STORYMIRROR

JAISHREE HALLUR

Horror Romance Tragedy

4  

JAISHREE HALLUR

Horror Romance Tragedy

#ಸಿಂದೂರ ಬಿಂದು.###.

#ಸಿಂದೂರ ಬಿಂದು.###.

1 min
211


ಏಕಕಾಲದಲ್ಲಿ ಎಲ್ಲವೂ ನಡೆದುಹೋಗಿತ್ತು

ಬೇಕುಬೇಕಾದ್ದೆಲ್ಲವನೂ ಪೂರೈಸುವಷ್ಟು

ಹಣಚೆಲ್ಲಿ, ಆತುರದ ಲಗ್ನ ಮುಗಿದಿತ್ತು.


ಅಂದನಗೆ ಮಂದನಗೆ, ನಂತರದ ಬಗೆಗೆ

ಗಂಧವಿಲ್ಲದ ನಂಟಿನಲ್ಲಿ ಬದುಕು ಹೇಗೆ

ಬದಲಾಯಿತೆಂಬ ನೋವು ಅವಳಿಗೆ.


ಮಂಟಪದಲ್ಲಿ ಮಂತ್ರೋಚ್ಛಾರವಿತ್ತು

ನೆಂಟರಿಷ್ಟರ ಇಚ್ಛೆಗನುಸಾರ ಅಷ್ಟೆಲ್ಲಾ,

ಸಂಪತ್ತನಿತ್ತರೂ ಅಸಹಮಾಧಾನವಿತ್ತು.


ತೊಟ್ಟ ಉಡುಗೆ, ಇಟ್ಟ ಬೊಟ್ಟಿಗೊಂದು

ಅರ್ಥವಿರಲೇಬೇಕೆಂಬ ತತ್ವಗಳಿಗೇನರ್ಥ?

ಸಪ್ತಪದಿ ಮಂತ್ರಘೋಷಣೆ ಬರೀವ್ಯರ್ಥ.


ಕುಂಕುಮಶೋಭಿತೆ, ಮಂಗಳಮುಖಿ

ಹೃದಯ ಸಾಮ್ರಾಜ್ಞಿ, ಆದರೆ ಸಖೀ,

ಸಾರ್ಥಕವಾದೀತು ಜೀವನಬಾಕೀ.


ಮದುವೆಯೆಂಬ ಮಧುರ ಬಾಂದವ್ಯ

ಇಬ್ಬರಿಗೂ ಸಮಪಾಲಿನ ಕರ್ತವ್ಯ. ಹೆಣ್ಣೊಬ್ಬಳಿಗೇ ಏಕೀ ಶಿಕ್ಷೆಯ ವೇದ್ಯ?



Rate this content
Log in