STORYMIRROR

Sneha Poojari

Others

3  

Sneha Poojari

Others

ನಿನ್ನ ಉಡುಪಿ

ನಿನ್ನ ಉಡುಪಿ

1 min
204

ತನ್ನನ್ನೇ ತಾ ಮರೆತು ತನ್ನಲ್ಲಿ ತಾನಿಲ್ಲದ ಮನಸ್ಸಿನ ಪ್ರಪಾತದಲ್ಲಿ,

ತನ್ನನ್ನೇ ಕಳೆದುಕೊಂಡು ಎಲ್ಲಿಗೆ ಓಡುತಿರುವೆ ನೀ ಓ ಪೆದ್ದ ಮನವೇ? 


ನಾನು ನಾನೆಂಬ ಅಲೆಗಳ ಸಾಗರದಲ್ಲಿ ಮುಳಿಗಿ ಮೀನಾಗಿ, ಮರಳಿ ಬಂದದ್ದು ನನ್ನಯ ಮಡಿಲಿಗಲ್ಲವೇ ನೀ ಓ ಮಂಕು ಮನವೇ .. 


ನೀನೆಷ್ಟೇ ಓಡಿದರೂ ನಿನಗೆಷ್ಟೇ ಕ್ರಿಯವಿದ್ದರೂ,

ನಿನ್ನ ಒಳಗಿರುವ ಆ ಅಲೆಗಳ ಸಾಗರ ನಿನ್ನನ್ನು ಕರೆದೊಯ್ಯುವುದು ಇಲ್ಲಿಗೇ.. 


ಇದೇ ನಿನ್ನಯ ಸತ್ಯ .. 

ಇದೇ ನಿನ್ನಯ ಒಳಗಿರುವ ಶಾಂತಿಯ ಮಂತ್ರ.. 

ಇದೇ ನೀನು ನೀನಾಗಿ ನಿನ್ನನ್ನು ಮತ್ತೆ ಪಡೆದು,

ಕಡೆಗೆ ಮಣ್ಣಾಗಿ ಹೋಗುವ ಅಂತ್ಯ .. 


ನಾ ನಿನಗೆ ಉಸಿರು ಕೊಟ್ಟ ತಂಗಾಳಿ.. 

ನಾ ನಿನಗೆ ತಂಪು ಕೊಟ್ಟ ಮರಗಿಡಗಳ ಸಾಲುದಾರಿ.. 

ಕುಡಿಯಲು ನೀರು ಕೊಟ್ಟ ಜಲಧಾರೆ.. 

ನಿನ್ನನ್ನು ಬೆಳೆಸಿ ನಿನ್ನನ್ನು ನೀ ಮಾಡಿದ ಹಸಿರು ಭೂಮಿ.. 


ನಾ ನಿನ್ನಯ ಊರು, ನಾ.. ನಿನ್ನ ಉಡುಪಿ!

ನನ್ನನು ಮರೆತರೆ ನಿನ್ನನೇ ಕಳೆದುಕೊಳ್ಳುವೆ ನೀ.. 

ಈ ಸತ್ಯ ಅರೆತು ನಿನ್ನನ್ನು ನೀ ಪಡೆದು,

ನನ್ನನ್ನು ಮರೆಯದಿರು ಓ ಮಂಕು ಮನವೇ !



Rate this content
Log in