shristi Jat

Children Stories Drama Fantasy

4.5  

shristi Jat

Children Stories Drama Fantasy

ಕಾಲ್ಪನಿಕ ಕಥೆ

ಕಾಲ್ಪನಿಕ ಕಥೆ

4 mins
241


ಕಥೆ-1 ಅಜ್ಜಿಯ ಪ್ರೀತಿ


ಮಕ್ಕಳ ಪರಿಕ್ಷೆ ಮುಗಿದಿದ್ದವು ಬೆಸಿಗೆಯ ರಜೆಗಳು ಪ್ರಾರಂಭವಾಗಿದ್ದವು. ಮಕ್ಕಳು ಅಜ್ಜಿಯ ಊರಿಗೆ ಹೋಗವ ಯೋಜನೆ ಮುಂಚೆಯೇ ಹಾಕಿದ್ದರು. ತಾಯಿಯೂ ಸಹ ಮಕ್ಕಳಿಗೆ ರಜೆ ಕೋಡುವುದನ್ನೆ ಕಾಯಿತ್ತಿದ್ದಳು ತನ್ನ ತವರು ಮನೆಗೆ ಹೋಗುವ ತವಕ ಕೆಲಸದಿಂದ ಬೀಡುವು ಸಿಗುವುದಲ್ಲದೆ ತಾಯಿಯನ್ನು ನೋಡಿ ಅವಳ ಜೊತೆ ಸಮಯ ಕಳೆದಂತಾಗುತ್ತದೆ ಎಂಬ ಖುಷಿ ಇತ್ತ ಅಜ್ಜಿಯೂ ಸಹ ತನ್ನ ಮಗಳು ಮತ್ತು ಮೊಮ್ಮಕ್ಕಳು ಬರುವ ದಾರಿಯನ್ನೆ ಕಾಯುತಿದ್ದಳು. ಬೆಳಿಗ್ಗೆ ಊರಿಗೆ ಹೋಗುವ ತಯಾರಿ ನಡೆದಿತ್ತು. ತಾಯಿ ಬಟ್ಟೆಗಳ ಪ್ಯಾಕಿಂಗ್ ಮಾಡಿದಳು. ತಂದೆಯ ಒಪ್ಪಿಗೆಯ ಮೇರೆಗೆ ತಾಯಿ ಮತ್ತು ಮಕ್ಕಳು ಹೊರಡಲು ಸಿದ್ಧರಾದರು ತಂದೆ ಅವರನ್ನು ಕಾರಿನಲ್ಲಿ ಬಿಟ್ಟು ಬರುವುದಾಗಿ ಹೇಳಿದ.


ಅಜ್ಜಿಯ ಊರು ನೋಡಲು ಬಹಳ ಸುಂದರ ನಿರಾವರಿ ಪ್ರದೇಶ ಆಗಿದ್ದರಿಂದ ರಸ್ತೆಯ ಅಕ್ಕ ಪಕ್ಕ ಕವಳೆಯ ಗದ್ದೆಗಳು ಇನ್ನೇನು ಅಜ್ಜಿ ಮನೆ  ಸಮಿಪಿಸಿತ್ತು. ತಂದೆಯು ತಾಯಿ ಮತ್ತು ಮಕ್ಕಳಿಗೆ ಜಾಸ್ತಿ ದಿನ ಇಲ್ಲೆ ಉಳುಕೊಬೇಡಿ ಸ್ವಲ್ಪ ದಿನಗಳ ನಂತರ ನಾನು ಕರೆಯಲು ಬರುವೆ ಮಕ್ಕಳಿಗೆ ಯಾವುದಾದರೂ ಕೋಚಿಂಗ್ ಕ್ಲಾಸಸ್ ಗೆ ಹಾಕಿದರಾಯ್ತು ಸುಮ್ನೆ ಇಲ್ಲಿ ಸಮಯ ಹಾಳು ಮಾಡುತ್ತಾರೆ ಎಂದು ಹೆಂಡತಿಯ ಕಡೆಗೆ ಮುಖ ಮಾಡಿದ ಅವಳು ಸರಿ ಅಂದಳು.


ಕಾರಿನಿಂದ ಇಳಿಯುತ್ತಿದ್ದಂತೆಯೆ ಸೋದರ ಮಾವ ಮತ್ತು ಚಿಕ್ಕಮ್ಮ ಮಕ್ಕಳ್ಳನ್ನು ಹಿಗ್ಗಿನಿಂದ ಅಪ್ಪಿಕೋಳ್ಳಲು ಹೋದರು.

ಪ್ರಯಾಣ ಹೆಗಿತ್ತು ಭಾವ ಈ ಭಾರಿಯಾದರು ನಮ್ಮ ಊರಲ್ಲಿ ಕೆಲದಿನಗಳ ಕಾಲ ಉಳಿದುಕೋಳ್ಳುವಿರಾ ಅಂದುಕೋಳ್ಳುತ್ತೇನೆ ವ್ಯಂಗ್ಯ ಮಾತಾಡಿದಳು ಸೋಸೆ ನಳಿನಿ. ಅದಕ್ಕೆ ಭಾವ ಇಲ್ಲೆ ಮನೆ ಮಾಡುವ ಯೋಜನೆಯೊಂದಿಗೆ ಬಂದಿದ್ದೆನೆ ಇದಕ್ಕೆ ನಿನ್ನ ಅಭಿಪ್ರಾಯ ಎಂದು ನಕ್ಕನು 

ಎಲ್ಲರೂ ಮುಖ ತೋಳೆದು ಕೂಳಿತರು ನಳಿನಿ ಎಲ್ಲರಿಗೂ ಟೀ ತಂದು ಕೊಟ್ಟಳು.ಅಜ್ಜಿಗೆ ಮೊಮ್ಮಕ್ಕಳು ಅಳಿಯ ಮಗಳನ್ನು ಕಂಡು ಎಲ್ಲಿಲ್ಲದ ಸಂತೋಷ ಮೋಮ್ಮಕ್ಕಳು ಬಂದು ಅಜ್ಜಿಯನ್ನು ಅಪ್ಪಿದರು.

ಆಗಲೆ ತಾನು ವಾಪಸ್ಸು ಹೋರಡುವ ಬಗ್ಗೆ ಅಳಿಯ ಅತ್ತೆಯನ್ನು ಕೇಳಿದ ಆದರೆ ಅಜ್ಜಿ ಇವರು ಬರುವ ವಿಷಯ ತಿಳಿದು ಬಗೆ ಬಗೆಯ ಆಹಾರವನ್ನು ಮಾಡಿಸಿದ್ದಳು ಅದಕ್ಕೆ ಊಟ ಮಾಡಿಕೊಂಡು ಹೋಗುವಂತೆ ಹೇಳಿದಳು.

ಊಟ ಮುಗಿಸಿಕೊಂಡು ಅಳಿಯ ವಾಪಸ್ ತನ್ನ ಊರಿಗೆ ಹೋದನು.


ಮಕ್ಕಳು ಚಿಕ್ಕಮ್ಮನ ಮುಂದೆ ತಮ್ಮ ಶಾಲೆಯ ಬಗ್ಗೆ ಶಿಕ್ಷಕರ ಮತ್ತು ಸ್ನೇಹಿತರ ಬಗ್ಗೆ ಹೇಳಿ ಮಾತಿನ ಗುಪ್ಪೆಯನ್ನೆ ಅವಳ ಮುಂದೆ ಹಾಕಿದರು. ಅವರಿಗೆ ಪ್ರತಿಕ್ರಿಯಿಸುತ್ತಾ ಕೆಲಸವನ್ನು ಮಾಡುತ್ತಿದ್ದಳು.

ಅತ್ತ ತಾಯಿ ಮಗಳು ಮಂಚದ ಮೇಲೆ ಕುಳಿತು ಮಾತಿನಲ್ಲಿ ಮುಳುಗಿದ್ದರು ಸೋದರ ಮಾವ ಗದ್ದೆಯ ನೋಡಲು ಹೋದ.

ಇನ್ನೇನು ಸಂಜೆ ಆಯಿತು ಸೊಳ್ಳೆಗಳ ಅಬ್ಬರ ಶುರುವಾಗಿತ್ತು ಎಲ್ಲಾ ಮಕ್ಕಳನ್ನು ಅಜ್ಜಿ ಮನೆಯೋಳಗಡೆ ಬರಲು ಹೇಳಿದಳು.

ಸೋದರ ಮಾವ ಹೋರಗಡೆ ಸ್ವಲ್ಪ ಬೆಂಕಿ ಮಾಡಿ ಹೋಗೆಯನ್ನು ಎಬ್ಬಿಸಿದನು ಸೊಳ್ಳೆ ಕಡಿಮೆ ಆಗಲೆಂದು 

ಇತ್ತ ಮಕ್ಕಳು ಮನೆಯೋಳಗಡೆನೆ ಆಟ ಆಡುತ್ತಿದ್ದರು.ಇವರು ಬಂದಿರುವ ವಿಷಯ ತಿಳಿದು ಊರಲ್ಲಿರುವ ಕೆಲ ಸಂಬಂಧಿಕರು ಇವರನ್ನು ಮಾತನಾಡಿಸಲು ಬಂದಿದ್ದರು.

ರಾತ್ರಿ ಆಯ್ತು ಅಜ್ಜಿ ಸೊಳ್ಳೆಯ ಪರದೆಯನ್ನು ತೆಗೆದು ಕಿರಿ ಮಗಳಿಗೆ ಕಟ್ಟುವಂತೆ ಹೇಳಿದಳು. ಸ್ವಲ್ಪ ಸಮಯದ ನಂತರ ಊಟ ಮುಗಿಸಿಕೊಂಡು ಎಲ್ಲರು ಮಲಗಿದರು.

ಬೆಳಿಗ್ಗೆ ಆಯಿತು ಚಿಕ್ಕಮ್ಮನನ್ನು ಸತಾಯಿಸುತ್ತಾ ಮಕ್ಕಳು ಸ್ನಾನವನ್ನು ಮಾಡಿದರು. ಅಜ್ಜಿ ಬೇಗ ಯಾರು ಊಟ ಮಾಡುವರು ಅವರಿಗೆ ಸಂತೆಗೆ ಕರೆದುಕೊಂಡು ಪೇಟೆಗೆ ಹೋಗುವುದಾಗಿ ಹೇಳಿದಳು.


ಎಲ್ಲಾ ಮಕ್ಕಳು ತಯಾರಾಗಿ ಕೂತು ಬಿಟ್ಟರು. ಅಜ್ಜಿ ಮೋಮ್ಮಕ್ಕಳು ಮತ್ತು ಸೋದರ ಮಾವ ಸೇರಿ ಸಂತೆಗೆ ಹೋದರು. ಪೇಟೆಯಲ್ಲಿ ಮಕ್ಕಳು ಬೇಡಿರೊದ್ದನ್ನೆಲ್ಲಾ ಕೋಡಿಸಿದಳು ಮತ್ತು ಹಣ್ಣುಗಳ ಬುಟ್ಟಿಯನ್ನು ಖರಿದಿಸಿದ್ದಳು. ಪೇಟೆ ಸುತ್ತಾಡಿ ಮನೆಗೆ ಬಂದರು ಎಲ್ಲಾ ಸುಸ್ತಾಗಿದ್ದ ಅವರು ಬೇಗ ಮಲಗಿದರು.

ಮರುದಿನ ಭರತ್ ಸೋದರ ಮಾವನಿಗೆ ಗದ್ದೆಗೆ ಕರೆದುಕೊಂಡು ಹೋಗಲು ಹಟ ಮಾಡುತ್ತಿದ್ದನು ಅದನ್ನು ಕಂಡು ಅಜ್ಜಿ ಬೇಡ ಮಗ ಬಿಸಿಲು ಜಾಸ್ತಿ ಬಣ್ಣ ಸುಡುತ್ತದೆ. ನಿನ್ನ ತಂದೆ ಬೈತಾರೆ ಇನ್ನೊಂದು ಭಾರಿ ಊರಿಗೆ ಕಳಿಸುವದಿಲ್ಲ ಅಂತ ಸಮಜಾಯಿಸತೋಡಗಿದಳು.ಕೇಳದಕ್ಕಾಗಿ ಎಲ್ಲರೂ ಕೂಡಿ ಹೊಲಕ್ಕೆ ಹೋಗೋಣ ಗದ್ದೆಯಲ್ಲಿ ಕೂಡಲಾಗುವದಿಲ್ಲ ಹೊಲದಲ್ಲಿ ಮರದ ಕೆಳಗೆ ಕೂಡಬಹುದು ಊಟ ತೆಗೆದುಕೊಂಡು ಹೋದರಾಯ್ತು ಎಂದಾಗ ಒಪ್ಪಿದ ಭರತ್ ಎಲ್ಲರೂ ಸೇರಿ ಹೊಲಕ್ಕೆ ಹೋದರು ಹೊಲದ ವಾತಾವರಣ ಗಾಳಿ ನೋಡಿ ಮಕ್ಕಳು ಖುಷಿ ಪಟ್ಟರು ಅಷ್ಟೇ ಅಲ್ಲದೆ ಗದ್ದೆ ನೋಡಿಕೊಂಡು ಮನೆಗೆ ಬಂದರು. ಹೀಗೆ ಕೆಲ ದಿನಗಳು ಕಳೆದವು.


ಒಂದು ದಿನ ಬೆಳಿಗ್ಗೆ ಹಿರಿ ಮಗ ಸಂತೋಷ ಸಪ್ಪೆ ಮುಖ ಮಾಡಿ ಕುಳಿತಿದ್ದ ಚಿಕ್ಕಮ್ಮ ಕೇಳಿದರೆ ಏನು ಉತ್ತರಿಸಲಿಲ್ಲ ಕೋನೆಗೆ ನಳಿನಿ ತನ್ನಕ್ಕನಿಗೆ ಹೇಳಿದಳು. ಯಾರಿಗೂ ಬಾಯಿ ಬಿಡದ ಅವನು ಕೊನೆಗೆ ಹತ್ತನೆಯ ತರಗತಿಯ ಫಲಿತಾಂಶ ಇಂದು ತಿಳಿಯುವುದು ಎಂದು ಹೇಳಿದ ಎಲ್ಲರು ಎಷ್ಟಾದರೂ ಬರಲಿ ಬಿಡು ಚಿಂತೆ ಮಾಡಬೇಡ ಎಂದಾಗ ಸ್ವಲ್ಪ ಧೈರ್ಯ ಬಂದಿತು ಆದರೆ ಅಪ್ಪನನ್ನ ನೆನೆಸಿಕೊಂಡರೆ ಸಂತೋಷ್ ಗೆ ಭಯ ಆಗ್ತಾ ಇತ್ತು

ಸಾಯಂಕಾಲ ಫಲಿತಾಂಶ ಬಂತು 90% ತೆಗೆದುಕೊಂಡು ಪಾಸಾಗಿದ್ದ ಅಜ್ಜಿ ತುಂಬಾ ಖುಷಿ ಪಟ್ಟಳು ಜೊತೆಗೆ ಎಲ್ಲರೂ ಖುಷಿಪಟ್ಟರು ತಂದೆಗೆ ವಿಷಯ ತಿಳಿಸಿದರು.ತಂದೆಯು ಸಹ ತುಂಬಾ ಖುಷಿಪಟ್ಟನು ಹಾಗೂ ಅದರ ಜೊತೆಗೆ ನಾಳೆ ಮತ್ತೆ ತಮ್ಮ ಊರಿಗೆ ಕರೆದುಕೊಂಡು ಹೋಗಲು ಬರುವುದಾಗಿ ಹೇಳಿದನು. 

ಒಂದು ಕಡೆ ಖುಷಿ ಇನ್ನೋಂದು ಕಡೆ ಎಲ್ಲರಿಗೂ ದುಃಖ ಕೂಡ ಆಗಿತ್ತು. ಆಡಲು ಅಜ್ಜಿಯ ತೋಟ ಆಗಾಗ ಪೇಟೆ ಸುತ್ತುವುದು ಅಜ್ಜಿಯ ಮಾತು ಕೇಳದ ಮೋಮ್ಮಕ್ಕಳು ಗದ್ದೆಗೆ ಹೋಗುವುದು ಇದೆಲ್ಲಾ ಬಿಟ್ಟು ಹೋಗುವುದಕ್ಕೆ ಮಕ್ಕಳಿಗೆ ಮನಸ್ಸಿರಲಿಲ್ಲ ಹಾಗೂ ತಾಯಿಗು ಕೂಡ ಬೇಸರ ಆಗಿತ್ತು


ಮರುದಿನ ಬೆಳಿಗ್ಗೆ ತಂದೆ ಕರೆಯಲು ಬಂದ ಎಲ್ಲರು ಸಿದ್ಧರಾದರು ಬರುವಾಗಿನ ಖುಷಿ ಹೋಗುವಾಗ ಯಾರ ಮುಖದಲ್ಲಿ ಇರಲಿಲ್ಲ ಇತ್ತ ಅಜ್ಜಿಗೂ ಬೆಜಾರಾಗಿತ್ತು ಮತ್ತು ಅಜ್ಜಿಯ ಮಕ್ಕಳಿಗೂ 

ಕಿರಿ ಮೋಮ್ಮಗ ಭರತ್ ಅಜ್ಜಿ ನಾನು ನಿಜವಾಗ್ಲೂ ಮನೆ ಕಟ್ಟುವದಾದರೆ ಈ ಊರಲ್ಲೆ ಕಟ್ಟಿಸುವೆ ಅಂದಾಗ ಎಲ್ಲರೂ ನಕ್ಕರು ತಮ್ಮ ಊರಿಗೆ ತೇರಳಿದರು.


 ಕಥೆ 2 ತಿರುಕನ ಕನಸು

ಒಬ್ಬ ಶ್ರೀಮಂತ ಒಂದು ಜೂ ಗೆ ಪಕ್ಷಿಧಾಮಕ್ಕೆ ಹೋಗಿದ್ದ ಬಣ್ಣ ಬಣ್ಣದ ಪಕ್ಷಿಗಳು ಎಲ್ಲಾ ತರಹದ ಪಕ್ಷಿಗಳಿದ್ದವು ಅವನಿಗೆ ಆ ಪಕ್ಷಿಗಳಲ್ಲಿ ಒಂದು ಪಕ್ಷಿ ತುಂಬಾ ಇಷ್ಟವಾಗಿತ್ತು ಅದರ ಹತ್ತಿರ ಹೋಗಿ ಮಾತಾಡಿಸತೊಡಗಿದ ಸ್ವಲ್ಪ ಸಮಯದ ನಂತರ ಆ ಪಕ್ಷಿ ಅವನ ಹೆಸರು ಅವನ ಕುಟುಂಬ ಅವನ ಆಸ್ತಿ ಮತ್ತು ಅವನ ವ್ಯವಹಾರಗಳು ಎಲ್ಲವನ್ನೂ ಹೇಳತೊಡಗಿತು 

ಅಚ್ಚರಿಯಾದ ಆ ಮನುಷ್ಯ ಪಕ್ಷಿಯ ಬಗ್ಗೆ ಎಲ್ಲರನ್ನೂ ಕರೆದು ಹೇಳತೊಡಗಿದ ಪಕ್ಷಿಯು ಮಾತಾಡುತ್ತಿದೆ ಎಂದು ಅಲ್ಲಿ ಯಾರು ನಂಬಲಿಲ್ಲ ಅವರ ಮುಂದೆ ಮಾತಾಡಿಸಿದ ಆದರೆ ಆ ಪಕ್ಷಿ ಜನರು ಮುಂದೆ ಮಾತಾಡುತ್ತಿರಲಿಲ್ಲ.

ಕೊನೆಗೆ ಪಕ್ಷಿಧಾಮದ ವಾಚ್ ಮ್ಯಾನ್ ಬಂದು ನೋಡಿ ಸರ್ ಶ್ರೀಮಂತರ ತರ ಕಾಣ್ತಿರಾ. ಇಷ್ಟ ಆದರೆ ದುಡ್ಡು ಕೊಟ್ಟು ಮನೆಗೆ ತೆಗೆದುಕೊಂಡು ಹೋಗಿ ಸುಮ್ನೆ ಯಾಕೆ ಸುಳ್ಳು ಹೇಳುತ್ತಾ ಎಲ್ಲರ ಸಮಯ ಹಾಳೂ ಮಾಡುತ್ತಿದ್ದಿರಾ? ಇಷ್ಟು ದಿನದಿಂದ ಕಾಯ್ತಾ ಇದಿನಿ ಎಲ್ಲರನ್ನೂ ಬಿಟ್ಟು ನಿಮ್ಮ ಜೊತೆ ಪಕ್ಷಿ ಮಾತಾಡುತ್ತಾ ಹಣೆಯನ್ನು ಜಜ್ಜಿಕ್ಕೊಂಡನು ವಾಚ್ ಮ್ಯಾನ್ ಮುಂದೆ ಹೋದ ಮೇಲೆ ಆ ಪಕ್ಷಿ ಮತ್ತೆ ಅವನೊಂದಿಗೆ ಮಾತಾಡತೋಡಗಿತು.

ಏನೂ ತಿಳಿಯದ ಅವನು ಅದನ್ನು ಖರಿದಿಸಿ ಮನೆಗೆ ತೆಗೆದುಕೊಂಡು ಹೋದ ತನ್ನ ಕೋಣೆಯಲ್ಲಿ ಇಟ್ಟುಕೊಂಡ ಮುಂದೆ ಏನು ಆಗುತ್ತೆ ಅವನ ಜೊತೆ ಮತ್ತು ಹಿಂದೆ ಏನು ಆಗಿದೆ ಎಲ್ಲವನ್ನು ಅವನಿಗೆ ಹೇಳುತ್ತಿತ್ತು ಅವನನ್ನು ಬಿಟ್ಟು ಬೇರೆ ಯಾರೊಂದಿಗೂ ಮಾತಾಡುತ್ತಿರಲಿಲ್ಲ.

ಒಂದು ಮಧ್ಯಾಹ್ನ ಆ ಪಕ್ಷಿ ಅವನ ಮುಖದ ಮೇಲೆ ಕುಳಿತಂತಾಯಿತು ಏನೋ ಹೇಳಿದ ಹಾಗಾಯಿತು ಎದ್ದು ಕುಳಿತನು ಆದರೆ ಎದ್ದು ನೋಡಿದರೆ ಯಾರೂ ಇಲ್ಲ ಪಕ್ಷಿಯೂ ಇಲ್ಲ ಮಲಗಿರುವ ವ್ಯಕ್ತಿ ಶ್ರೀಮಂತನು ಅಲ್ಲ ಅವನು ಕಂಡಿದ್ದು ಒಂದು ಕನಸು



Rate this content
Log in