STORYMIRROR

Pushpa Prasad

Others

4  

Pushpa Prasad

Others

ನೀನೆ ನನ್ನ ಜೀವ ನೀನೆ ನನ್ನ ಬದುಕು

ನೀನೆ ನನ್ನ ಜೀವ ನೀನೆ ನನ್ನ ಬದುಕು

1 min
278

ಗಾಳಿಯಲ್ಲಿ ತೇಲಿ ಬಂದಿರುವೆ
ನಿನ್ನ ನೋಡಿ ನಾ ಮರುಳಾಗಿರುವೆ
ಪ್ರೀತಿಯನ್ನು ನನಗೆ ಧಾರೆಯರೆದು
ನೀ ಬಂದು ನನ್ನ ಹೃದಯ ಸೇರು!! 

ನೀರಿನಲ್ಲಿ ಹರಿದು ಬಂದಿರುವೆ 
ನಿನ್ನ ನೋಡಿ ಪುಳಕಿತಗೊಂಡಿರುವೆ
ಈ ನಮ್ಮ ಸ್ನೇಹವನ್ನು ಮರೆತು
ನೀ ಬಂದು ನನ್ನ ಸಂಗಾತಿಯಾಗು!!

ಎಲ್ಲೆಲ್ಲಿ ನೋಡಲಿ ನಿನ್ನದೇ ಚಾಯೆಯು
ಮರೆಯಲಾಗುತ್ತಿಲ್ಲ ಪ್ರೀತಿಯ ಈ ಸಾಲು
ಒಂದಾಗೋಣವೇ? ನೀನೊಮ್ಮೆ ಹೇಳಿಬಿಡು 
ನೀನೆ ನನ್ನ ಜೀವವು ನೀನೆ ನನ್ನ ಬದುಕು!!

✍️ ಪುಷ್ಪ ಪ್ರಸಾದ್ 


Rate this content
Log in