ನವಿರಾದ ಪ್ರೇಮ ಕಥೆ
ನವಿರಾದ ಪ್ರೇಮ ಕಥೆ
ಸ್ನೇಹಿತರು ಎಲ್ಲರೂ ಸೇರಿ ಮೈಸೂರಿಗೆ ಪ್ರವಾಸಕ್ಕೆ ಹೋಗಿದ್ದರು. ಅಲ್ಲಿ ಅವರಿಗೆಲ್ಲಾ ಮೈಸೂರಿನಲ್ಲಿ ನೋಡುವಂತಹ ಸ್ಥಳಗಳ ಬಗ್ಗೆ ಅವರಿಗೆ ವಿವರಿಸುತ್ತಾ ಮೈಸೂರ ಅರಮನೆಗೆ ಕರೆದುಕೊಂಡು ಹೋದನು. ಅರಮನೆಯ ಬಗ್ಗೆ ಅಲ್ಲಿ ಇರುವ ವಸ್ತುಗಳ ಬಗ್ಗೆ ಹೇಳಿದನು.ಅವನ ಕೆಲಸವೇ ಅದೇ ಆಗಿರತ್ತೆ.
ಆತ ಮಾತನಾಡುವ ಶೈಲಿ ಒಬ್ಬಳಿಗೆ ತುಂಬಾ ಹಿಡಿಸುತ್ತೆ. ಆತನ ಡ್ರೆಸ್ ಸೆನ್ಸ್ ತುಂಬಾ ಚನ್ನಾಗಿದೆ ಅವನು ತುಂಬಾ ದುಂದರವಾಗಿದ್ದಾನೆ ಅಂತಾ ಅರುಣಾಳಿಗೆ ಹೇಳಿದ ಕಾವ್ಯ.
ನನಗೆ ಅವನ ಮೇಲೆ ಪ್ರೀತಿ ಆಗ್ತಿದೆಯೇನೆ.....? ಏನೇನೋ ಅನ್ನಿಸ್ತಿದೆ ಕಣೇ ಅವನನ್ನಾ ನೋಡ್ತಿದ್ದರೆ. ಆತನ ಹೆಸರು ಏನು ಅಂತಾ ಕೇಳೇ ಹೇಳೇ ಪ್ಲೀಸ್... ಪ್ಲೀಸ್...
ಅರುಣಾ ಅಣ್ಣಾ ನಿಮ್ಮ ಹೆಸರು? ನಂದೀಶ. ತುಂಬಾ ಚನ್ನಾಗಿದೆ ನಿಮ್ಮ ಹೆಸರು ಅಂತಾ ಹೇಳಿ ಅರುಣ ಕಾವ್ಯಳ ಮುಖ ನೋಡಿ ಸಣ್ಣ ಮುಗುಳುನಾಗೆ ಬೀರಿದಳು.
ಅಲ್ಲಿ ಎಲ್ಲವನ್ನು ನೋಡಿ ಊರು ಕಡೆ ಪ್ರಯಾಣ ಬೆಳಸುವು ಅಂತಾ ಎಲ್ಲರೂ ಪ್ಯಾಕ್ ಮಾಡ್ತಾ ಇದ್ದಾರೆ ಕಾವ್ಯ ಮಾತ್ರಾ ಆ ಹುಡುಗನ ನೆನಪಿನಲ್ಲೇ ಇದ್ದಳು. ಅರುಣಾ ಅವಳದು ಪ್ಯಾಕ್ ಮಾಡಿ ಅಮ್ಮಾ ತಾಯಿ ನಡೆ ಊರಿಗೆ ಹೋಗಲು ತಡವಾಗತ್ತೆ ಅಂತಾ ಎಳೆದುಕೊಂಡು ಹೋದಳು ಆ ದಿನ ರಾತ್ರಿ.
ಅವಳು ಅವನಿಗೆ ಫಸ್ಬೂಕ್ನಲ್ಲಿ ಫ್ರೆಂಡ್ ರಿಕ್ವಿವೆಸ್ಟ್ ಕಳಿಸಿಯೇ ಬಿಟ್ಟಳು. ಅವನು ಅದನ್ನಾ 15 ದಿನದ ಬಳಿಕ ನೋಡಿದನು ಅವರಿಬ್ಬರಿಬ್ಬರು facebookನಲ್ಲಿ ಮತ್ತೆ ಪರಿಯಾಚಯ ಮಾಡಿಕೊಂಡರು. ನಂಬರ್ ಪಡೆದುಕೊಂಡು ಇಬ್ಬರು ಆಗಾಗ ಮಾತಾಡಲು ಶುರು ಮಾಡಿದರು.
ಅವಳು ಮಾತ್ರ ಹಿಂದೆ ಮುಂದೆ ನೋಡದೆ ನಮ್ಮ ಮನೆಯವರು ನನ್ನನ್ನು ತುಂಬಾ ಮುದ್ದಿಸುತ್ತಾರೆ. ನನ್ನ ಮಾತನ್ನು ಕೇಳುತ್ತಾರೆ ಹಾಗಾಗಿ ನಂಗೆ ನನ್ನ ಮನೆಯವರ ಬಗ್ಗೆ ನಿನಗೆ ಚಿಂತೆ ಬೇಡಾ ನಾನು ಒಪ್ಪಿಸುವೆ. ನೀನು ನಿನ್ನ ಮನೆಯವರಿಗೆ ಹೇಳು ನಮ್ಮ ಬಗ್ಗೆ. ಸುಮ್ಮನೆ ಈ ತರ ಕದ್ದುಮುಚ್ಚಿ ಮಾತಾಡುವುದು ಸರಿ ಅಲ್ಲಾ ಅಂತಾ ಕಾವ್ಯ ಹೇಳಿದಳು .ಇಬ್ಬರು ಒಬ್ಬರನ್ನೊಬ್ಬರ ತುಂಬಾ ಇಷ್ಟಪಟ್ಟಿದ್ದರು.
ಅವಳು ಹೇಳುವ ಹಾಗೆ ಅವರ ಮನೆಗೆ ಆತನನ್ನು ಕರೆದುಕೊಂಡು ಹೋಗಿ ಪರಿಚಯಿಸಿದಳು. ಹುಡುಗ ಎಲ್ಲರಿಗೂ ಇಷ್ಟವಾದನು. ಅವರ ತಂದೆ ಜಮೀನು ಆಸ್ತಿ ಏನು ಮಾಡಿಕೊಂಡು ಇರುವೆ ಅಂತಾ ಕೇಳಿದರು.
8 ಎಕರೆ ತೋಟ ಇದೆ. ನಮ್ಮ ತಂದೆ ಮನೆ ಕಟ್ಟುವ ಕೆಲಸ ಮಾಡುತ್ತಾರೆ. ಅಮ್ಮ ಮನೆಯಲ್ಲೇ ಇರ್ತಾರೆ ನಾನು ಪ್ರವಾಸಕ್ಕೆ ಬಂದವರಿಗೆ ಮೈಸೂರಿನ ಬಗ್ಗೆ ಹೇಳುವುದು ಅಲ್ಲಿನ ವಿಷೇಶತೆಗಳನ್ನು ಹೇಳುತ್ತೇನೆ ಸರ್. ನನಗೆ ಅಕ್ಕಾ ತಂಗಿ ಯಾರು ಇಲ್ಲಾ ನಾನು ಒಬ್ಬನೇ. ಅವಳನ್ನು ಖುಷಿಯಿಂದ ನೋಡಿಕೊಳ್ಳುತ್ತೇನೆ ಸರ್. ಅವಳ ಚಿಂತೆ ನೀವು ಮಾಡುವುದೇ ಬೇಡಾ ಸರ್. ಅಷ್ಟು ಚನ್ನಾಗಿ ನೋಡಿ ಕೊಳ್ಳುವೆ ನಿಮ್ಮ ಮಗಳನ್ನು ಎಂದು ಹೇಳಿ ಅವರ ಪಾದಗಳಿಗೆ ನಮಸ್ಕರಿಸಿ ಹೋದನು ನಂದೀಶ್.
ಮಗಳನ್ನು ಕರೆದು ಅವನು ನನಗೆ ತುಂಬಾ ಹಿಡಿಸಿದ ಆದ್ರೆ ನೀನು ಇಲ್ಲಿ ಬಿಂದಾಸ್ ಹುಡುಗಿಯಾಗಿ ಬೆಳೆದಿರುವೆ ಅಲ್ಲಿ ಹೊಂದಿಕೊಂಡು ಹೋಗಲು ನಿನಗೆ ಅಗತ್ತಾ ಹೇಳು ನೋಡೋಣಾ ಅಂತಾ ಹೇಳಿದರು. ಅಪ್ಪಾ ಮುಂದೆ ಅವರು ಹೇಳಿದ ಹಾಗೆಯೇ ಇರುವೆ ಆದ್ರೆ ನನಗೆ ನಂಧೀಶ ಬೇಕೇಬೇಕಪ್ಪ ಎಂದು ಹಠ ಹಿಡಿದಳು. ಮಗಳ ಹಠದ ಮುಂದೆ ಅಪ್ಪಾ ಸೋಲಲೇ ಬೇಕಾಯಿತು.
ಮುಂದುವರಿಯುವುದು_________