Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

#Non-Stop November : T30 Cup edition

SEE WINNERS

Share with friends

"ಒಂಟಿಯಾಗಿ ನಾವು ಸ್ವಲ್ಪ ಕಡಿಮೆ ಮಾಡಬಹುದು; ಒಟ್ಟಿಗೆ ನಾವು ಅದ್ಭುತವನ್ನೇ ಮಾಡಬಹುದು." - ಹೆಲೆನ್ ಕೆಲ್ಲರ್


ಇದೀಗ ಸ್ಟೋರಿಮಿರರ್, ವಿಶ್ವ ಸಾಹಿತ್ಯ ಇತಿಹಾಸದಲ್ಲಿಯೇ ಮೊದಲ ಬಾರಿಗೆ, ಬರಹಗಾರರಿಗಾಗಿ "ನಾನ್ ಸ್ಟಾಪ್ ನವೆಂಬರ್: T30 ಕಪ್ ಆವೃತ್ತಿ" ಅನ್ನು ಪ್ರಸ್ತುತಪಡಿಸುತ್ತಿದೆ. ಇದು ಬರವಣಿಗೆ ಸ್ಪರ್ಧೆಯಾಗಿದ್ದು, ಬರಹಗಾರರು/ಸ್ಪರ್ಧಿಗಳು ತಮ್ಮ ಸಹ ಬರಹಗಾರರೊಂದಿಗೆ ಪದಗಳ ಜೊತೆ ಆಡುತ್ತಾರೆ. ಈ ಸ್ಪರ್ಧೆಗೆ ಮೂವತ್ತು ದಿನಗಳವರೆಗೆ ಮೂವತ್ತು ವೈಯಕ್ತಿಕ ಬರಹಗಳು ಬೇಕಾಗುತ್ತವೆ. ಸ್ಪರ್ಧೆಗೆ ಭಾಗವಹಿಸುವವರು, ನಾವು ನೀಡಿದ ನಿಯಮಗಳು ಮತ್ತು ಥೀಮ್‌ಗಳ ಪ್ರಕಾರ ಅತ್ಯುತ್ತಮ ಬರಹವನ್ನು ರಚಿಸಬೇಕಾಗುತ್ತದೆ.


ಅಕ್ಷರಗಳೊಂದಿಗೆ ಆಡುವ ಮೂಲಕ ಹಿಂದೆಂದೂ ಕಾಣದಂತಹ ಆಧುನಿಕ ಸಾಹಿತ್ಯದ ಬದಲಾಗುತ್ತಿರುವ ಆಯಾಮವನ್ನು ಸ್ವತಃ ಅನುಭವಿಸಿ.


ಹಾಗಾದರೆ, ನಿಮ್ಮಲ್ಲಿರುವ ಬರವಣಿಗೆಯ ಉತ್ಸಾಹವು ಅಧಿಕ ಅಂಕಗಳನ್ನು ಗಳಿಸಲು ಸಿದ್ಧವಾಗಿದೆಯೇ?


ಸ್ಪರ್ಧೆಯ ಸ್ವರೂಪ -


ಒಟ್ಟು 5 ತಂಡಗಳು ಇರುತ್ತವೆ - ಟೀಮ್ A, ಟೀಮ್ B, ಟೀಮ್ C, ಟೀಮ್ D ಮತ್ತು ಟೀಮ್ E. ಬರಹಗಾರರನ್ನು ಸ್ಟೋರಿಮಿರರ್ ವತಿಯಿಂದ ರ‍್ಯಾOಡಮ್ ಆಧಾರದ ಮೇಲೆ ಪ್ರತಿ ತಂಡದಲ್ಲಿ ಹಂಚಲಾಗುತ್ತದೆ. ಈ ತಂಡಗಳ ಭಾಷೆಯು ನಿರ್ದಿಷ್ಟವಾಗಿರುವುದಿಲ್ಲ, ಬದಲಿಗೆ ಎಲ್ಲಾ ಭಾಷೆಗಳ ಬರಹಗಾರರನ್ನು ತಂಡವು ಒಳಗೊಂಡಿರುತ್ತದೆ. ಪ್ರತಿಯೊಬ್ಬ ಬರಹಗಾರರಿಗೆ ಅವರ ತಂಡದ ವಿವರಗಳ ಬಗ್ಗೆ ಇಮೇಲ್ ಮೂಲಕ ತಿಳಿಸಲಾಗುತ್ತದೆ. ಉತ್ತಮ ಸಂವಹನಕ್ಕಾಗಿ ಪ್ರತಿ ತಂಡಕ್ಕೆ ಪ್ರತ್ಯೇಕ ವಾಟ್ಸಾಪ್ ಗುಂಪನ್ನು ಸಹ ರಚಿಸಲಾಗುತ್ತದೆ. ಪ್ರತಿ ತಂಡಕ್ಕೆ ಸ್ಟೋರಿಮಿರರ್ ಪ್ರತಿನಿಧಿಯನ್ನು ಸಹ ನಿಯೋಜಿಸಲಾಗುವುದು.


ನಾವು 30 ದಿನಗಳವರೆಗೆ 30 ವಿಭಿನ್ನ ಪ್ರಾಂಪ್ಟ್‌ಗಳನ್ನು ನೀಡುತ್ತೇವೆ. ನೀವು ಪ್ರಾಂಪ್ಟ್ ಅನ್ನು ಬಳಸಬೇಕಾಗುತ್ತದೆ ಮತ್ತು ಪ್ರಾಂಪ್ಟ್ ಕುರಿತು ನಿಮ್ಮ ಬರಹವನ್ನು ರಚಿಸಬೇಕಾಗುತ್ತದೆ. ಇದನ್ನು ಆಯಾ ದಿನದ ಪ್ರಾಂಪ್ಟ್‌ನ ಕುರಿತು, ಆಯಾ ದಿನದೊಳಗೆ ಯಾವುದೇ ಶೈಲಿಯಲ್ಲಿ, ಯಾವುದೇ ಪ್ರಕಾರದಲ್ಲಿ, ಅಥವಾ ನೀವು ಇಷ್ಟಪಡುವ ಯಾವುದೇ ರೀತಿಯಲ್ಲಿ ರಚಿಸಬಹುದು.


ವಿಷಯಗಳು -


1 ನವೆಂಬರ್ - ಪುಸ್ತಕ

2 ನವೆಂಬರ್ - ಚಲನಚಿತ್ರ

3 ನವೆಂಬರ್ - ಹಬ್ಬ

4 ನವೆಂಬರ್ - ನನ್ನ ದೇಶ

5 ನವೆಂಬರ್ - ಯಾವುದೇ ಋತು

6 ನವೆಂಬರ್ - ಸ್ನೇಹಿತ

7 ನವೆಂಬರ್ - ಕುಟುಂಬ

8 ನವೆಂಬರ್ - ಹೀರೋ

9 ನವೆಂಬರ್ - ಭಯಾನಕ

10 ನವೆಂಬರ್ - ಮ್ಯಾಜಿಕ್

11 ನವೆಂಬರ್ - ಪ್ರಯಾಣ

12 ನವೆಂಬರ್ - ಹಣ

13 ನವೆಂಬರ್ - ಆಟ

14 ನವೆಂಬರ್ - ಮಕ್ಕಳು

15 ನವೆಂಬರ್ - ಪ್ರೀತಿ

16 ನವೆಂಬರ್ - ಫ್ಯಾಂಟಸಿ

17 ನವೆಂಬರ್ - ನಿಗೂಢ 

18 ನವೆಂಬರ್ - ಕಾಲ್ಪನಿಕ ಕಥೆ

19 ನವೆಂಬರ್ - ಜನ್ಮದಿನ

20 ನವೆಂಬರ್ - ಮರಣಾನಂತರದ ಜೀವನ

21 ನವೆಂಬರ್ - ಅಪರಿಚಿತ

22 ನವೆಂಬರ್ - ಸೂಪರ್ ಪವರ್

23 ನವೆಂಬರ್ - ಏಲಿಯನ್

24 ನವೆಂಬರ್ - ರಾಜಧಾನಿ 

25 ನವೆಂಬರ್ - ಯಶಸ್ಸು

26 ನವೆಂಬರ್ - ಮದುವೆ

27 ನವೆಂಬರ್ - ಕನಸು

28 ನವೆಂಬರ್ - ಸ್ವಾತಂತ್ರ್ಯ

29 ನವೆಂಬರ್ - ಪೌರಾಣಿಕ 

30 ನವೆಂಬರ್ - ವೈಜ್ಞಾನಿಕ ಕಾದಂಬರಿ


ನಿಯಮಗಳು:


  • ನೀಡಲಾಗಿರುವ ಪ್ರಾಂಪ್ಟ್‌ಗಳ ಬಗ್ಗೆ ಮಾತ್ರವೇ ನೀವು ಬರೆಯಬೇಕು.
  • ನಿಮ್ಮ ತಂಡದ ಗೆಲ್ಲುವ ಅವಕಾಶವನ್ನು ಹೆಚ್ಚಿಸಲು ನೀವು ಪ್ರತಿ ಥೀಮ್‌ಗೆ ಒಂದಕ್ಕಿಂತ ಹೆಚ್ಚು ಬರಹವನ್ನು ಸಲ್ಲಿಸಬಹುದು.
  • ಸ್ಪರ್ಧಿಗಳು ತಮ್ಮ ಸ್ವಂತ ಬರಹವನ್ನು ಸಲ್ಲಿಸಬೇಕು. ನಕಲಿಸುವುದು ಅಪರಾಧ.
  • ಇಮೇಲ್ ಮೂಲಕ ಅಥವಾ ಹಾರ್ಡ್ ಕಾಪಿಯಾಗಿ ಅಥವಾ ಸ್ಪರ್ಧೆಯ ಲಿಂಕ್ ಅನ್ನು ಬಳಸದೆ ಸಲ್ಲಿಸಿದ ಯಾವುದೇ ಬರಹ, ಈ ಸ್ಪರ್ಧೆಗೆ ಅನರ್ಹವಾಗುತ್ತವೆ.
  • ಸ್ಪರ್ಧೆಗೆ ಭಾಗವಹಿಸಲು ಯಾವುದೇ ಭಾಗವಹಿಸುವಿಕೆಯ ಶುಲ್ಕವಿಲ್ಲ.
  • ನಿಮ್ಮ ಭಾಗವಹಿಸುವಿಕೆಯ ಪ್ರಮಾಣಪತ್ರಗಳು ನಿಮ್ಮ ಪ್ರೊಫೈಲ್‌ನಲ್ಲಿ 'ಸರ್ಟಿಫಿಕೇಟ್' ವಿಭಾಗದ ಅಡಿಯಲ್ಲಿ ಲಭ್ಯವಿರುತ್ತವೆ.


ಬಹುಮಾನಗಳು:


ತಂಡದ ಬಹುಮಾನಗಳು 

(Team Prizes)


ವಿಜೇತ ತಂಡವನ್ನು ಸಂಪಾದಕೀಯ ಅಂಕ, ಥೀಮ್‌ಗೆ ಸಲ್ಲಿಸಿದ ಬರಹಗಳ ಸಂಖ್ಯೆ ಮತ್ತು ಓದುಗರ ತೊಡಗಿಸಿಕೊಳ್ಳುವಿಕೆಯನ್ನು (ಲೈಕ್ಸ್ ಮತ್ತು ಕಾಮೆಂಟ್‌ಗಳು) ಆಧರಿಸಿ ನಿರ್ಧರಿಸಲಾಗುತ್ತದೆ


1.ವಿಜೇತ ತಂಡದ ಸದಸ್ಯರು ಈ ಕೆಳಗಿನ ಬಹುಮಾನಗಳನ್ನು ಪಡೆಯುತ್ತಾರೆ -

  • ಪುಸ್ತಕಗಳನ್ನು ಖರೀದಿಸಲು ₹150/- ಮೌಲ್ಯದ ಸ್ಟೋರಿಮಿರರ್ ಶಾಪ್ ಡಿಸ್ಕೌಂಟ್ ವೋಚರ್ ಅನ್ನು ಪಡೆಯುತ್ತಾರೆ.
  • ಸ್ಟೋರಿಮಿರರ್‌ನ ಎಲ್ಲಾ ಪೇಪರ್‌ಬ್ಯಾಕ್ ಪುಸ್ತಕ ಪ್ರಕಾಶನದ ಪ್ಯಾಕೇಜ್‌ಗಳ ಮೇಲೆ 20% ರಿಯಾಯಿತಿ.
  • ಡಿಜಿಟಲ್ ವಿಜೇತ ಪ್ರಮಾಣಪತ್ರಗಳು.

2. ರನ್ನರ್-ಅಪ್ ತಂಡಕ್ಕೆ ಈ ಕೆಳಗಿನ ಬಹುಮಾನಗಳನ್ನು ನೀಡಲಾಗುತ್ತದೆ-

  • ಪುಸ್ತಕ ಖರೀದಿಸಲು ₹100/- ಮೌಲ್ಯದ ಸ್ಟೋರಿಮಿರರ್ ಶಾಪ್ ಡಿಸ್ಕೌಂಟ್ ವೋಚರ್ ಅನ್ನು ಪಡೆಯುತ್ತಾರೆ. 
  • ಸ್ಟೋರಿಮಿರರ್‌ನ ಎಲ್ಲಾ ಪೇಪರ್‌ಬ್ಯಾಕ್ ಪುಸ್ತಕ ಪ್ರಕಾಶನದ ಪ್ಯಾಕೇಜ್‌ಗಳ ಮೇಲೆ 10% ರಿಯಾಯಿತಿ.
  • ಡಿಜಿಟಲ್ ರನ್ನರ್ ಅಪ್ ಪ್ರಮಾಣಪತ್ರಗಳು.

ಹೆಚ್ಚು ಸಕ್ರಿಯವಾಗಿರುವ ತಂಡ (Most Active Team) - ಅತಿ ಹೆಚ್ಚು ಸ್ಪರ್ಧಿಗಳನ್ನು ಹೊಂದಿರುವ ತಂಡಕ್ಕೆ ₹ 150/- ಮೌಲ್ಯದ ಸ್ಟೋರಿಮಿರರ್ ಶಾಪ್ ಡಿಸ್ಕೌಂಟ್ ವೋಚರ್ ಮತ್ತು ವಿಶೇಷ ಪ್ರಮಾಣಪತ್ರವನ್ನು ನೀಡಲಾಗುತ್ತದೆ.


ವೈಯಕ್ತಿಕ ಬಹುಮಾನಗಳು


  • ಪ್ರತಿ ಭಾಷೆ ಮತ್ತು ವಿಭಾಗದಿಂದ ಎಲ್ಲಾ ಥೀಮ್‌ಗಳಲ್ಲಿ 30 ಅಥವಾ ಹೆಚ್ಚಿನ ಬರಹಗಳನ್ನು ಸಲ್ಲಿಸುವ ಸ್ಪರ್ಧಿಗಳು ಸ್ಟೋರಿಮಿರರ್‌ನಿಂದ ಉಚಿತ ಭೌತಿಕ ಪುಸ್ತಕವನ್ನು ಗೆಲ್ಲುತ್ತಾರೆ ಆದರೆ ಆ ಬರಹಗಳು ಕನಿಷ್ಠ ಸರಾಸರಿ ಸಂಪಾದಕೀಯ ಅಂಕ 6 ಅನ್ನು ಪಡೆದಿರಬೇಕು. ಆದಾಗ್ಯೂ, ಸ್ಪರ್ಧಿಗಳು ಭಾರತದ ಹೊರಗಿನವರಾಗಿದ್ದರೆ, ನಾವು ಇ-ಪುಸ್ತಕವನ್ನು ಮಾತ್ರ ಹಂಚಿಕೊಳ್ಳಲು ಸಾಧ್ಯವಾಗುತ್ತದೆ.
  • ಪ್ರತಿ ಭಾಷೆ ಮತ್ತು ವಿಭಾಗದಿಂದ ಎಲ್ಲಾ ಥೀಮ್‌ಗಳಲ್ಲಿ 15 ಕ್ಕಿಂತ ಹೆಚ್ಚು ಮತ್ತು 30 ಕ್ಕಿಂತ ಕಡಿಮೆ ಬರಹಗಳನ್ನು ಸಲ್ಲಿಸುವ ಸ್ಪರ್ಧಿಗಳು, ಸ್ಟೋರಿಮಿರರ್‌ನಿಂದ ಉಚಿತ ಇ-ಪುಸ್ತಕವನ್ನು ಗೆಲ್ಲುತ್ತಾರೆ. ಆದರೆ ಆ ಬರಹಗಳು ಕನಿಷ್ಠ ಸರಾಸರಿ ಸಂಪಾದಕೀಯ ಅಂಕ 6 ಅನ್ನು ಪಡೆದಿರಬೇಕು.
  • ಎಲ್ಲಾ ಸ್ಪರ್ಧಿಗಳು ಭಾಗವಹಿಸುವಿಕೆ ಪ್ರಮಾಣಪತ್ರವನ್ನು ಪಡೆಯುತ್ತಾರೆ.

ವಿಶೇಷ ಬಹುಮಾನಗಳು


ವಿಜೇತರಿಗೆ ಟ್ರೋಫಿ ಮತ್ತು ಡಿಜಿಟಲ್ ವಿಜೇತ ಪ್ರಮಾಣಪತ್ರವನ್ನು ನೀಡಲಾಗುತ್ತದೆ.

  • T30 ಕಪ್‌ನ ಅತ್ಯುತ್ತಮ ಬರಹಗಾರ (Best Writer) - ಎಲ್ಲಾ 30 ಥೀಮ್‌ಗಳಲ್ಲಿ ಅತ್ಯುತ್ತಮ ಬರಹವನ್ನು ಸಲ್ಲಿಸುವ ಬರಹಗಾರ. ಆತ/ಆಕೆಯೊಂದಿಗೆ ಸ್ಟೋರಿಮಿರರ್‌ನಿಂದ ಉಚಿತ ಪೇಪರ್‌ಬ್ಯಾಕ್ ಪುಸ್ತಕ ಪ್ರಕಾಶನ ಒಪ್ಪಂದವನ್ನು ಸಹ ಮಾಡಲಾಗುವುದು.
  • T30 ಕಪ್‌ನ ಅತ್ಯಂತ ಸ್ಥಿರವಾದ ಬರಹಗಾರ (Most Consistent Writer) - ಎಲ್ಲಾ ಭಾಷೆಗಳು ಮತ್ತು ವಿಭಾಗಗಳನ್ನು ಸೇರಿಸಿ, ಹೆಚ್ಚಿನ ಬರಹಗಳನ್ನು ಸಲ್ಲಿಸುವ ಬರಹಗಾರ.


ವಿಭಾಗಗಳು: ಕಥೆ, ಕವಿತೆ


ಭಾಷೆಗಳು: ಕನ್ನಡ, ಇಂಗ್ಲೀಷ್, ಹಿಂದಿ, ಮರಾಠಿ, ಗುಜರಾತಿ, ತಮಿಳು, ತೆಲುಗು, ಮಲಯಾಳಂ, ಒಡಿಯಾ ಮತ್ತು ಬಂಗಾಳಿ.


ಸಲ್ಲಿಕೆಯ ಅವಧಿ: 01ನೇ ನವೆಂಬರ್ 2022 ರಿಂದ 05ನೇ ಡಿಸೆಂಬರ್ 2022


ಫಲಿತಾಂಶ: 25ನೇ ಜನವರಿ 2023


ಸಂಪರ್ಕಿಸಿ:


ಇಮೇಲ್neha@storymirror.com


ದೂರವಾಣಿ ಸಂಖ್ಯೆ: +91 9372458287


ವಾಟ್ಸಾಪ್: +91 8452804735



Trending content