STORYMIRROR

Kalpana Nath

Children Stories Others

3.4  

Kalpana Nath

Children Stories Others

ಸೌಂದರ್ಯದ ಆಪತ್ತು

ಸೌಂದರ್ಯದ ಆಪತ್ತು

1 min
29



ಗಿಳಿ ಮತ್ತು ಕಾಗೆ ಬಹಳ ಒಳ್ಳೆಯ ಸ್ನೇಹಿತರು. ಗಿಳಿಗೆ ತನ್ನ ಸುಂದರ ಮೈ ಬಣ್ಣದ ಬಗ್ಗೆ ಬಹಳ ಹೆಮ್ಮೆ. ಆಗಾಗ ಕಾಗೆಯ ಬಣ್ಣದ ಬಗ್ಗೆ ಕೇವಲವಾಗಿ ಆಡಿಕೊಂಡು ನಗುತ್ತಿತ್ತು. ಆದರೆ ಕಾಗೆ ಮಾತ್ರ ಪಾಪ ಎಂದೂ ಬೇಸರ ಮಾಡಿಕೊಳ್ಳುತ್ತಿರಲಿಲ್ಲ. ಹೀಗಿರುವಾಗ ಒಬ್ಬ ಬೇಟೆಗಾರ ಗಿಳಿಯನ್ನ ಹಿಡಿದು ಬಿಟ್ಟ. ಮನೆಯಲ್ಲಿ ಪಂಜರದಲ್ಲಿ ಇಟ್ಟು ಮಾತನಾಡಲು ಹೇಳಿಕೊಡುತ್ತಿದ್ದ. ಸರಿಯಾಗಿ ಹೇಳದೆ ಇದ್ದಾಗ ಬೆಳ್ಳುಳ್ಳಿ ಚೆನ್ನಾಗಿ ಬಿಸಿಮಾಡಿ ಅದರ ನಾಲಿಗೆಗೆ ಇಡುತ್ತಿದ್ದ. ಇದನ್ನ ಅಲ್ಲೇ ಗಮನಿಸುತ್ತಿದ್ದ ಕಾಗೆ ಹೇಳಿತು. ಸುಂದರ ರೂಪ ಚೆನ್ನವೋ ನನ್ನ ಕಪ್ಪು ಬಣ್ಣದ ಮೈ ಚೆನ್ನವೋ ಈಗ ಹೇಳು. ಅಷ್ಟು ಹೊತ್ತಿಗೆ ಅಂದು ಅಮಾವಾಸ್ಯೆ ಆದ್ದರಿಂದ ಆ ಬೇಟೆಗಾರನ ಮಡದಿ ಅನ್ನವನ್ನ ತಟ್ಟೆಯಲ್ಲಿಟ್ಟು ಕಾ ಕಾ ಅಂತ ಅದರ ಭಾಷೆಯಲ್ಲೇ ಕರೆದು ಕಾಗೆಗೆ ಇಟ್ಟಳು. ಇದನ್ನ ನೋಡಿ ಗಿಳಿನೊಂದು ಹೇಳಿತು. "ನಿನಗೆ ಕರೆದು ಕೊಡುತ್ತಾರೆ ಊಟ, ನನಗೆ ಮಾತನಾಡೆಂದು ಪಂಜರದೊಳಿಟ್ಟು ಕಾಟ " ಸುಂದರ ದೇಹವೂ ಅಪಾಯ ಎನ್ನುವುದು ಈಗ ಗೊತ್ತಾಯ್ತು ಎಂದಿತು ಗಿಳಿ.


Rate this content
Log in