STORYMIRROR

Sneha Poojari

Classics Inspirational

3  

Sneha Poojari

Classics Inspirational

ನಿನ್ನನ್ನು ನೀ ಅರಿ!

ನಿನ್ನನ್ನು ನೀ ಅರಿ!

1 min
411

ಮನಸ್ಸಿಲ್ಲದ ಮನಸೊಂದಿಗೆ ಏನಮಾಡ ಹೊರಟೆ ನೀ? 

ಬೇಡವೆಂಬ ಮನಸ್ಸಿಗೆ ಎಷ್ಟು ಹೇಳಿದರೂ ಅಷ್ಟೇ ಎಂಬುದ ಅರಿಯದಿರುವ ಮೂರ್ಖನಾದೆಯೇ ನೀ?  


ನಿನ್ನ ಮನಸ್ಸೊಂದೇಡೆ, ನಿನ್ನ ಹೃದಯ ಇನ್ನೊಂದೆಡೆ, 

ಹೀಗಾದರೆ ಚೂರುಚೂರಾಗದೆ ಉಳಿಯುವೆಯೇ ನೀ? 

ಏತಕಿಷ್ಟು ಚಂಚಲ? ಏತಕಿಷ್ಟು ಸಂಶಯ? 


ನಿನ್ನ ಮನಸನ್ನೇ ಅರಿಯದ ನಿನಗೆ, 

ಪರರ ಚಿಂತೆ ಏತಕೆ?  

ನಿನ್ನ ಹೃದಯವನ್ನೇ ಅರಿಯದ ನಿನಗೆ, 

ಪರರಮೇಲೆ ಕಾಳಜಿಯೇ? 


ನಿನ್ನನ್ನು ನೀ ಅರಿ 

ನಿನ್ನ ಬೆಳಕಿನ ಕಿರಣವನ್ನು ನೀ ಪಡಿ 

ಆ ಬೆಳಕಿನ ಕಿರಣಗಳಿಂದ ಇತರರನ್ನೂ ನೀ ಅರಿತು, 

ಜಗತ್ತನ್ನು ಉಜ್ವಲಿಸಿ,  

ಮಾನವೀಯತೆಯ ಕೀರ್ತಿಯನ್ನು ಹಿಡಿದೆತ್ತುವಂತವನಾಗು ನೀ !



Rate this content
Log in

Similar english poem from Classics