಮಾಡಿದ್ದವು.



ಆಗ ತನ್ನ ಭೂಮಿಯ ಮೇಲಿನ ಋಣ ಮುಗಿಯಲಿಕ್ಕೆ ಬಂದಿದೆ ಎಂದು ತಿಳಿದು , ತನ್ನಿಬ್ಬರು ಮಕ್ಕಳು , ಹಾಗೂ ಹೆಂಡತಿ ಸೌಭಾಗ್ಯಳನ್ನು ಕರೆದು , " ನನ್ನ ಅವಧಿ ಮುಗಿದಿರಬೇಕು , ದೇವರು ಅದಕ್ಕೆ ಹೀಗೆ ಮಾಡಿದ್ದಾನೆ , ನೀವೆಲ್ಲ ನಿಮ್ಮ ನಿಮ್ಮ ಆರೋಗ್ಯದ ಕಾಳಜಿ ಮಾಡಿಕೊಳ್ಳಿ. ಹುಷಾರಾಗಿರಿ. ಜೀವನ ಸಿಗುವುದು ಒಮ್ಮೆ ಮಾತ್ರ. ಆದ್ದರಿಂದ ಒಮ್ಮೆ ಸಿಕ್ಕಿದ ಈ ಜೀವನವನ್ನು ಹಸಲು ಮಾಡಿಕೊಳ್ಳಬೇಡಿ. ಸರಿಯಾದ ಮಾರ್ಗದಲ್ಲಿ ಯಾವ ಕೆಲಸವನ್ನಾದರೂ ಮಾಡಿ , ಕೂಲಿಯಾದರೂ ಸರಿ , ನೌಕರಿಯಾದರೂ ಸರಿ , ಮಾರ್ಗ ಸರಿ ಇದ್ದರೆ ಭಗವಂತ ಫಲ ಕೊಟ್ಟೆ ಕೊಡುತ್ತಾನೆ . " ಎಂದು ಬುದ್ಧಿ ಹೇಳಿದನು.


ಆತನ ಮೈಯಲ್ಲಿರುವ ರೋಗ ಉಲ್ಬಣವಾಗಿ ಆತನೂ ತೀರಿ ಹೋದನು. ಆ ಮಗ , ಮಗಳು ಅಪ್ಪನ ಮಾತನ್ನು ಬಹಳ ಚೆನ್ನಾಗಿ ಅರ್ಥೈಸಿಕೊಂಡು ಚೆನ್ನಾಗಿ ಓದಿ , ಒಳ್ಳೆಯ ಕೆಲಸವನ್ನು ಪಡೆದುಕೊಂಡರು. ತಮ್ಮ ತಾಯಿಯನ್ನು ಉತ್ತಮ ರೀತಿಯಲ್ಲಿ, ಬಹಳ ಚೆನ್ನಾಗಿ ನೋಡಿಕೊಂಡರು. ಅಪ್ಪ ಹಾಕಿಕೊಟ್ಟ ಆದರ್ಶ ಮಾರ್ಗದಲ್ಲಿ ನಡೆದು ನಾಲ್ಕಾರು ಮಂದಿಗೆ ಸ್ಪೂರ್ತಿಯಾದರು.


Rate this content
Log in