ಅಪ್ಪ
ಅಪ್ಪ
ಮನದಲ್ಲಿ ಕನಸೆಂಬ ಆಸೆಯ ಗಿಡವನ್ನು ಚಿಗುರಿಸಿದ. ಸೋಲಲ್ಲಿ ಕುಗ್ಗದಂತೆ ಗೆಲುವಲ್ಲಿ ಕುಗ್ಗದಂತೆ ತಿಳಿಸಿದವ. ನಗುವು ಅಳುವು ಸಮವಾಗಿ ಸ್ವೀಕರಿಸಲು ತಿಳಿಸಿದವ. ಅಂಬಯ್ಯ ಆಟದ ಸವಿನೆನಪು ಹೋಗುವುದು ನನ್ನ ಕಣ್ಣಮುಂದೆ ಕೂಸುಮರಿ ಏರಿದೆ ನಿನ್ನ ಬೆನ್ನ ಹಿಂದೆ. ನಾ ಅತ್ತರೆ ನಿನ್ನ ಕೈಯ್ಯ ಅಕ್ಕರೆ ಎಂಬ ಆಸರೆ. ಜನಕ ನೀ ನಕ್ಕರೆ ಬಾಯಿಗೆ ಸಕ್ಕರೆ. ನನ್ನ ನಗುವಿನ ಗುಟ್ಟು ನೀನೆ ಅಪ್ಪ. ನಿನಗಾಗಿ ಏನನ್ನು ಮಾಡಿಲ್ಲ ಆಸ್ತಿ ಆದರೂ ನಿನಗೆ ನಾನೇ ಆಸ್ತಿ. ದಿನಾಲು ಚಂದದಿಂದ ಮಾತನಾದಿಸ್ತಿ ನಗಿಸ್ತಿ ಅದಕ್ಕಿಂತ ಬೇರೆ ನನಗೆ ಏನು ಬೇಕು ಅಪ್ಪ.? ಹಬ್ಬಕ್ಕೆ ಬಣ್ಣಬಣ್ಣದ ಬಟ್ಟೆ ಎಂದು ನೋಡಲು ಬಿಡನು ಖಾಲಿ ತಟ್ಟೆ. ನೀ ರಟ್ಟೆ ಮುರಿದು ತುಂಬಿಸುವೆ ನನ್ನ ಹೊಟ್ಟೆ. ಮುಖದ ಮೇಲೆ ಮೀಸೆ ಇದ್ದರೂ ಮಕ್ಕಳ ಆಸೆಯ ಎಂದೂ ಮಾಡಿಲ್ಲ ನಿರಾಸೆ ಎಂದು ನಾ ಹೆಚ್ಚಾಗಿ ಆಗಿಲ್ಲ ಹತಾಶೆ.ನೀನು ಕೊಟ್ಟ ಬಿಟ್ಟು ನನಗೆ ಸ್ಫೂರ್ತಿಯಾಯಿತು ನೀನು ಹಾಕಿದ ಗೆರೆ ನನ್ನ ಸಾಧನೆಗೆ ಮೆಟಲು ಆಯಿತು . ಅಪ್ಪ ನನಗೆ ಎಲ್ಲಾ ನೀನೇ ನಿನಗೆಂದು ನಾನೇ.
