ಮಕ್ಕಳು
ಮಕ್ಕಳು


ಒಂದು ಸಣ್ಣ ಪ್ರಯತ್ನ ಬೇಕು, ನಮ್ಮ ಊರು ಸ್ವಚ್ಛ ಊರಾಗಲು. ಆ ಊರಿನ ಕನ್ನಡ ಶಾಲೆಯ ಶಿಕ್ಷಕರು ಎಷ್ಟೇ ಸಲ ಹೇಳಿದರೂ ಆ ಊರಿನವರು ಶೌಚಾಲಯ ಕಟ್ಟಿಸಲಿಲ್ಲ. ಅಲ್ಲಿನ ಜನಕ್ಕೆ ಹೇಳಿ ಹೇಳಿ ಸಾಕಾಗಿತ್ತು.
ಅದು ಸಾಧ್ಯವಾಗದೇ ಆ ಶಿಕ್ಷಕರು ಮಕ್ಕಳನ್ನು ಕರೆದು ಶೌಚಾಲಯದ ಬಗ್ಗೆ ಅರಿವು ಮೂಡಿಸಿದರು.
ಮಲ ಮೂತ್ರ ವಿಸರ್ಜನೆಗೆ ಹೊರಗಡೆ ಹೋಗುವುದರಿಂದ ರೋಗಗಳು ಹೆಚ್ಚಾಗತ್ತೆ. ಆ ರೋಗಕ್ಕೆ ನೀವೇ ಬಲಿಯಾಗಬಹುದು. ಅದಕ್ಕಾಗಿ ನೀವು ಹೋರಾಡಿ, ನಮ್ಮ ಮನೆಗೆ ಶೌಚಾಲಯ ಬೇಕೇ ಬೇಕು ಎಂದು ಹಠ ಮಾಡಿ ಎಂದರು. ಹಾಗೆ ಮಾಡಿದರೆ ಪರಿಸರ ಮಾಲಿನ್ಯವನ್ನು ಸಹ ತಡೆಯಬಹುದು.
ಗುರುಗಳ ಮಾತಿಗೆ ಬೆಲೆ ಕೊಟ್ಟು. ಮಕ್ಕಳು ಎರಡು ದಿನ ಅಪ್ಪ ಅಮ್ಮಂದಿರ ಜೊತೆ ಜಗಳ ಮಾಡಿ ಶೌಚಾಲಯ ಕಟ್ಟಿಸಿದರು. ಅದರ ಬಗ್ಗೆ ಅಜ್ಜ-ಅಜ್ಜಿಯರಿಗೂ ಅನುಕೂಲವಾಯಿತು.
ಹೀಗೆಯೇ ದೊಡ್ಡವರಿಗೆ ಮಾಡಲು ಆಗದ ಕೆಲಸವನ್ನು ಮಕ್ಕಳಿಂದ ಮಾಡಿಸಿ ಗುರುಗಳು ಬೇಷ್ ಎನಿಸಿಕೊಂಡರು.