Gireesh pm Giree

Others Children

1  

Gireesh pm Giree

Others Children

ಪಿಯುಸಿ ಯ  ಮೊದಲ ದಿನ

ಪಿಯುಸಿ ಯ  ಮೊದಲ ದಿನ

1 min
73



ಹೊಸ ಮೆಟ್ಟಿಲ ಹತ್ತುವ ಕಾತುರ ಹೊಸ ನದಿಯಲ್ಲಿ ಈಜುವ ಆತುರ ಅಂತು ಇಂತು ಕಾತುರ ಆತುರಕ್ಕೆ ಪ್ರತ್ಯುತ್ತರವಾಗಿ ಪಿಯುಸಿ ಎಂಬ ಹೊಸ ಮೆಟ್ಟಿಲ ಹತ್ತುವ ಸುವರ್ಣ ಗಳಿಗೆ ಬಂದೇ ಬಿಟ್ಟಿತು.


ಕಾಲೇಜನ್ನು ಪ್ರವೇಶಿಸುವಾಗ ಏನೋ ಒಂತರ ಆನಂದ. ಒಳ ಹೋಗುತ್ತಿದ್ದಂತೆ ಹಚ್ಚಹಸಿರ ಗಿಡಮರಗಳು. ನಮಗೆ ಸ್ವಾಗತ ಮಾಡಲೆಂದೇ ಇದ್ದ ಹೂವಿನ ಶೃಂಗಾರ. ಇಲ್ಲಿನ ಸೀನಿಯರ್ಗಳು ನಮ್ಮನ್ನು ನಗುಮುಖದಿಂದಲೇ ಸ್ವಾಗತ ಮಾಡಿ ತನ್ನ ಸಹೋದರರಂತೆ ಮಾತನಾಡಿಸಿದರು.ನನ್ನ ಹಾಗೆ ಶಿಕ್ಷಣಕ್ಕೆ ಬಂದ ಅನೇಕ ವಿದ್ಯಾರ್ಥಿಗಳನ್ನೆ ಲ್ಲರನ್ನು ಕಂಡು ಏನೋ ಹರ್ಷ. ಹಾಗೂ-ಹೀಗೂ ಸ್ವಲ್ಪ ವಿದ್ಯಾರ್ಥಿಗಳನ್ನು ಮಾತಿನ ಮೂಲಕ ಪರಿಚಯಿಸಿಕೊಂಡೆ. ಅವರೊಂದಿಗೆ ಸೇರಿ ನನ್ನ ತರಗತಿ ಯಾವುದೆಂದು ಹುಡುಕಿದೆ. ಮೊದಲು ತರಗತಿಯನ್ನು ಪ್ರವೇಶಿಸಿದಾಗ ಉದ್ದಕ್ಕೂ ಬೆಂಚ್ ಡಸ್ಕ್ ಗಾಬರಿಯಾದೆ .ಅದುವರೆಗೂ ನಾನು ಓದಿದ ತರಗತಿಯಲ್ಲಿ ಇಷ್ಟೊಂದು ಸಂಖ್ಯೆಯ ಬೆಂಚ್ ಡಸ್ಕ್ ಇರಲಿಲ್ಲ. ಹಾಗೂ-ಹೀಗೂ ಮಧ್ಯದ ಬೆಂಚಿನಲ್ಲಿ ಕುಳಿತಾಗ ಏನೇನೋ ಹೊಸ ಚಿಗುರುಗಳು ಮನಸ್ಸಿನಲ್ಲಿ ಚಿಗುರಿತು.


ಇಲ್ಲಿಯ ಗೆಳೆಯರ ಭಾವನೆ ಪ್ರೀತಿ ಎಲ್ಲವೂ ನಾನು ಮೊದಲ ದಿನವೇ ಅರಿತೆ. ನಾನು ಅನ್ಯ ರಾಜ್ಯದಿಂದ ಬಂದರು ಅಲ್ಲಿ ಬೇದಭಾವ ತೋರಲಿಲ್ಲ. ನನ್ನನ್ನು ಗೆಳೆಯ ಎಂದೇ ಸ್ವಾಗತ ಮಾಡಿದರು. ಆ ದಿನ ಎಲ್ಲರೂ ಬಣ್ಣ ಬಣ್ಣದ ಉಡುಪನ್ನು ಧರಿಸಿದ್ದರು. ಅವರೆಲ್ಲರೂ ನನ್ನ ಕಣ್ಣಿಗೆ ಬಣ್ಣಬಣ್ಣದ ಹಾಡುವ ಚಿಟ್ಟೆಗಳಂತೆ ಕಂಡರು.


ಅಧ್ಯಾಪಕರು ಬಂದರು ಅವರ ಪರಿಚಯ ಮೊದಲು ಮಾಡಿ ನಂತರ ನಮ್ಮೆಲ್ಲರ ಪರಿಚಯ ಮಾಡಿದರು. ನನ್ನ ಸರದಿ ಬಂದಾಗ ಹಾಗೆ ನಿಂತುಕೊಂಡೆ ಯಾಕೆಂದರೆ ನನಗೆ ಈ ಮೊದಲು ಇಷ್ಟು ವಿದ್ಯಾರ್ಥಿಗಳ ಮಧ್ಯೆ ಮಾತನಾಡಿಯೇ ಇರಲಿಲ್ಲ. ಹಾಗೂ-ಹೀಗೂ ಪರಿಚಯವನ್ನು ಮಾಡಲು ಶುರುಮಾಡಿದೆ.ನಾನು ಕಾಸರಗೋಡಿನವ ಎಂದು ಅರಿತ ಅಧ್ಯಾಪಕರು ಇನ್ನೂ ಕೆಲವು ಪ್ರಶ್ನೆಗಳನ್ನು ಕೇಳಿದರು. ಆ ಪ್ರಶ್ನೆಗಳು ಇಂದೂ ಸಹ ನನ್ನ ನೆನಪಿನಲ್ಲಿದೆ.ನಂತರ ಹಾಜರಿಯಲ್ಲಿ ಯಾವಾಗ ನನ್ನ ಹೆಸರು ಬರುತ್ತದೆಯೋ ಎಂಬ ಕಾತುರದ ಕ್ಷಣ ಹಾಜರಿ ನಲ್ಲಿ ನನ್ನ ಹೆಸರು ಬಂದಾಗ ಬಾಯಲ್ಲಿ ಪದಗಳೇ ಉರುಳದೆ ಹಾಗೆಯೇ ನಿಂತುಕೊಂಡ ಆ ದಿನಗಳು .


ಅಧ್ಯಾಪಕರ ಸ್ಪೂರ್ತಿದಾಯಕ ಮಾತುಗಳು ಇಂದು ಸಹ ನೆನಪಿದೆ .ಪಿಯುಸಿಯ ಮೊದಲ ದಿನ ನನ್ನಲ್ಲಿ ಹೊಸ ಉತ್ಸಾಹ ಮೂಡಿಸಿದ್ದು ಸುಳ್ಳಲ


Rate this content
Log in