STORYMIRROR

ಹೃದಯ ಸ್ಪರ್ಶಿ

Others

2  

ಹೃದಯ ಸ್ಪರ್ಶಿ

Others

ಆ ದಿನಗಳು

ಆ ದಿನಗಳು

1 min
157

ಮಾಸಿದ ಬದುಕಿನ ಪುಟಗಳ

ಕಾಲೆಳೆಯುತ್ತಲೇ ಸಾಗುವ ಒಂಟಿ ಜೀವನ

ದಿಗಂತದ ಅಂಚಿನಿಂದಂಚಿಗೆ ಹಾಕಿದ ನಿನ್ನ ಹೆಜ್ಜೆಯು

ಸೋಲುತಿದೆ ಜೀವಗಳ ಲೆಕ್ಕದಲಿ...!


ಇಲ್ಲಿ ಸಮಸ್ಯೆಗಳೇ ಇಲ್ಲದ ಸಮಸ್ಯೆಗಳ

ಸತಾಯಿಸುವ ಕಾರುಬಾರು..

ಸೋತರೂ ಸೋಲನ್ನು ಒಪ್ಪದೇ

ಗೆಲುವಿನ ಎಲೆಗಾಗಿರುವ ಓಟವೇ ಜೋರು..!


ನೆನಪೆಂಬ ದೀವಿಗೆಯ ನೆನೆದ ಸಂಗತಿಯಲಿ

ನಾನಾರೆಂದು ಹೇಗೆ ಹುಡುಕಲಿ

ಬದುಕಿನ ವಾಸ್ತವದಲಿ...

ಅಂದುಕೊಂಡ ಬಾಂಧವ್ಯ ಹುಸಿಯಾಗಲು

ಬಯಸಿದ ರೀತಿಯಲಿ ಸ್ನೇಹ ಸಿಗದಿರಲು


ಅವಹೇಳನ ಮಾಡುತ ತುಚ್ಛವಾಗಿ ನೋಡಲು

ನಿರೀಕ್ಷೆಯಾಗುವುದು ನೆರಳು ಕನಸು ಕಂಡಂತೆ

ಕಳೆದು ಹೋಗಿವೆ ಆ ದಿನಗಳು

ಕಲೆಯಾಗಿ ಮೂಡಿವೆ ನೆನಪುಗಳು

ನಿನ್ನ ಮಾತುಗಳು ಉಳಿದಿವೆ ಗೆಳತಿ ಶಬ್ದಕೋಶವಾಗಿ...



Rate this content
Log in