Gireesh pm Giree

Others Children

1  

Gireesh pm Giree

Others Children

ಗುರುವಿನ ಆದರ್ಶ

ಗುರುವಿನ ಆದರ್ಶ

2 mins
183



ಗುರುಬ್ರಹ್ಮ ಗುರುವಿಷ್ಣು ಗುರುದೇವೋ ಮಹೇಶ್ವರ ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ

ಜೀವನದಲ್ಲಿ ಗುರಿ ಮತ್ತು ಗುರು ತುಂಬಾ ಅಗತ್ಯ ಮತ್ತು ಅದು ಸತ್ಯ ಕೂಡ. ಗುರುವಿಗೆ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂಬ ದಾಸರ ಭಕ್ತಿ ಗೀತೆಗಳನ್ನು ನಾವೆಲ್ಲರೂ ಕೇಳಿಯೇ ಇರುತ್ತೇವೆ. ನಮ್ಮೊಳಗಿನ ವಿವೇಕದ ಸರಿ ತಪ್ಪನ್ನು ತಿದ್ದಿ ಆ ಕೆಲಸ ಮಾಡಬೇಡ ಈ ರೀತಿ ಮುಂದೆ ಸಾಗಿ ಸತ್ಯವಚನ ವೆಂದು ಮೀರಬಾರದು ಸುಳ್ಳು ಜೀವನದ ನಿಜವಾದ ಶತ್ರು ಎಂದು ತುಂಬಾ ಪ್ರೀತಿಯಿಂದ ತಿದ್ದ ನನ್ನ ಗುರುವಿಗೆ ನಾನು ಎಷ್ಟು ಹೊಗಳಿದರೂ ಅದು ಕಡಿಮೆಯೇ. ಮೇಲ್ನೋಟಕ್ಕೆ ಅವರ ಮುಖ ಕೆಂಪಾಗಿ ಕಂಡರು ಮನಸ್ಸು ಮಾತ್ರ ಅಪ್ಪಟ ಚಿನ್ನ.

ಬಾಲ್ಯದ ಅಂಗನವಾಡಿಯ ಗುರುಗಳಿಂದ ಮುಂದುವರೆದು ನನ್ನ ಈಗಿನವರೆಗೆ ವಿದ್ಯಾದಾನ ಮಾಡಿದ ಎಲ್ಲಾ ಶಿಕ್ಷಕರು ನನಗೆ ಬಹಳ ಅಚ್ಚುಮೆಚ್ಚು. ಕನ್ನಡ ಅಕ್ಷರಮಾಲೆಯ ಸೊಬಗನ್ನು ತುಂಬಾ ಸೊಗಸಾಗಿ ಕಲಿಸಿ 1, 2, 3 ಎಂಬ ಗಣಿತದ ಮೊದಲ ಮೆಟ್ಟಿಲನ್ನು ಜೋಪಾನವಾಗಿ ಹತ್ತಿಸಿ ಕಥೆ, ಕವಿತೆಗಳನ್ನು ರಸದೌತಣವಾಗಿ ವರ್ಣಿಸಿ ಮನದೊಳಗೆ ಸದಾ ಇರುವಂತೆ ವಿವರಿಸುವ ನನ್ನ ಪ್ರೀತಿಯ ಟೀಚರ್ ಇಂದಿಗೂ ನನ್ನ ನೆನಪಿನಲ್ಲಿದ್ದಾರೆ. ಅವರು ಒಂದು ಹಾಕಿದ ಭದ್ರಬುನಾದಿ ಇಂದಿಗೂ ಅದು ಹಾಗೆ ಭದ್ರವಾಗಿದೆ. ಆ ಬಾಲ್ಯದಲ್ಲಿ ತಿಂದ ಪೆಟ್ಟು ಆ ದಿನದಲ್ಲಿ ತುಂಬಾನೇ ಸಿಟ್ಟು ಭರಿಸುತಿತ್ತು ಆದರೆ ಅದಕ್ಕಿಂತ ಹೆಚ್ಚು ಭಯವೂ ಆಗುತ್ತಿತ್ತು. ಒಮ್ಮೊಮ್ಮೆ ಆ ಟೀಚರ್ ನಮಗಾಗಿ ನಡೆಸುತ್ತಿದ್ದ ಪರೀಕ್ಷೆಗೆ ಬೇಕಂತಲೇ ಗೈರಾದ ದಿನಚರಿ ಇದೆ . ಆ ದಿನ ನಮ್ಮ ನಲ್ಲಿ ತಲೆನೋವು ಎಂದು ನೆಪ ಅಪ್ಪ ಹೇಳುತ್ತಿದ್ದ ಪ್ರಸಂಗ ಇಂದು ನೆನಪಾಗುತ್ತದೆ ಆದರೆ ಆ ಕ್ಷಣಕ್ಕೆ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡರೆ ನೂರು ವರ್ಷ ಆಯಸ್ಸು ಎಂಬ ಗಾದೆ ಮಾತು ನನಗೆ ಆ ದಿನಗಳಲ್ಲಿ ಸರಿಯಾಗಿ ಅನ್ವಯಿಸುತ್ತಿತ್ತು. ಆದರೂ ಟೀಚರ್ ಖಂಡಿತ ಪರೀಕ್ಷೆ ಮಾಡದೆ ಯಾರನ್ನು ಬಿಟ್ಟು ಉದಾಹರಣೆಯೇ ಇಲ್ಲ.ಅವರು ಅನುಸರಿಸಿದ ನೀತಿ ಕೊಟ್ಟ ಶಿಕ್ಷೆ ನಮ್ಮ ಒಳಿತಿಗೆ ಎಂದು ನನಗೆ ಮುಂದೆ ತಿಳಿಯಿತು.

ಈಗಿನ ತನಕ ನನ್ನ ವಿದ್ಯಾಭ್ಯಾಸ ತುಂಬಾ ಜೋಪಾನವಾಗಿ ಮತ್ತು ಯಶಸ್ಸಾಗಿ ಸಾಗಲು ಶಿಕ್ಷಕರ ಪಾತ್ರ ಮಹತ್ವಪೂರ್ಣವಾಗಿದೆ. ಅವರ ಅರಿವಿನ ಜ್ಞಾನವನ್ನು ನಮಗೆ ಬೋಧಿಸುವ ಮೂಲಕ ಕಲ್ಲಾದ ನಮ್ಮಂಥವರನ್ನು ಒಂದು ಸುಂದರವಾದ ಶಿಲೆಯಾಗಿ ಮಾಡಿದ ಕೀರ್ತಿ ಶಿಕ್ಷಕರಿಗೆ ಸಲ್ಲುತ್ತದೆ.ಅವರ ಪ್ರತಿಯೊಂದು ಉಳಿಯೇಟು ಅಂದರೆ ಅವರು ಕೊಟ್ಟ ಪೆಟ್ಟು ಅವರ ನೀತಿ ಮಾತು ಜ್ಞಾನ ಹೇಳಿಕೊಟ್ಟ ಧೈರ್ಯ ಸ್ಥೈರ್ಯ ಓದುವ ಮನಸ್ಸು ಓದುವ ಹಂಬಲವನ್ನು ಹೆಚ್ಚಿಸಿ ವಿದ್ಯಾರ್ಥಿಯನ್ನು ವಿದ್ಯೆಯನ್ನು ತಿಳಿಯುವಂತೆ ಅಥವಾ ಅರ್ತಿಸುವಂತೆ ಮಾಡುತ್ತಾರೆ. ಅವರ ಜ್ಞಾನವೆಂಬ ಬೆಳಕಿನಿಂದ ನಮ್ಮ ಬಾಳನ್ನು ಬೆಳಗುತ್ತಾರೆ ಮತ್ತು ಬೆಳಗಿಸುತ್ತಾರೆ.

ಬಾಳ ಹಸನ ಗೊಳಿಸಿದ ನಮ್ಮ ಪ್ರತಿಭೆಯನ್ನು ಗುರುತಿಸಿ ಅದಕ್ಕೆ ಸೂಕ್ತ ವೇದಿಕೆ ಕಲ್ಪಿಸಿ ಗೌರವ ಕೀರ್ತಿಯನ್ನು ಹೆಚ್ಚಿಸಿದ ನನ್ನ ಎಲ್ಲ ಶಿಕ್ಷಕರಿಗೂ ನನ್ನ ಮನದ ಅಂತರಾಳದಿಂದ ಶಿಕ್ಷಕರ ದಿನಾಚರಣೆಯ ಶುಭಾಶಯಗಳು. ನಿಮ್ಮ ಕೊಡುಗೆ ಕುರಿತು ಎಷ್ಟೇ ಪದಕಟ್ಟಿ ಬರೆದರೂ ಅದು ಕಡಿಮೆಯೇ. ನಿಮ್ಮ ಈ ಸೇವೆಗೆ ನಾನೆಂದೂ ಚಿರಋಣಿ



Rate this content
Log in